ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಪುಸ್ತಕಗಳ ಪರಿಚಯ

ಈ ಚಿಕ್ಕ ವಿಡಿಯೋಗಳು ಬೈಬಲ್‌ ಪುಸ್ತಕಗಳ ಹಿನ್ನಲೆಯ ಬಗ್ಗೆ ಮತ್ತು ಅದರಲ್ಲಿರುವ ವಿಷಯಗಳ ಬಗ್ಗೆ ತಿಳಿಸುತ್ತದೆ. ನಿಮ್ಮ ಬೈಬಲ್‌ ಓದುವಿಕೆ ಮತ್ತು ವೈಯಕ್ತಿಕ ಅಧ್ಯಯನವನ್ನು ಚೆನ್ನಾಗಿ ಮಾಡಲು ಈ ವಿಡಿಯೋಗಳನ್ನು ಬಳಸಿ.

ಆದಿಕಾಂಡ ಪುಸ್ತಕದ ಪರಿಚಯ

ಆದಿಕಾಂಡ ಪುಸ್ತಕ ಮನುಷ್ಯ ಸೃಷ್ಟಿಯ ಆರಂಭ ಹೇಗಾಯ್ತು ಮತ್ತು ನಮ್ಮೆಲ್ಲರ ನೋವು ಮರಣಕ್ಕೆ ನಿಜ ಕಾರಣವೇನು ಅನ್ನೋ ಪ್ರಾಮುಖ್ಯ ಸತ್ಯ ತಿಳಿಸುತ್ತೆ.

ವಿಮೋಚನಕಾಂಡ ಪುಸ್ತಕದ ಪರಿಚಯ

ದೇವರು ಇಸ್ರಾಯೇಲ್ಯರನ್ನು ಈಜಿಪ್ಟಿನ ಗುಲಾಮಗಿರಿಯಿಂದ ಬಿಡಿಸಿ ಅವರನ್ನು ತನ್ನ ಜನರಾಗಿ ಮಾಡಿಕೊಂಡನು.

ಯಾಜಕಕಾಂಡ ಪುಸ್ತಕದ ಪರಿಚಯ

ಯಾಜಕಕಾಂಡ ಪುಸ್ತಕ ದೇವರ ಪವಿತ್ರತೆ ಬಗ್ಗೆ ಮತ್ತು ಪವಿತ್ರರಾಗಿರೋದು ಯಾಕೆ ತುಂಬ ಮುಖ್ಯ ಅನ್ನೋದರ ಬಗ್ಗೆ ಏನು ಹೇಳುತ್ತೆ ಅಂತ ನೋಡಿ.

ಅರಣ್ಯಕಾಂಡ ಪುಸ್ತಕದ ಪರಿಚಯ

ಯೆಹೋವ ದೇವರಿಗೆ ಮತ್ತು ಆತನು ನೇಮಿಸಿದ ಮೇಲ್ವಿಚಾರಕರಿಗೆ ವಿಧೇಯತೆ ಮತ್ತು ಗೌರವ ತೋರಿಸೋದು ಎಷ್ಟು ಪ್ರಾಮುಖ್ಯ ಅಂತ ನೋಡಿ.

ಧರ್ಮೋಪದೇಶಕಾಂಡ ಪುಸ್ತಕದ ಪರಿಚಯ

ಯೆಹೋವ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಆತನು ಅವರನ್ನು ಎಷ್ಟು ಪ್ರೀತಿಸುತ್ತಾನೆ ಅಂತ ತೋರಿಸಿತು.

ಯೆಹೋಶುವ ಪುಸ್ತಕದ ಪರಿಚಯ

ದೇವರು ಮಾತು ಕೊಟ್ಟ ದೇಶವನ್ನು ಇಸ್ರಾಯೇಲ್ಯರು ಹೇಗೆ ವಶಪಡಿಸಿ ಹಂಚಿಕೊಂಡರು ಅಂತ ನೋಡಿ.

ನ್ಯಾಯಸ್ಥಾಪಕರು ಪುಸ್ತಕದ ಪರಿಚಯ

ವಿರೋಧಿಗಳ ಕೈಯಿಂದ ತನ್ನ ಜನರನ್ನು ಬಿಡಿಸಲು ದೇವರು ಬಳಸಿದ ಧೀರರಿಗೆ ಕೊಡಲಾದ ಬಿರುದನ್ನೇ ಈ ಪುಸ್ತಕಕ್ಕೆ ಇಡಲಾಗಿದೆ.

ರೂತ್‌ ಪುಸ್ತಕದ ಪರಿಚಯ

ಯೌವನದಲ್ಲೇ ವಿಧವೆಯಾದ ಸೊಸೆ, ವಿಧವೆಯಾದ ತನ್ನ ಅತ್ತೆಗೆ ಹೇಗೆ ನಿಸ್ವಾರ್ಥ ಪ್ರೀತಿ ತೋರಿಸಿದಳು ಮತ್ತು ಯೆಹೋವ ದೇವರು ಅವರಿಬ್ಬರನ್ನು ಹೇಗೆ ಆಶೀರ್ವದಿಸಿದ್ರು ಅಂತ ಈ ಪುಸ್ತಕ ತಿಳಿಸುತ್ತೆ.

