ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಮಾರ್ಕ 1:15—‘ದೇವರ ರಾಜ್ಯ ಸಮೀಪಿಸಿತು’

ಮಾರ್ಕ 1:15—‘ದೇವರ ರಾಜ್ಯ ಸಮೀಪಿಸಿತು’

 “ನಿರ್ಧರಿಸಿದ ಸಮಯ ಬಂದಿದೆ. ದೇವರ ಆಳ್ವಿಕೆ ಹತ್ರ ಇದೆ. ಪಶ್ಚಾತ್ತಾಪಪಡಿ, ಸಿಹಿಸುದ್ದಿಯಲ್ಲಿ ನಂಬಿಕೆ ಇಡಿ.”—ಮಾರ್ಕ 1:15, ಹೊಸ ಲೋಕ ಭಾಷಾಂತರ.

 ‘ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯ ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ.’—ಮಾರ್ಕ 1:15, ಸತ್ಯವೇದವು.

ಮಾರ್ಕ 1:15—ಅರ್ಥ

 ದೇವರ ರಾಜ್ಯ “ಸಮೀಪಿಸಿತು” ಅಂದ್ರೆ ದೇವರ ಆಳ್ವಿಕೆ a ‘ಹತ್ರದಲ್ಲೇ ಇದೆ’ ಅಂತ ಯೇಸು ಕ್ರಿಸ್ತ ಹೇಳಿದನು. ಯಾಕಂದ್ರೆ ಆ ಆಳ್ವಿಕೆಯಲ್ಲಿ ರಾಜನಾಗಲಿದ್ದ ಯೇಸು ಅಲ್ಲೇ ಇದ್ದನು.

 ಯೇಸುವಿನ ಮಾತಿನ ಅರ್ಥ ಈಗಾಗಲೇ ದೇವರ ಆಳ್ವಿಕೆ ಆರಂಭವಾಗಿದೆ ಅಂತಲ್ಲ. ಯಾಕಂದ್ರೆ ದೇವರ ಆಳ್ವಿಕೆ ಮುಂದೆ ಬರಲಿದೆ ಅಂತ ಯೇಸುವೇ ತನ್ನ ಶಿಷ್ಯರಿಗೆ ನಂತರ ಹೇಳಿದನು. (ಅಪೊಸ್ತಲರ ಕಾರ್ಯ 1:6, 7) ಆದ್ರೆ ದೇವರ ಆಳ್ವಿಕೆಯ ರಾಜನಾಗಿ b ಅವನು ಯಾವ ವರ್ಷ ನೇಮಕ ಹೊಂದುತ್ತಾನೆ ಅಂತ ಬೈಬಲಿನಲ್ಲಿ ಮೊದಲೇ ತಿಳಿಸಿತ್ತೋ, ಅದೇ ವರ್ಷ ಅವನು ಬಂದ. ಆ ವರ್ಷದಿಂದ ಅವನು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಎಲ್ಲ ಜನರಿಗೆ ಸಾರಲು ಶುರುಮಾಡಿದ. ಹಾಗಾಗಿನೇ “ನಿರ್ಧರಿಸಿದ ಸಮಯ ಬಂದಿದೆ” ಅಂತ ಯೇಸು ಹೇಳಿದ.—ಲೂಕ 4:16-21, 43.

 ಜನ ದೇವರ ಆಳ್ವಿಕೆಯ ಸಿಹಿಸುದ್ದಿಯಿಂದ ಪ್ರಯೋಜನ ಪಡೆಯಬೇಕಾದ್ರೆ ಅವರು ಹಿಂದೆ ಪಾಪ ಮಾಡಿದಕ್ಕಾಗಿ ಪಶ್ಚಾತಾಪಪಡಬೇಕಿತ್ತು ಮತ್ತು ದೇವರ ನಿಯಮಗಳಿಗೆ ಅನುಸಾರ ಜೀವನ ಮಾಡಬೇಕಿತ್ತು. ಹೀಗೆ ಪಶ್ಚಾತಾಪಪಟ್ಟ ಜನ ದೇವರ ಆಳ್ವಿಕೆಯ ಸಿಹಿಸುದ್ದಿಯಲ್ಲಿ ತಮಗೆ ನಂಬಿಕೆ ಇದೆ ಅಂತ ತೋರಿಸಿಕೊಟ್ಟರು.

