ಮಾಹಿತಿ ಇರುವಲ್ಲಿ ಹೋಗಲು

ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?

ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?

ಬೈಬಲ್‌ ಕೊಡೋ ಉತ್ತರ

 ಇಲ್ಲ. ಸಾಮಾನ್ಯವಾಗಿ ಜನ “ಹಣ ಮನುಷ್ಯನನ್ನ ಹಾಳುಮಾಡುತ್ತೆ” ಅಂತಾರೆ. ಆದ್ರೆ ಬೈಬಲ್‌ ಹಣ ಕೆಟ್ಟದು ಅಥವಾ ಎಲ್ಲ ಕೆಟ್ಟ ವಿಷಯಗಳಿಗೆ ಹಣನೇ ಮೂಲ ಕಾರಣ ಅಂತ ಹೇಳಲ್ಲ. ಆದ್ರೆ “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ” ಅಂತ ಹೇಳುತ್ತೆ.—1 ತಿಮೊತಿ 6:10.

 ದುಡ್ಡಿನ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ದುಡ್ಡನ್ನ ಸರಿಯಾಗಿ ಉಪಯೋಗಿಸಿದ್ರೆ ಅದ್ರಿಂದ ಪ್ರಯೋಜನ ಇದೆ, ಅದು “ಆಶ್ರಯ” ಕೊಡುತ್ತೆ ಅಂತ ಬೈಬಲ್‌ ಹೇಳುತ್ತೆ. (ಪ್ರಸಂಗಿ 7:12) ಬೇರೆಯವರಿಗೆ ಉದಾರವಾಗಿ ಸಹಾಯ ಮಾಡೋರನ್ನ, ಅಗತ್ಯ ಇರೋರಿಗೆ ಹಣ ಸಹಾಯ ಮಾಡೋರನ್ನ ಬೈಬಲ್‌ ಹೊಗಳುತ್ತೆ.—ಜ್ಞಾನೋಕ್ತಿ 11:25.

 ಆದ್ರೆ ಹಣನೇ ಸರ್ವಸ್ವ ಅನ್ನೋದ್ರ ಬಗ್ಗೆ ಬೈಬಲ್‌ ಎಚ್ಚರಿಕೆ ಕೊಡುತ್ತೆ. ಅದು ಹೇಳೋದು, “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ.” (ಇಬ್ರಿಯ 13:5) ಇದ್ರಿಂದ ಕಲಿಯೋ ಪಾಠ, ಜೀವ್ನಕ್ಕೆ ಬೇಕಾಗಿರೋದು ಊಟ, ಬಟ್ಟೆ, ಮನೆ. ಅದಕ್ಕೆ ನಮ್ಮ ಜೀವ್ನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಅಷ್ಟನ್ನ ಮಾತ್ರ ಕೊಡಬೇಕು. ದುಡ್ಡು ಮಾಡೋದೇ ನಮ್ಮ ಜೀವ್ನ ಆಗಿರಬಾರದು.—1 ತಿಮೊತಿ 6:8.

 ದುಡ್ಡಿನ ಮೇಲಿನ ಪ್ರೇಮದ ಬಗ್ಗೆ ಬೈಬಲ್‌ ಯಾಕೆ ಎಚ್ಚರಿಕೆ ಕೊಡುತ್ತೆ?

 ಅತಿ ಆಸೆ ಪಡೋರಿಗೆ ಶಾಶ್ವತ ಜೀವನ ಸಿಗಲ್ಲ. (ಎಫೆಸ 5:5) ಅತಿ ಆಸೆ ವಿಗ್ರಹಾರಾಧನೆ ಅಥ್ವಾ ಸುಳ್ಳು ಆರಾಧನೆಗೆ ಸಮ. (ಕೊಲೊಸ್ಸೆ 3:5) ಜನ ಹಣ ಮಾಡಕ್ಕೋಸ್ಕರ ಏನ್‌ ಬೇಕಾದ್ರೂ ಮಾಡೋಕೆ ರೆಡಿ ಇರ್ತಾರೆ. ಒಳ್ಳೇದು, ಕೆಟ್ಟದು ಅಂತ ನೋಡಲ್ಲ. “ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದಿರನು” ಅಂತ ಜ್ಞಾನೋಕ್ತಿ 28:20 ಹೇಳುತ್ತೆ. ದುಡ್ಡಿಗೋಸ್ಕರ ಜನ ಮೋಸ, ಸುಲಿಗೆ, ಕಿಡ್ನಾಪ್‌, ಬ್ಲ್ಯಾಕ್‌ಮೇಲ್‌, ಕೊಲೆ ಮಾಡೋಕೂ ಹಿಂದೆ ಮುಂದೆ ನೋಡಲ್ಲ.

 ಹಾಗಂತ ಹಣದಾಸೆ ಇರೋರೆಲ್ಲಾ ಕೆಟ್ಟದಾಗಿ ನಡ್ಕೊಳ್ತಾರೆ ಅಂತಲ್ಲ, ಆದ್ರೆ ಹಣದಾಸೆ ಇರೋರು ಕೆಟ್ಟ ಪರಿಣಾಮಗಳನ್ನ ಎದುರಿಸಲೇಬೇಕಾಗುತ್ತೆ. ಅದಕ್ಕೆ ಬೈಬಲ್‌ “ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ” ಅಂತ ಹೇಳುತ್ತೆ.—1 ತಿಮೊತಿ 6:9.

 ದುಡ್ಡಿನ ಬಗ್ಗೆ ಬೈಬಲ್‌ ಕೊಡೋ ಸಲಹೆಯಿಂದ ನಾವು ಹೇಗೆ ಪ್ರಯೋಜನ ಪಡೀಬಹುದು?

 ದುಡ್ಡಿಗಾಗಿ ನಮ್ಮಲ್ಲಿರೋ ಒಳ್ಳೇತನವನ್ನ ಬಿಟ್ಟುಬಿಡದಿದ್ರೆ, ಯೆಹೋವ ದೇವ್ರು ಇಷ್ಟಪಡೋ ರೀತಿಯಲ್ಲೇ ಜೀವ್ನ ಮಾಡಿದ್ರೆ ನಮ್ಗೆ ಒಳ್ಳೇ ಮನಸ್ಸಾಕ್ಷಿ ಇರುತ್ತೆ, ನಾವು ದೇವರನ್ನ ಖುಷಿಪಡಿಸ್ತೀವಿ ಮತ್ತು ಆತನ ಮೆಚ್ಚಿಗೆ ಪಡ್ಕೊಳ್ತೀವಿ. ದೇವರು ಇಷ್ಟಪಡೋ ರೀತಿಯಲ್ಲಿ ಜೀವನ ಮಾಡೋರಿಗೆ ಆತನು, “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಅಂತ ಹೇಳ್ತಾನೆ. (ಇಬ್ರಿಯ 13:5, 6) “ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು” ಅಂತನೂ ಮಾತು ಕೊಡ್ತಾನೆ.—ಜ್ಞಾನೋಕ್ತಿ 28:20.