1 ಸಮುವೇಲ ಪುಸ್ತಕದ ಪರಿಚಯ

ನ್ಯಾಯಸ್ಥಾಪಕರ ಆಳ್ವಿಕೆಯಿಂದ ರಾಜರ ಆಳ್ವಿಕೆಗೆ ಇಸ್ರಾಯೇಲ್ಯರ ಇತಿಹಾಸ ಹೇಗೆ ಬದಲಾಯಿತು ಅಂತ ನೋಡಿ.

2 ಸಮುವೇಲ ಪುಸ್ತಕದ ಪರಿಚಯ

ಬೈಬಲಿನಲ್ಲಿರೋ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ದಾವೀದನೂ ಒಬ್ಬನಾಗಲು ಅವನಲ್ಲಿದ್ದ ದೀನತೆ ಮತ್ತು ನಂಬಿಕೆ ಹೇಗೆ ಸಹಾಯ ಮಾಡ್ತು ಅಂತ ನೋಡಿ.

1ಅರಸು ಪುಸ್ತಕದ ಪರಿಚಯ

ಸೊಲೊಮೋನನ ಆಳ್ವಿಕೆಯಲ್ಲಿ ಇಸ್ರಾಯೇಲ್‌ ಜನರು ಸಂತೋಷ ಮತ್ತು ಸಮೃದ್ಧಿಯನ್ನು ಅನುಭವಿಸಿದ ಸಮಯದಿಂದ ಆ ರಾಜ್ಯ ಇಸ್ರಾಯೇಲ್‌ ಮತ್ತು ಯೆಹೂದ ಅನ್ನೋ ಎರಡು ರಾಜ್ಯಗಳಾಗಿ ಒಡೆದ ಸಮಯದ ವರೆಗಿನ ಘಟನೆಗಳ ಬಗ್ಗೆ ತಿಳಿಯಿರಿ.

2 ಅರಸು ಪುಸ್ತಕದ ಪರಿಚಯ

ಇಸ್ರಾಯೇಲಿನ ಉತ್ತರ ರಾಜ್ಯದಲ್ಲಿ ಧರ್ಮಭ್ರಷ್ಟತೆ ಹರಡಿಕೊಂಡಿದ್ರೂ ಕೆಲವರು ಮಾತ್ರ ಯೆಹೋವನನ್ನ ಮನಸಾರೆ ಆರಾಧಿಸಿದ್ರು. ಅವರನ್ನ ಆತನು ಹೇಗೆ ಆಶೀರ್ವದಿಸಿದನು ಅಂತ ನೋಡಿ.

1 ಪೂರ್ವಕಾಲವೃತ್ತಾಂತ ಪುಸ್ತಕದ ಪರಿಚಯ

ದಾವೀದ ರಾಜನಾದಾಗಿಂದ ಮರಣದವರೆಗೂ ತೋರಿಸಿದ ದೇವಭಯವನ್ನ ಅನುಕರಿಸಿ.

2 ಪೂರ್ವಕಾಲವೃತ್ತಾಂತ ಪುಸ್ತಕದ ಪರಿಚಯ

ದೇವರಿಗೆ ನಿಯತ್ತು ತೋರಿಸೋದು ಎಷ್ಟು ಪ್ರಾಮುಖ್ಯ ಅಂತ ಯೆಹೂದ ರಾಜರ ಇತಿಹಾಸ ತಿಳಿಸುತ್ತೆ. ಅದನ್ನ ದಯವಿಟ್ಟು ಗಮನಿಸಿ.

ಎಜ್ರ ಪುಸ್ತಕದ ಪರಿಚಯ

ತನ್ನ ಜನರನ್ನು ಬಾಬೆಲಿನ ಸೆರೆವಾಸದಿಂದ ಬಿಡಿಸಿ, ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಥಾಪಿಸುತ್ತೇನೆಂಬ ತನ್ನ ಮಾತನ್ನು ಯೆಹೋವನು ಉಳಿಸಿಕೊಳ್ಳುತ್ತಾನೆ.

ನೆಹೆಮೀಯ ಪುಸ್ತಕದ ಪರಿಚಯ

ಇಂದಿರುವ ಸತ್ಯ ಕ್ರೈಸ್ತರಿಗೆ ನೆಹೆಮೀಯನ ಪುಸ್ತಕ ಪ್ರಾಮುಖ್ಯ ಪಾಠಗಳನ್ನು ಕಲಿಸುತ್ತದೆ.