ಮಾರ್ಕ 1:15—ಸಂದರ್ಭ

 ಈ ಮಾತುಗಳನ್ನು ಯೇಸು ಗಲಿಲಾಯದಲ್ಲಿ ಸೇವೆ ಶುರುಮಾಡಿದಾಗ ಹೇಳಿದನು. ಇದರ ಬಗ್ಗೆನೇ ಮತ್ತಾಯ 4:17 ರಲ್ಲಿ “ಆ ಸಮಯದಿಂದ” ಯೇಸು ದೇವರ ಆಳ್ವಿಕೆಯ ಬಗ್ಗೆ ಸಾರಿದನು ಅಂತ ಹೇಳ್ತದೆ. ಯೇಸುವಿನ ಸೇವೆಯ ಮುಖ್ಯ ವಿಷಯ ದೇವರ ಆಳ್ವಿಕೆ. ನಿಜ ಏನಂದ್ರೆ, 4 ಸುವಾರ್ತೆಗಳಲ್ಲಿ c ದೇವರ ಆಳ್ವಿಕೆ ಅಥವಾ ದೇವರ ರಾಜ್ಯ ಅನ್ನೋ ಪದ 100ಕ್ಕಿಂತ ಹೆಚ್ಚು ಸಲ ಇದೆ. ಯೇಸುನೇ ಹೆಚ್ಚಾಗಿ ಈ ಪದವನ್ನು ಉಪಯೋಗಿಸಿದ್ದು. ಅವನು ಬೇರೆ ವಿಷಯಕ್ಕಿಂತ ಹೆಚ್ಚಾಗಿ ದೇವರ ಆಳ್ವಿಕೆ ಬಗ್ಗೆನೇ ಮಾತಾಡಿದನು ಅಂತ ಬೈಬಲ್‌ ದಾಖಲೆ ತೋರಿಸುತ್ತೆ.

ಮಾರ್ಕ ಅಧ್ಯಾಯ 1 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.

a ದೇವರ ಆಳ್ವಿಕೆ ಅಂದ್ರೆ ಸ್ವರ್ಗದಲ್ಲಿರುವ ಸರ್ಕಾರ. ದೇವರು ತನ್ನ ಇಷ್ಟವನ್ನು ಭೂಮಿಯಲ್ಲಿ ನೆರವೇರಿಸುವುದಕ್ಕೆ ಆ ಸರ್ಕಾರವನ್ನು ಸ್ಥಾಪಿಸಿದ್ದಾನೆ. (ದಾನಿಯೇಲ 2:44; ಮತ್ತಾಯ 6:10) ಇದರ ಬಗ್ಗೆ ಹೆಚ್ಚು ವಿಷಯ ತಿಳಿಯಲು “ದೇವರ ಆಳ್ವಿಕೆ ಅಂದರೇನು?” ಲೇಖನ ನೋಡಿ.

b ಯೇಸು ಮೆಸ್ಸೀಯನಾಗಿ ಅಂದ್ರೆ ದೇವರ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾನೆ ಅಂತ ಬೈಬಲಲ್ಲಿ ಮುಂಚೆನೇ ತಿಳಿಸಿತ್ತು. ಈ ಪಾತ್ರವನ್ನು ವಹಿಸಲಿಕ್ಕೆ ಅವನು ರಾಜ ಆಗಲೇಬೇಕಿತ್ತು. ಯೇಸುವೇ ಮೆಸ್ಸೀಯ ಅಂತ ಬೈಬಲ್‌ ಪ್ರವಾದನೆಗಳು ತೋರಿಸುತ್ತವೆ. ಇದರ ಬಗ್ಗೆ ಹೆಚ್ಚು ತಿಳಿಯಲು “ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?” ನೋಡಿ.

c ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ (ಹೊಸ ಒಡಂಬಡಿಕೆ) ಮೊದಲ 4 ಪುಸ್ತಕಗಳಿಗೆ ಸುವಾರ್ತೆಗಳು ಅಂತ ಹೆಸರು. ಇದ್ರಲ್ಲಿ ಯೇಸುವಿನ ಜೀವನಚರಿತ್ರೆ ಮತ್ತು ಸೇವೆಯ ಬಗ್ಗೆ ಮಾಹಿತಿಗಳಿವೆ.