ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?

ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?

 ಈ ಕೆಳಗಿನ ಕಾರಣಗಳಿಂದಾಗಿ, ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲ:

  1.  1. ದೇವರಿಗೆ ವಿಧೇಯತೆ. ದೇವರ ಸೇವಕರು ‘ಕತ್ತಿಗಳನ್ನು ಗುಳಗನ್ನಾಗಿ ಮಾಡುವರು’ ಮತ್ತು ಅವರು ‘ಯುದ್ಧಾಭ್ಯಾಸ ನಡೆಸುವುದೇ ಇಲ್ಲ’ ಎಂದು ಬೈಬಲ್‌ ಹೇಳುತ್ತದೆ.​—ಯೆಶಾಯ 2:4.

  2.  2. ಯೇಸುವಿಗೆ ವಿಧೇಯತೆ. ಯೇಸು ಅಪೊಸ್ತಲ ಪೇತ್ರನಿಗೆ ಹೇಳಿದ್ದು, “ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು.” (ಮತ್ತಾಯ 26:52) ಹೀಗೆ ಯೇಸು ತನ್ನ ಹಿಂಬಾಲಕರು ಯುದ್ಧ ಶಸ್ತ್ರಾಸ್ತ್ರಗಳನ್ನು ಬಳಸಬಾರದೆಂದು ತೋರಿಸಿದ್ದಾನೆ.

     ಯೇಸುವಿನ ಶಿಷ್ಯರು ‘ಲೋಕದ ಭಾಗವಾಗಿರಬಾರದು’ ಎಂಬ ಆತನ ಆಜ್ಞೆಗೆ ವಿಧೇಯರಾಗಿ, ರಾಜಕೀಯ ವಿಷಯಗಳಲ್ಲಿ ತಾಟಸ್ಥ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. (ಯೋಹಾನ 17:16) ಅವರು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರತಿಭಟಿಸುವುದಿಲ್ಲ ಅಥವಾ ಸೇನೆಗೆ ಸೇರಬೇಕೆಂದು ಬಯಸುವವರ ವಿಷಯದಲ್ಲಿ ತಲೆ ಹಾಕುವುದಿಲ್ಲ.

  3.  3. ಇತರರ ಕಡೆಗಿನ ಪ್ರೀತಿ. ಯೇಸು ತನ್ನ ಶಿಷ್ಯರಿಗೆ “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದು ಆಜ್ಞಾಪಿಸಿದನು. (ಯೋಹಾನ 13:​34, 35) ಈ ಆಜ್ಞೆಯನ್ನು ಪಾಲಿಸಿ ಅವರು ಅಂತರರಾಷ್ಟ್ರೀಯ ಸಹೋದರತ್ವದಲ್ಲಿ ಆನಂದಿಸುತ್ತಾ, ತಮ್ಮ ಸಹೋದರ ಸಹೋದರಿಯರ ವಿರುದ್ಧ ಯಾರೂ ಎಂದೂ ಯುದ್ಧ ನಡೆಸುವುದಿಲ್ಲ.​—1 ಯೋಹಾನ 3:​10-12.

  4.  4. ಆದಿಕಾಲದ ಕ್ರೈಸ್ತರ ಉದಾಹರಣೆ. ಎನ್‌ಸೈಕ್ಲೋಪೀಡಿಯ ಆಫ್‌ ರಿಲೀಜಿಯನ್‌ ಆ್ಯಂಡ್‌ ವಾರ್‌ ಹೇಳುವುದು: “ಯೇಸುವಿನ ಆದಿ ಶಿಷ್ಯರು ಯುದ್ಧ ಮತ್ತು ಮಿಲಿಟರಿ ಸೇವೆಯನ್ನು ತಿರಸ್ಕರಿಸಿದ್ದರು” ಏಕೆಂದರೆ ಅವು “ಯೇಸು ಕಲಿಸಿದ ಪ್ರೀತಿಯ ಬೋಧೆಗೆ ಮತ್ತು ವೈರಿಗಳನ್ನು ಪ್ರೀತಿಸಬೇಕು ಎಂಬ ಆಜ್ಞೆಗೆ ವಿರುದ್ಧವಾಗಿವೆ” ಎನ್ನುವುದನ್ನು ಶಿಷ್ಯರು ಗುರುತಿಸಿದ್ದರು. ಅದಲ್ಲದೆ, ಜರ್ಮನಿಯ ದೇವತಾಶಾಸ್ತ್ರಜ್ಞರಾದ ಪೀಟರ್‌ ಮೈನ್‌ ಹೋಲ್ಟ್‌ರವರು ಯೇಸುವಿನ ಆರಂಭದ ಶಿಷ್ಯರ ಬಗ್ಗೆ ಹೀಗೆ ಹೇಳಿದ್ದಾರೆ: “ಕ್ರೈಸ್ತನಾಗಿರುವುದೂ ಸೈನಿಕನಾಗಿರುವುದೂ ಪರಸ್ಪರ ವಿರುದ್ಧವಾದ ಸಂಗತಿಯಾಗಿ ಪರಿಗಣಿಸಲ್ಪಡುತ್ತಿತ್ತು”.

ಸಮಾಜಕ್ಕೆ ಕೊಡುಗೆ

 ಯೆಹೋವನ ಸಾಕ್ಷಿಗಳು ಸಮಾಜಕ್ಕೆ ಬೇಕಾದಂಥ ಮತ್ತು ತಾವು ವಾಸಿಸುವ ದೇಶದ ಭದ್ರತೆಗೆ ಹಾನಿ ಮಾಡದಂಥ ಜನರಾಗಿದ್ದಾರೆ. ಬೈಬಲ್‌ನಲ್ಲಿರುವ ಈ ಕೆಳಗಿನ ಆಜ್ಞೆಗಳಿಗೆ ಹೊಂದಿಕೆಯಲ್ಲಿ ನಾವು ಸರ್ಕಾರದ ಅಧಿಕಾರವನ್ನು ಮಾನ್ಯ ಮಾಡುತ್ತೇವೆ:

  •   “ಮೇಲಧಿಕಾರಿಗಳಿಗೆ ಅಧೀನನಾಗಿರಲಿ.”​—ರೋಮನ್ನರಿಗೆ 13:1.

  •   “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.”​—ಮತ್ತಾಯ 22:21.

 ಆದ್ದರಿಂದಲೇ ನಾವು ನಿಯಮಗಳನ್ನು ಪಾಲಿಸುತ್ತೇವೆ, ತೆರಿಗೆಗಳನ್ನು ಕಟ್ಟುತ್ತೇವೆ ಮತ್ತು ಸಾಮಾಜಿಕ ಒಳಿತಿಗಾಗಿ ಸರ್ಕಾರ ಹಜ್ಜೆಗಳನ್ನು ತೆಗೆದುಕೊಳ್ಳುವಾಗ ಅದಕ್ಕೆ ಸಹಕರಿಸುತ್ತೇವೆ