ಎಸ್ತೇರಳು ಪುಸ್ತಕದ ಪರಿಚಯ

ಎಸ್ತೇರಳ ದಿನಗಳಲ್ಲಾದ ಘಟನೆಗಳು ತನ್ನ ಜನರನ್ನು ಕಷ್ಟಗಳಿಂದ ಪಾರುಮಾಡಲು ಯೆಹೋವ ದೇವರಿಗಿರುವ ಸಾಮರ್ಥ್ಯದ ಮೇಲಿನ ನಿಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.

ಯೋಬ ಪುಸ್ತಕದ ಪರಿಚಯ

ಯೆಹೋವನನ್ನು ಪ್ರೀತಿಸುವವರೆಲ್ಲರಿಗೂ ಪರೀಕ್ಷೆಗಳು ಬರುವವು. ಯೋಬನ ವೃತ್ತಾಂತವು ನಾವು ನಿಷ್ಠರಾಗಿದ್ದು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲು ಸಾಧ್ಯ ಎಂಬ ಭರವಸೆಯನ್ನು ಮೂಡಿಸುತ್ತದೆ.

ಕೀರ್ತನೆಗಳು ಪುಸ್ತಕದ ಪರಿಚಯ

ಕೀರ್ತನೆಗಳು ಪುಸ್ತಕ ಯೆಹೋವ ದೇವರ ಪರಮಾಧಿಕಾರವನ್ನು ಬೆಂಬಲಿಸುತ್ತದೆ ಮತ್ತು ಯಾರು ಆತನನ್ನು ಪ್ರೀತಿಸುತ್ತಾರೋ ಅಂಥವರಿಗೆ ಸಹಾಯ ಮಾಡಿ ಸಂತೈಸುತ್ತದೆ. ಜೊತೆಗೆ ಆತನ ರಾಜ್ಯದ ಮೂಲಕ ಇಡೀ ಲೋಕ ಹೇಗೆ ಬದಲಾಗುತ್ತದೆ ಎಂದು ಸಹ ತಿಳಿಸುತ್ತದೆ.

ಜ್ಞಾನೋಕ್ತಿಗಳು ಪುಸ್ತಕದ ಪರಿಚಯ

ವ್ಯಾಪಾರ ವಹಿವಾಟುಗಳಿಂದ ಹಿಡಿದು ಕುಟುಂಬದ ಜೀವನದವರೆಗೆ ಹೀಗೆ ಜೀವನದ ಪ್ರತಿಯೊಂದು ವಿಷಯಗಳ ಬಗ್ಗೆ ದೈವಿಕ ಮಾರ್ಗದರ್ಶನ ಪಡೆಯಿರಿ.

ಪ್ರಸಂಗಿ ಪುಸ್ತಕದ ಪರಿಚಯ

ರಾಜ ಸೊಲೊಮೋನನು ಜೀವನದಲ್ಲಿನ ಪ್ರಾಮುಖ್ಯ ವಿಷಯಗಳಿಗೆ ಒತ್ತು ನೀಡುತ್ತಾ ಈ ವಿಷಯಗಳಿಗೂ ದೈವಿಕ ವಿವೇಕಕ್ಕೆ ವಿರುದ್ಧವಾಗಿರುವ ವಿಷಯಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತಾನೆ.

ಪರಮಗೀತ ಪುಸ್ತಕದ ಪರಿಚಯ

ಶೂಲೇಮ್ಯ ಹುಡುಗಿಗೆ ಕುರುಬ ಹುಡುಗನ ಮೇಲಿದ್ದ ಅಳಿಸಲಾಗದ ಪ್ರೀತಿಯನ್ನು ‘ಯೆಹೋವನ ಜ್ವಾಲೆಗೆ’ ಹೋಲಿಸಲಾಗಿದೆ. ಏಕೆ?

ಯೆಶಾಯ ಪುಸ್ತಕದ ಪರಿಚಯ

ಯೆಶಾಯ ಪುಸ್ತಕದಲ್ಲಿ ತಿಳಿಸಲಾಗಿರುವ ಪ್ರವಾದನೆಗಳು ಚಾಚೂತಪ್ಪದೇ ನೆರವೇರಿವೆ. ಇವು ಯೆಹೋವನು ತನ್ನ ವಾಗ್ದಾನಗಳನ್ನು ಖಂಡಿತ ನೆರವೇರಿಸುತ್ತಾನೆ ಮತ್ತು ಆತನು ರಕ್ಷಣೆಯ ದೇವರು ಎಂಬ ನಿಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.

ಯೆರೆಮೀಯ ಪುಸ್ತಕದ ಪರಿಚಯ

ಕಷ್ಟದ ಮಧ್ಯದಲ್ಲೂ ಯೆರೆಮೀಯ ಪ್ರವಾದಿಯಾಗಿ ತನಗಿದ್ದ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಿದ. ಇಂದು ಕ್ರೈಸ್ತರಿಗೆ ಅವನ ಮಾದರಿ ಹೇಗೆ ಸಹಾಯ ಮಾಡುತ್ತದೆಂದು ಯೋಚಿಸಿ.

