ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆ

ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆ

“ಒಳ್ಳೆಯ ದೇಶವನ್ನು ನೋಡಿ” ಅನ್ನೋ ಪ್ರಕಾಶನದಲ್ಲಿ ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆಗಳನ್ನು ಕೊಡಲಾಗಿದೆ. ಈ ಪ್ರಕಾಶನವು ನಮಗೆ ಬೈಬಲನ್ನು ಆಳವಾಗಿ ಅಧ್ಯಯನ ಮಾಡಲು ಸಹಾಯ ಮಾಡುತ್ತೆ. ಬೈಬಲ್‌ನಲ್ಲಿ ಅನೇಕ ಸ್ಥಳಗಳ, ನಗರಗಳ ಹಾಗೂ ದೇಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪ್ರಕಾಶನವನ್ನು ಬಳಸುತ್ತಾ ನೀವು ಬೈಬಲನ್ನ ಓದಿ ಧ್ಯಾನಿಸುವಾಗ ಅದನ್ನು ತುಂಬ ಆನಂದಿಸುವಿರಿ. “ಒಳ್ಳೆಯ ದೇಶವನ್ನು ನೋಡಿ” ಪ್ರಕಾಶನವು ಬೈಬಲ್‌ನಲ್ಲಿ ತಿಳಿಸಲಾಗಿರುವ ಘಟನೆಗಳು ಎಲ್ಲಿ ನಡೆದವು ಅಂತ ನಕ್ಷೆಯಲ್ಲಿ ಗುರುತಿಸಿ ಅದನ್ನ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುತ್ತಾ ಅಧ್ಯಯನ ಮಾಡಲು ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಒಂದು ಘಟನೆ ನಡೆದಾಗ ಅದರ ಸುತ್ತಮುತ್ತಲಿನ ಪ್ರದೇಶ ಹೇಗಿತ್ತು ಮತ್ತು ಇದು ಆ ಘಟನೆ ಮೇಲೆ ಯಾವ ಪ್ರಭಾವ ಬೀರಿತು ಅಂತ ಅರ್ಥಮಾಡಿಕೊಳ್ಳೋಕೂ ಸಹಾಯ ಮಾಡುತ್ತೆ.

“ಒಳ್ಳೆಯ ದೇಶವನ್ನು ನೋಡಿ” ಪ್ರಕಾಶನದಲ್ಲಿ ಬೈಬಲ್‌ ಸಮಯದಲ್ಲಿದ್ದ ಸ್ಥಳಗಳ ವರ್ಣರಂಜಿತ ನಕ್ಷೆಗಳು ಮತ್ತು ಚಾರ್ಟ್‌ಗಳಿವೆ. ಇದರ ಜೊತೆಗೆ ಅನೇಕ ರೇಖಾಚಿತ್ರಗಳು, ಕಂಪ್ಯೂಟರ್‌ ಬಳಸಿ ರಚಿಸಿದ ಚಿತ್ರಗಳು ಹಾಗೂ ಇತರ ವೈಶಿಷ್ಟ್ಯಗಳು ವೈಯಕ್ತಿಕ ಬೈಬಲ್‌ ಅಧ್ಯಯನದ ಮೆರುಗನ್ನು ಹೆಚ್ಚಿಸುತ್ತೆ.

ಬೈಬಲ್‌ನಲ್ಲಿ ತಿಳಿಸಲಾಗಿರುವ ಸ್ಥಳಗಳ ನಕ್ಷೆಯ ಸಹಾಯದಿಂದ ನೀವು

  • ಅಬ್ರಹಾಮ, ಇಸಾಕ ಮತ್ತು ಯಾಕೋಬ ಎಲ್ಲೆಲ್ಲಾ ಪ್ರಯಾಣ ಮಾಡಿದರು ಅಂತ ಅರ್ಥಮಾಡಿಕೊಳ್ಳಬಹುದು.

  • ಇಸ್ರಾಯೇಲ್ಯರು ಈಜಿಪ್ಟ್‌ ದೇಶವನ್ನು ಬಿಟ್ಟು ವಾಗ್ದತ್ತ ದೇಶಕ್ಕೆ ಹೋದ ದಾರಿಯನ್ನ ನೋಡಬಹುದು.

  • ಇಸ್ರಾಯೇಲ್‌ ದೇಶದ ಸುತ್ತಲು ಶತ್ರುಗಳ ದೇಶ ನಾಲ್ಕು ದಿಕ್ಕಲ್ಲಿ ಎಲ್ಲೆಲ್ಲಿ ಇತ್ತು ಅಂತ ನೋಡಬಹುದು.

  • ಯೇಸು ಸೇವೆ ಮಾಡುವಾಗ ಯಾವೆಲ್ಲಾ ಸ್ಥಳಗಳಲ್ಲಿ ಪ್ರಯಾಣ ಮಾಡಿದನು ಅಂತ ನೋಡಬಹುದು.

  • ಬೈಬಲ್‌ನಲ್ಲಿ ಉಲ್ಲೇಖಿಸಲಾದ ಬಾಬೆಲ್‌, ಗ್ರೀಸ್‌ ಹಾಗೂ ರೋಮ್‌ ಸಾಮ್ರಾಜ್ಯ ಎಷ್ಟು ವ್ಯಾಪಕವಾಗಿ ಹರಡಿತ್ತು ಅಂತ ಅರ್ಥಮಾಡಿಕೊಳ್ಳಬಹುದು.

ಈ ಬೈಬಲ್‌ ನಕ್ಷೆಯನ್ನ ನೀವು ಆನ್‌ಲೈನ್‌ ಉಚಿತವಾಗಿ ಬಳಸಬಹುದು.