ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಬೇಗ ಗುಣ ಆಗ್ತಾರೆ

ಯೆಹೋವನ ಸಾಕ್ಷಿಗಳು ಬೇಗ ಗುಣ ಆಗ್ತಾರೆ

ಆಸ್ಟ್ರೇಲಿಯ: “ಯೆಹೋವನ ಸಾಕ್ಷಿಗಳು ಕೆಲವು ಧಾರ್ಮಿಕ ಕಾರಣಗಳಿಂದ ರಕ್ತ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೂ ರಕ್ತ ತೆಗೆದುಕೊಳ್ಳುವ ಬೇರೆ ರೋಗಿಗಳಿಗಿಂತ ಇವರು ಬೇಗ ಚೇತರಿಸಿಕೊಳ್ಳುತ್ತಾರೆ” ಎಂದಿತು ದ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ದಿನಪತ್ರಿಕೆ. (ಅಕ್ಟೋಬರ್‌ 2, 2012)

ಸಿಡ್ನಿ ಮೆಡಿಕಲ್‌ ಸ್ಕೂಲ್‌ನ (ಸಿಡ್ನಿ ವಿಶ್ವವಿದ್ಯಾನಿಲಯ) ಕ್ಲಿನಿಕಲ್‌ ಪ್ರೊಫೆಸರ್‌ ಜೇಮ್ಸ್‌ ಇಸ್‌ಬಿಸ್ಟರ್‌ರವರ ಅಭಿಪ್ರಾಯವನ್ನು ಕೂಡ ಆ ದಿನಪತ್ರಿಕೆ ವರದಿಸಿತು: “ರೋಗಿಗಳಿಗೆ [ಯೆಹೋವನ ಸಾಕ್ಷಿಗಳಿಗೆ] ರಕ್ತವನ್ನು ಕೊಡದೆ ಬೇರೆ ಉತ್ತಮ ಚಿಕಿತ್ಸೆಯನ್ನು ಅಂದರೆ ಅವರ ರಕ್ತವನ್ನು ವರ್ಧಿಸುವ ಚಿಕಿತ್ಸೆಯನ್ನು ವೈದ್ಯರು ನೀಡಿದರು. ಇದರಿಂದ ಒಳ್ಳೇ ಫಲಿತಾಂಶ ಬಂತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ತೆಗೆದುಕೊಂಡ ಇತರ ರೋಗಿಗಳಿಗೆ ಹೋಲಿಸಿದರೆ ಇವರಲ್ಲಿ [ಯೆಹೋವನ ಸಾಕ್ಷಿಗಳಲ್ಲಿ] ಬದುಕಿ ಉಳಿದವರ ಪ್ರಮಾಣ ಹೆಚ್ಚಿತ್ತು, ಇವರು ಆಸ್ಪತ್ರೆಯಲ್ಲಿ ಆಗಲಿ ಅಥವಾ ತುರ್ತು ನಿಗಾ ಘಟಕದಲ್ಲಿ ಜಾಸ್ತಿ ದಿನ ಉಳಿಯಬೇಕಾಗಿ ಬರಲಿಲ್ಲ ಎನ್ನುತ್ತಾರೆ ಪ್ರೊಫೆಸರ್‌ ಇಸ್‌ಬಿಸ್ಟರ್‌.”

ಇನ್ನೊಂದು ಪತ್ರಿಕೆ ಆರ್ಕೈವ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌ (ಆಗಸ್ಟ್‌ 13-27, 2012) ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯೆಹೋವನ ಸಾಕ್ಷಿಗಳ ಬಗ್ಗೆ ಹೀಗೆ ಹೇಳಿತು: “ರಕ್ತ ತೆಗೆದುಕೊಂಡ ರೋಗಿಗಳಿಗೆ ಹೋಲಿಸಿದರೆ ಯೆಹೋವನ ಸಾಕ್ಷಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರ ಅಷ್ಟೇನು ತೊಂದರೆಗಳು ಬರಲಿಲ್ಲ ಮತ್ತು ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ಜಾಸ್ತಿ ದಿನ ಇರಲಿಲ್ಲ.”