ಪ್ರಲಾಪಗಳು ಪುಸ್ತಕದ ಪರಿಚಯ

ಯೆರೆಮೀಯ ಪ್ರವಾದಿ ಬರೆದ ಈ ಪ್ರಲಾಪಗಳು ಪುಸ್ತಕವು ಯೆರೂಸಲೇಮಿನ ನಾಶನದ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತದೆ ಮತ್ತು ಪಶ್ಚಾತ್ತಾಪ ಹೇಗೆ ದೈವಿಕ ಕರುಣೆಗೆ ನಡೆಸುತ್ತದೆ ಎಂದು ತಿಳಿಸುತ್ತದೆ.

ಯೆಹೆಜ್ಕೇಲ ಪುಸ್ತಕದ ಪರಿಚಯ

ಎಷ್ಟೇ ಕಷ್ಟ ಆದರೂ ಯೆಹೋವನು ನೀಡಿದ ನೇಮಕವನ್ನು ಯೆಹೆಜ್ಕೇಲನು ದೀನತೆ ಮತ್ತು ಧೈರ್ಯದಿಂದ ಮಾಡಿದನು. ಆತನ ಮಾದರಿ ನಮಗೆ ತುಂಬಾ ಅಮೂಲ್ಯವಾಗಿದೆ.

ದಾನಿಯೇಲ ಪುಸ್ತಕದ ಪರಿಚಯ

ದಾನಿಯೇಲ ಮತ್ತವನ ಸಂಗಡಿಗರು ಎಲ್ಲ ಸನ್ನಿವೇಶಗಳಲ್ಲಿ ಯೆಹೋವನಿಗೆ ನಂಬಿಗಸ್ತರಾಗಿದ್ದರು. ಅವರ ಮಾದರಿ ಮತ್ತು ಪ್ರವಾದನೆ ನೆರವೇರಿಕೆ ನಮಗೆ ಇಂದು ಯುಗದ ಸಮಾಪ್ತಿಯಲ್ಲಿ ಪ್ರಯೋಜನ ತರುತ್ತದೆ.

ಹೋಶೇಯ ಪುಸ್ತಕದ ಪರಿಚಯ

ಹೋಶೇಯ ಪ್ರವಾದನೆಯಲ್ಲಿ ಅನೇಕ ಮಹತ್ವದ ಪಾಠಗಳಿವೆ. ಯೆಹೋವನು ಪಶ್ಚಾತ್ತಾಪಪಟ್ಟ ತಪ್ಪಿತಸ್ಥರಿಗೆ ಕರುಣೆ ತೋರಿಸುತ್ತಾನೆ ಮತ್ತು ಆತನು ಎಂಥಾ ಆರಾಧನೆಯನ್ನು ಇಷ್ಟಪಡುತ್ತಾನೆ ಎಂದು ನಮಗೆ ಕಲಿಸುತ್ತದೆ.

ಯೋವೇಲ ಪುಸ್ತಕದ ಪರಿಚಯ

ಪ್ರವಾದಿ ಯೋವೇಲನು ಬರಲಿರುವ ‘ಯೆಹೋವನ ದಿನದ’ ಬಗ್ಗೆ ಮತ್ತು ಅದರಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಸಿದನು. ಇಂದು ಆತನ ಪ್ರವಾದನೆ ತುಂಬ ತುರ್ತಿನ ವಿಷಯವಾಗಿದೆ.

ಆಮೋಸ ಪುಸ್ತಕದ ಪರಿಚಯ

ಯೆಹೋವನು ಈ ದೀನ ವ್ಯಕ್ತಿಯನ್ನು ತುಂಬಾ ಪ್ರಾಮುಖ್ಯವಾದ ಕೆಲಸಕ್ಕಾಗಿ ಬಳಸಿದನು. ಆಮೋಸನ ಮಾದರಿಯಿಂದ ಯಾವ ಪ್ರಾಮುಖ್ಯವಾದ ಪಾಠಗಳನ್ನು ಕಲಿಯಬಹುದು?

ಓಬದ್ಯ ಪುಸ್ತಕದ ಪರಿಚಯ

ಹೀಬ್ರು ಶಾಸ್ತ್ರಗ್ರಂಥದಲ್ಲಿ ಓಬದ್ಯ ಎಲ್ಲಕ್ಕಿಂತ ಚಿಕ್ಕ ಪುಸ್ತಕ. ಪ್ರವಾದಿ ನಿರೀಕ್ಷೆಯನ್ನು ಮತ್ತು ಯೆಹೋವನ ಅರಸುತನ ನಿರ್ದೋಷೀಕರಣದ ಬಗ್ಗೆ ಮಾತು ಕೊಡುತ್ತಾನೆ.

