ಮಾಹಿತಿ ಇರುವಲ್ಲಿ ಹೋಗಲು

ನಾನು ಪ್ರಾರ್ಥನೆ ಮಾಡಿದ್ರೆ ದೇವರು ಸಹಾಯ ಮಾಡ್ತಾನಾ?

ನಾನು ಪ್ರಾರ್ಥನೆ ಮಾಡಿದ್ರೆ ದೇವರು ಸಹಾಯ ಮಾಡ್ತಾನಾ?

ಬೈಬಲ್‌ ಕೊಡೋ ಉತ್ತರ

 ಹೌದು, ಒಬ್ಬ ವ್ಯಕ್ತಿ ದೇವರ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಿದ್ರೆ ಖಂಡಿತ ಆತನು ಸಹಾಯ ಮಾಡ್ತಾನೆ. ನೀವು ಈ ಮುಂಚೆ ಪ್ರಾರ್ಥನೆ ಮಾಡಿಲ್ಲಾಂದ್ರೂ ಬೈಬಲಲ್ಲಿರೋ ದೇವರ ಸೇವಕರು ಮಾಡಿರೋ ಪ್ರಾರ್ಥನೆಗಳು ನಿಮಗೆ ಸಹಾಯ ಮಾಡುತ್ತೆ. ಅವರು “ದೇವರೇ, ಸಹಾಯಮಾಡು” ಅಂತ ಬೇಡಿಕೊಂಡ್ರು. ಉದಾಹರಣೆಗೆ:

  •   “ಯೆಹೋವನೇ, ನನ್ನ ದೇವರೇ, ಸಹಾಯಮಾಡು; ನಿನ್ನ ಕೃಪೆಗೆ ತಕ್ಕಂತೆ ರಕ್ಷಿಸು.”—ಕೀರ್ತನೆ 109:26, BSI ಬೈಬಲ್‌.

  •   “ನಾನು ನಿರ್ಗತಿಕ ಮತ್ತು ಬಡವ; ಓ ದೇವರೇ, ಸಹಾಯಮಾಡು.”—ಕೀರ್ತನೆ 69:6, ಡುವೇ ವರ್ಷನ್‌.

 ಈ ಮಾತುಗಳನ್ನ ಹೇಳಿದವ್ರಿಗೆ ದೇವರ ಮೇಲೆ ತುಂಬ ನಂಬಿಕೆಯಿತ್ತು. ‘ಹೃದಯ ಒಡೆದು ಹೋಗಿರುವವರು, ಮನಸ್ಸು ಚೂರುಚೂರಾಗಿ ಹೋಗಿರುವವರು’ ಕೂಡ ತನ್ನ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಿದ್ರೆ ಯೆಹೋವ ಖಂಡಿತ ಕೇಳ್ತಾನೆ.—ಕೀರ್ತನೆ 34:18.

 ‘ದೇವರು ನನ್ನಿಂದ ತುಂಬ ದೂರ ಇದ್ದಾನೆ. ನನ್ನ ಕಷ್ಟಗಳ ಬಗ್ಗೆ ಆತನು ತಲೆಕೆಡಿಸ್ಕೊಳ್ಳಲ್ಲ’ ಅಂತ ಯೋಚಿಸಬೇಡಿ. ಯಾಕಂದ್ರೆ “ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ, ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 138:6) ಅಷ್ಟೇ ಅಲ್ಲ ಯೇಸು ಒಂದು ಸಲ ತನ್ನ ಶಿಷ್ಯರಿಗೆ “ನಿಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ದೇವರಿಗೆ ಗೊತ್ತು” ಅಂತ ಹೇಳಿದನು. (ಮತ್ತಾಯ 10:30) ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದಿರೋ ಎಷ್ಟೋ ವಿಷಯಗಳು ದೇವರಿಗೆ ಗೊತ್ತು. ನಿಮ್ಮ ಬಗ್ಗೆ ಇಷ್ಟೆಲ್ಲಾ ತಿಳ್ಕೊಂಡಿರೋ ದೇವರು ನೀವು ಚಿಂತೆಯಲ್ಲಿ ಮುಳುಗಿರುವಾಗ ಸಹಾಯ ಮಾಡದೇ ಇರ್ತಾನಾ!—1 ಪೇತ್ರ 5:7.