ಮಾಹಿತಿ ಇರುವಲ್ಲಿ ಹೋಗಲು

ಕೈದಿಗಳಿಂದ ಕಲಿತ

ಕೈದಿಗಳಿಂದ ಕಲಿತ

ಒಬ್ಬ ವ್ಯಕ್ತಿ 2011 ರಲ್ಲಿ ಎರಿಟ್ರೀಯದಿಂದ ನಾರ್ವೆಗೆ ನಿರಾಶ್ರಿತನಾಗಿ ಹೋದ. ಯೆಹೋವನ ಸಾಕ್ಷಿಗಳು ಅವನನ್ನು ಭೇಟಿಮಾಡಿದಾಗ ‘ನಮ್ಮೂರಲ್ಲಿ ನಾನು ಆರ್ಮಿಯಲ್ಲಿದಾಗ ನಿಮ್ಮ ಜನರನ್ನ ನೋಡಿದ್ದೆ. ಆರ್ಮಿಗೆ ಸೇರಿಕೊಳ್ಳಲು ಅವರಿಗೆ ತುಂಬ ಒತ್ತಾಯ ಮಾಡಿದ್ರು, ಹಿಂಸೆ ಕೊಟ್ರು. ಆದರೂ ಸಾಕ್ಷಿಗಳು ಬೈಬಲ್‌ ಹೇಳುವ ಪ್ರಕಾರ ನಡೆಯೋದ್ರಿಂದ ಆರ್ಮಿಗೆ ಸೇರಿಕೊಳ್ಳಲಿಲ್ಲ’ ಅಂತ ಹೇಳಿದ.

ಒಂದುಸಲ ಅವನ ಜೀವನದಲ್ಲಿ ನಡೆದ ಏನೋ ಒಂದು ಘಟನೆಯಿಂದ ಅವನು ಜೈಲಿಗೆ ಹೋಗಬೇಕಾಯ್ತು. ಆ ಜೈಲಲ್ಲಿ ಯೆಹೋವನ ಸಾಕ್ಷಿಗಳಾದ ಪೌಲಸ್‌ ಎಸಾಯು, ನೆಗೆಡೆ ಟೆಕ್ಲೆಮರ್ಯಾಮ್‌, ಐಸಾಕ್‌ ಮೊಗೊಸ್‌ ಇದ್ರು. ಇವರು 1994 ರಿಂದ ತಮ್ಮ ನಂಬಿಕೆಗೋಸ್ಕರ ಜೈಲಲ್ಲಿದ್ರು.

ಆ ವ್ಯಕ್ತಿ ಜೈಲಲ್ಲಿದ್ದಾಗ ಸಾಕ್ಷಿಗಳು ಏನು ಕಲಿಸುತ್ತಾರೋ ಅದೇ ಪ್ರಕಾರ ನಡೆಯೋದನ್ನು, ಪ್ರಾಮಾಣಿಕವಾಗಿ ಇರೋದನ್ನು, ಬೇರೆ ಕೈದಿಗಳ ಜೊತೆ ಊಟ ಹಂಚಿಕೊಳ್ಳೋದನ್ನು, ಪ್ರತಿದಿನ ಒಟ್ಟಿಗೆ ಬೈಬಲ್‌ ಕಲಿಯೋದನ್ನು ಮತ್ತು ಬೈಬಲ್‌ ಕಲಿಯೋಕೆ ಬೇರೆಯವರನ್ನು ಕೂಡ ಕರೆಯೋದನ್ನ ಕಣ್ಣಾರೆ ನೋಡಿದ್ದ. ‘ಇನ್ನು ಮುಂದೆ ನಾನು ಯೆಹೋವನನ್ನು ಆರಾಧಿಸುವುದಿಲ್ಲ’ ಅಂತ ಬರೆದಿದ್ದ ಪೇಪರಿಗೆ ಸಹಿ ಹಾಕಿದ್ರೆ ನಿಮ್ಮನ್ನು ಬಿಡುಗಡೆ ಮಾಡ್ತಿವಿ ಅಂತ ಹೇಳಿದ್ರೂ ಸಾಕ್ಷಿಗಳು ಅದಕ್ಕೆ ಒಪ್ಪಿಕೊಳ್ಳದೇ ಇರೋದನ್ನು ಸಹ ಅವನು ಗಮನಿಸಿದ್ದ.

ಈ ಎಲ್ಲ ವಿಷಯ ಆ ವ್ಯಕ್ತಿಯ ಮನಸ್ಪರ್ಶಿಸಿತು. ಆ ಒಳ್ಳೇ ಮನಸ್ಸಿನ ವ್ಯಕ್ತಿ ನಾರ್ವೆಯಲ್ಲೇ ಮನೆ ಮಾಡ್ಕೊಂಡಾಗ ಯಾಕೆ ಯೆಹೋವನ ಸಾಕ್ಷಿಗಳಿಗೆ ಬಲವಾದ ನಂಬಿಕೆ ಇದೆ ಅಂತ ತಿಳಿದುಕೊಳ್ಳಲು ಇಷ್ಟಪಟ್ಟ. ಹಾಗಾಗಿ ಯೆಹೋವನ ಸಾಕ್ಷಿಗಳು ಅವನನ್ನು ಭೇಟಿಮಾಡಿದಾಗ ಕೂಡಲೇ ಬೈಬಲ್‌ ಸ್ಟಡಿಗೆ ಒಪ್ಕೊಂಡ, ಅವರ ಕೂಟಗಳಿಗೂ ಹೋದ.

2018 ರ ಸೆಪ್ಟೆಂಬರ್‌ನಲ್ಲಿ ಅವನು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿ ಆದ. ಈಗ ಅವನು ಎರಿಟ್ರಿಯ ಮತ್ತು ಸುಡಾನಿಂದ ಬಂದಿರುವ ಜನರನ್ನು ಭೇಟಿಮಾಡಲಿಕ್ಕೆ ತುಂಬ ಪ್ರಯತ್ನಮಾಡ್ತಾನೆ. ಬೈಬಲ್‌ ಸ್ಟಡಿ ಮಾಡಿ ಬಲವಾದ ನಂಬಿಕೆ ಬೆಳೆಸಿಕೊಳ್ಳಲು ಅವರಿಗೆ ಸಹಾಯಮಾಡ್ತಾನೆ.