ಯೋನ ಪುಸ್ತಕದ ಪರಿಚಯ

ಪ್ರವಾದಿಯು ತಿದ್ದುಪಾಟನ್ನು ಅಂಗೀಕರಿಸಿದನು, ತನ್ನ ನೇಮಕವನ್ನು ಪೂರೈಸಿದನು ಮತ್ತು ದೇವರ ನಿಷ್ಠಾವಂತ ಪ್ರೀತಿ ಮತ್ತು ಕರುಣೆಯ ಬಗ್ಗೆ ಆತನಿಗೆ ಪ್ರಾಮುಖ್ಯವಾದ ಪಾಠವನ್ನು ಕಲಿಸಲಾಯಿತು. ಆತನ ಅನುಭವವು ನಿಮ್ಮ ಮನ ಮುಟ್ಟುತ್ತದೆ.

ಮೀಕ ಪುಸ್ತಕದ ಪರಿಚಯ

ದೇವ ಪ್ರೇರಿತವಾದ ಈ ಪ್ರವಾದನೆಯು ಯೆಹೋವನು ನಮ್ಮಿಂದ ಮಾಡಲು ಆಗುವಂಥದ್ದನ್ನು ಮತ್ತು ನಮಗೆ ಪ್ರಯೋಜನ ತರುವಂಥ ವಿಷಯಗಳನ್ನೇ ಮಾಡುವಂತೆ ಹೇಳುತ್ತಾನೆಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.

ನಹೂಮ ಪುಸ್ತಕದ ಪರಿಚಯ

ಯೆಹೋವನು ಯಾವಾಗಲೂ ತನ್ನ ಮಾತನ್ನು ಪೂರೈಸುತ್ತಾನೆ ಮತ್ತು ಆತನ ರಾಜ್ಯದ ಕೆಳಗೆ ಶಾಂತಿ ಮತ್ತು ರಕ್ಷಣೆ ಪಡೆಯಲು ಬಯಸುವವರಿಗೆ ಸಾಂತ್ವನ ಕೊಡುತ್ತಾನೆಂಬ ನಮ್ಮ ಭರವಸೆಯನ್ನು ಈ ಪ್ರವಾದನೆಯು ಬಲಪಡಿಸುತ್ತದೆ.

ಹಬಕ್ಕೂಕ ಪುಸ್ತಕದ ಪರಿಚಯ

ತನ್ನ ಜನರನ್ನು ಸಂರಕ್ಷಿಸುವ ಅತ್ಯುತ್ತಮ ಸಮಯ ಮತ್ತು ವಿಧ ಯೆಹೋವನಿಗೆ ಗೊತ್ತಿದೆ ಎಂಬ ಭರವಸೆ ನಮಗಿದೆ.

ಚೆಫನ್ಯ ಪುಸ್ತಕದ ಪರಿಚಯ

ಯೆಹೋವನ ನ್ಯಾಯತೀರ್ಪಿನ ದಿನ ಇನ್ನೂ ದೂರ ಇದೆ ಎಂಬ ಯೋಚನೆ ಬರದಂತೆ ಯಾಕೆ ಎಚ್ಚರವಹಿಸಬೇಕು?

ಹಗ್ಗಾಯ ಪುಸ್ತಕದ ಪರಿಚಯ

ಈ ಪ್ರವಾದನೆ ನಾವು ವೈಯಕ್ತಿಕ ವಿಷಯಗಳಿಗಿಂತ ದೇವರ ಆರಾಧನೆಗೆ ಮೊದಲ ಸ್ಥಾನ ಕೊಡುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳುತ್ತದೆ.

ಜೆಕರ್ಯ ಪುಸ್ತಕದ ಪರಿಚಯ

ಹಿಂದೆ ದೇವರ ಜನರನ್ನು ಬಲಪಡಿಸಿದ ಹಲವಾರು ಪ್ರೇರಿತ ದರ್ಶನಗಳು ಮತ್ತು ಪ್ರವಾದನೆಗಳು ಇವೆ. ಅದೇ ಪ್ರವಾದನೆಗಳು ಯೆಹೋವನ ಬೆಂಬಲದ ಆಶ್ವಾಸನೆಯನ್ನು ನಮಗೆ ಈಗಲೂ ಕೊಡುತ್ತವೆ.

ಮಲಾಕಿಯ ಪುಸ್ತಕದ ಪರಿಚಯ

ಯೆಹೋವನ ಬದಲಾಗದ ತತ್ವಗಳು, ಕರುಣೆ ಮತ್ತು ಪ್ರೀತಿಯ ಬಗ್ಗೆ ತಿಳಿಸುತ್ತದೆ. ನಮ್ಮ ದಿನಗಳ ಸನ್ನಿವೇಶಗಳಿಗೆ ಪ್ರಾಮುಖ್ಯ ಪಾಠಗಳನ್ನು ತಿಳಿಸುತ್ತದೆ.

ಮತ್ತಾಯ ಪುಸ್ತಕದ ಪರಿಚಯ

ಬೈಬಲಿನಲ್ಲಿರುವ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಮೊದನೆಯದು ಮತ್ತಾಯ ಪುಸ್ತಕ. ಇದರಲ್ಲಿರುವ ಕೆಲವು ಪ್ರಾಮುಖ್ಯ ವಿಷಯಗಳನ್ನು ತಿಳಿದುಕೊಳ್ಳಿ.

ಮಾರ್ಕ ಪುಸ್ತಕದ ಪರಿಚಯ

ಸುವಾರ್ತಾ ಪುಸ್ತಕಗಳಲ್ಲೇ ಚಿಕ್ಕದಾದ ಮಾರ್ಕ ಪುಸ್ತಕ ದೇವರ ರಾಜ್ಯದ ರಾಜನಾಗಿ ಯೇಸುವಿನ ಆಳ್ವಿಕೆಯ ಕಿರುನೋಟವನ್ನು ನೀಡುತ್ತದೆ.

ಲೂಕ ಪುಸ್ತಕದ ಪರಿಚಯ

ಲೂಕನ ಸುವಾರ್ತಾಯಲ್ಲಿ ಯಾವ ಮಾಹಿತಿ ಅಸಾಮಾನ್ಯವಾಗಿದೆ?

ಯೋಹಾನ ಪುಸ್ತಕದ ಪರಿಚಯ

ಯೋಹಾನನ ವೃತ್ತಾಂತದಲ್ಲಿ ಮಾನವರ ಮೇಲೆ ಯೇಸುವಿಗಿದ್ದ ಪ್ರೀತಿ, ದೀನತೆಗೆ ಆತನಿಟ್ಟ ಮಾದರಿ, ದೇವರ ರಾಜ್ಯದ ರಾಜನಾಗಿ ಆತನೇ ಮೆಸ್ಸೀಯನೆಂದು ಗುರುತಿಸುವುದರ ಬಗ್ಗೆ ಒತ್ತಿಹೇಳುತ್ತದೆ.

ಅಪೊಸ್ತಲರ ಕಾರ್ಯಗಳು ಪುಸ್ತಕದ ಪರಿಚಯ

ಮೊದಲ ಶತಮಾನದ ಕ್ರೈಸ್ತರು ಎಲ್ಲ ಜನಾಂಗಗಳನ್ನು ಶಿಷ್ಯರಾಗಿ ಮಾಡಲು ಶ್ರಮಪಟ್ಟರು. ಶುಶ್ರೂಷೆಯ ಕಡೆಗೆ ನಮ್ಮ ಹುರುಪು ಮತ್ತು ಉತ್ಸಾಹವನ್ನು ಅಪೊಸ್ತಲರ ಕಾರ್ಯಗಳ ಪುಸ್ತಕ ಹೆಚ್ಚಿಸುತ್ತದೆ.

ರೋಮನ್ನರಿಗೆ ಪತ್ರದ ಪರಿಚಯ

ಯೆಹೋವನ ನಿಷ್ಪಕ್ಷಪಾತ ಗುಣದ ಬಗ್ಗೆ ಮತ್ತು ಯೇಸುವಿನ ಮೇಲೆ ನಂಬಿಕೆಯಿಡುವ ಪ್ರಾಮುಖ್ಯತೆಯ ಬಗ್ಗೆ ಪ್ರೇರಿತ ಸಲಹೆ.

1 ಕೊರಿಂಥ ಪತ್ರದ ಪರಿಚಯ

ಐಕ್ಯತೆ, ನೈತಿಕ ಶುದ್ಧತೆ ಮತ್ತು ಪ್ರೀತಿ ಬಗ್ಗೆ ಪೌಲನ ಪತ್ರದಲ್ಲಿ ಮತ್ತು ಪುನರುತ್ಥಾನದಲ್ಲಿ ನಂಬಿಕೆಯ ಬಗ್ಗೆ ದೇವಪ್ರೇರಿತ ಸಲಹೆ ಇದೆ.

2 ಕೊರಿಂಥ ಪತ್ರದ ಪರಿಚಯ

‘ಸಕಲ ಸಾಂತ್ವನದ ದೇವರಾದ‘ ಯೆಹೋವನು ತನ್ನ ಸೇವಕರನ್ನು ಬಲಪಡಿಸುತ್ತಾನೆ ಮತ್ತು ಸಂತೈಸುತ್ತಾನೆ.

ಗಲಾತ್ಯ ಪತ್ರದ ಪರಿಚಯ

ಪೌಲ ಗಲಾತ್ಯದವರಿಗೆ ಬರೆದ ಪತ್ರ, ಆಗಿನ ಕಾಲಕ್ಕೆ ಹೇಗೆ ಅನ್ವಯಿಸಿತೋ ಹಾಗೆಯೇ ಇಂದು ನಮಗೂ ಅನ್ವಯಿಸುತ್ತೆ. ನಂಬಿಗಸ್ತರಾಗಿ ಉಳಿಯಲು ಎಲ್ಲಾ ನಿಜ ಕ್ರೈಸ್ತರಿಗೂ ಸಹಾಯ ಮಾಡುತ್ತೆ.

ಎಫೆಸ ಪತ್ರದ ಪರಿಚಯ

ಕ್ರಿಸ್ತನ ಮೂಲಕ ಶಾಂತಿ, ಐಕ್ಯತೆಯನ್ನು ತರುವ ದೇವರ ಉದ್ದೇಶದ ಬಗ್ಗೆ ಈ ಪತ್ರದಲ್ಲಿ ತಿಳಿಸಲಾಗಿದೆ.

ಫಿಲಿಪ್ಪಿ ಪತ್ರದ ಪರಿಚಯ

ಕಷ್ಟಗಳು ಬಂದರೂ ನಾವು ದೃಢವಾಗಿ ನಿಂತರೆ, ಬೇರೆಯವರು ಸ್ಥಿರವಾಗಿ ನಿಲ್ಲಲು ಉತ್ತೇಜಿಸಬಹುದು.

ಕೊಲೊಸ್ಸೆ ಪತ್ರದ ಪರಿಚಯ

ಯೆಹೋವನನ್ನು ಮೆಚ್ಚಿಸಲು, ನಾವು ಕಲಿತದ್ದನ್ನು ಅನ್ವಯಿಸಿಕೊಳ್ಳಬೇಕು, ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಬೇಕು, ಯೇಸುವಿನ ಸ್ಥಾನ ಮತ್ತು ಅಧಿಕಾರವನ್ನು ಗೌರವಿಸಬೇಕು.

1 ಥೆಸಲೊನೀಕ ಪತ್ರದ ಪರಿಚಯ

ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿರಬೇಕು, ‘ಎಲ್ಲ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು,’ ‘ಎಡೆಬಿಡದೆ ಪ್ರಾರ್ಥಿಸಬೇಕು,’ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು.

2 ಥೆಸಲೋನಿಕ ಪತ್ರದ ಪರಿಚಯ

ಯೆಹೋವನ ಮಹಾದಿನದ ಬಗ್ಗೆ ಇದ್ದ ತಪ್ಪಾದ ದೃಷ್ಟಿಕೋನವನ್ನು ಪೌಲ ತಿದ್ದುತ್ತಾನೆ ಮತ್ತು ನಂಬಿಕೆಯಲ್ಲಿ ದೃಢರಾಗಿ ನಿಲ್ಲಿರಿ ಎಂದು ಸಹೋದರರನ್ನು ಪ್ರೋತ್ಸಾಹಿಸುತ್ತಾನೆ.

1 ತಿಮೊಥೆಯ ಪತ್ರದ ಪರಿಚಯ

ಸಭೆಯಲ್ಲಿ ಎಲ್ಲವೂ ಹೇಗೆ ಅಚ್ಚುಕಟ್ಟಾಗಿ ನಡೆಯಬೇಕೆಂದು ತಿಳಿಸಲು ಮತ್ತು ಸುಳ್ಳು ಬೋಧನೆಗಳು ಹಾಗೂ ಹಣದ ಪ್ರೇಮದ ಬಗ್ಗೆ ಎಚ್ಚರಿಸಲು 1 ತಿಮೊಥೆಯ ಪತ್ರವನ್ನು ಬರೆದ.

2 ತಿಮೊಥೆಯ ಪತ್ರದ ಪರಿಚಯ

ಪೌಲನು ತಿಮೊಥೆಯನಿಗೆ ಸುವಾರ್ತೆಯನ್ನು ಕೂಲಂಕಷವಾಗಿ ಸಾರುವಂತೆ ಉತ್ತೇಜಿಸಿದನು.

ತೀತ ಪತ್ರದ ಪರಿಚಯ

ತೀತನಿಗೆ ಬರೆದ ಪೌಲನ ಪತ್ರದಲ್ಲಿ ಕ್ರೇತ ಸಭೆಯಲ್ಲಿದ್ದ ಸಮಸ್ಯೆಗಳ ಬಗ್ಗೆ ಮತ್ತು ಹಿರಿಯರಲ್ಲಿರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಲಾಗಿದೆ.

ಫಿಲೆಮೋನ ಪತ್ರದ ಪರಿಚಯ

ಪ್ರಭಾವ ಬೀರುವ ಈ ಚಿಕ್ಕ ಪತ್ರದಲ್ಲಿ ದೀನತೆ, ದಯೆ ಮತ್ತು ಕ್ಷಮೆಯ ಬಗ್ಗೆ ತಿಳಿಸಲಾಗಿದೆ.

ಇಬ್ರಿಯ ಪತ್ರದ ಪರಿಚಯ

ಕ್ರೈಸ್ತ ಆರಾಧನೆ ಆಲಯಕ್ಕಿಂತ ಮತ್ತು ಪ್ರಾಣಿ ಯಜ್ಞಗಳಿಗಿಂತ ಮುಖ್ಯವಾದ ವಿಷ್ಯಗಳ ಮೇಲೆ ಆಧಾರಿತವಾಗಿದೆ.

ಯಾಕೋಬ ಪತ್ರದ ಪರಿಚಯ

ಮುಖ್ಯ ತತ್ವಗಳನ್ನು ಕಲಿಸಲು ಯಾಕೋಬ ಕಾಲ್ಪನಿಕ ಶಬ್ದಚಿತ್ರಗಳನ್ನು ಕಲಿಸಿದನು.

1 ಪೇತ್ರ ಪತ್ರದ ಪರಿಚಯ

ಪೇತ್ರ ತನ್ನ ಮೊದಲ ಪತ್ರದಲ್ಲಿ ಸಿದ್ಧರಾಗಿರಲು ಮತ್ತು ನಮ್ಮ ಭಾರವನ್ನು ಯೆಹೋವನ ಮೇಲೆ ಹಾಕಲು ಉತ್ತೇಜಿಸುತ್ತಾನೆ.

2 ಪೇತ್ರ ಪತ್ರದ ಪರಿಚಯ

ಪೇತ್ರ ತನ್ನ ಎರಡನೇ ಪತ್ರದಲ್ಲಿ ನೂತನ ಆಕಾಶ ಮತ್ತು ನೂತನ ಭೂಮಿ ಬರುವ ತನಕ ನಂಬಿಗಸ್ತರಾಗಿ ಇರಲು ಉತ್ತೇಜಿಸುತ್ತಾನೆ.

1 ಯೋಹಾನ ಪತ್ರದ ಪರಿಚಯ

ಯೋಹಾನನು ತನ್ನ ಪತ್ರದಲ್ಲಿ ಸುಳ್ಳು ಕ್ರೈಸ್ತರ ಬಗ್ಗೆ ಎಚ್ಚರ ವಹಿಸುತ್ತಾನೆ ಮತ್ತು ನಾವೇನನ್ನು ಪ್ರೀತಿಸಬೇಕು ಏನನ್ನು ಪ್ರೀತಿಸಬಾರದು ಅಂತ ತಿಳಿಯಲು ಸಹಾಯ ಮಾಡ್ತಾನೆ.

2 ಯೋಹಾನ ಪತ್ರದ ಪರಿಚಯ

ಯೋಹಾನ ತನ್ನ ಎರಡನೇ ಪತ್ರದಲ್ಲಿ ಸತ್ಯದಲ್ಲಿ ನಡೆಯುವುದರ ಬಗ್ಗೆ ಮತ್ತು ವಂಚಕರಿಂದ ದೂರವಿರುವುದರ ಬಗ್ಗೆ ನೆನಪಿಸುತ್ತಾನೆ.

3 ಯೋಹಾನ ಪತ್ರದ ಪರಿಚಯ

ಯೋಹಾನ ತನ್ನ ಮೂರನೇ ಪತ್ರದಲ್ಲಿ ಕ್ರೈಸ್ತರು ಅತಿಥಿಸತ್ಕಾರ ತೋರಿಸುವುದರ ಬಗ್ಗೆ ಮುಖ್ಯ ಪಾಠಗಳನ್ನು ಕಲಿಸುತ್ತಾನೆ.

ಯೂದ ಪತ್ರದ ಪರಿಚಯ

ಕ್ರೈಸ್ತರನ್ನು ತಪ್ಪು ದಾರಿಗೆ ನಡಿಸಿ ಮೋಸ ಮಾಡಲು ಪ್ರಯತ್ನಿಸುವವರ ಮಾರ್ಗಗಳನ್ನು ಯೂದ ಬಯಲುಪಡಿಸಿದ.

ಪ್ರಕಟನೆ ಪುಸ್ತಕದ ಪರಿಚಯ

ಮನುಷ್ಯರಿಗಾಗಿ ಮತ್ತು ಭೂಮಿಗಾಗಿ ದೇವರಿಗಿರುವ ಉದ್ದೇಶವನ್ನು ಆತನ ಆಳ್ವಿಕೆ ಹೇಗೆ ನೆರವೇರಿಸುತ್ತೆ ಅಂತ ಪ್ರಕಟಣೆ ಪುಸ್ತಕ ತಿಳಿಸುವ ಸಾಂಕೇತಿಕ ದರ್ಶನಗಳನ್ನು ನೋಡಿ.

ನಿಮಗೆ ಇವೂ ಇಷ್ಟ ಆಗಬಹುದು

ಪುಸ್ತಕಗಳು ಮತ್ತು ಕಿರುಹೊತ್ತಗೆಗಳು

ಬೈಬಲ್‌​—ಅದರಲ್ಲಿ ಏನಿದೆ?

ಬೈಬಲಿನಲ್ಲಿರುವ ಮುಖ್ಯ ವಿಷಯ ಏನು?