ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ನನ್ನ ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಏನು ಮಾಡಲಿ?

ನನ್ನ ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಏನು ಮಾಡಲಿ?

 ಇತ್ತೀಚಿಗೆ ತುಂಬಾ ಯುವಜನರು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ. ಯಾಕೆ ಹೀಗೆ ಆಗ್ತಿದೆ? ನಿಮ್ಮ ಮಗುಗೂ ಆತ್ಮಹತ್ಯೆ ಮಾಡ್ಕೋಬೇಕು ಅಂತ ಅನಿಸ್ತಿದ್ಯಾ?

ಈ ಲೇಖನದಲ್ಲಿ

 ಈ ವಿಷಯದ ಬಗ್ಗೆ ಹೆತ್ತವರು ಯಾಕೆ ಜಾಗ್ರತೆ ವಹಿಸಬೇಕು?

 2009ರಿಂದ 2019ರ ತನಕ ಅಮೆರಿಕದಲ್ಲಿರೋ ಹೈಸ್ಕೂಲ್‌ ಮಕ್ಕಳಲ್ಲಿ ಖಿನ್ನತೆ ಕಾಯಿಲೆಯ ರೋಗ ಲಕ್ಷಣಗಳು ಜಾಸ್ತಿ ಆಗಿವೆ. ಆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆನೂ ಜಾಸ್ತಿ ಆಯ್ತು. a ಭಾರತದಲ್ಲಿ ಆತ್ಮಹತ್ಯೆ ಸಂಖ್ಯೆ ಜಾಸ್ತಿ ಆಗಿದೆ. ಇದ್ರ ಬಗ್ಗೆ ICMR ವರದಿ ಹೀಗಿದೆ: “ವಿಶ್ವ ಆರೋಗ್ಯ ಸಂಸ್ಥೆ ಹೇಳಿರೋ ಪ್ರಕಾರ 15ರಿಂದ 29 ವಯಸ್ಸಿನ ಯುವಜನರಲ್ಲಿ ಶೇಖಡ 15.72ರಷ್ಟು ಜನ ಆತ್ಮಹತ್ಯೆ ಮಾಡ್ಕೊತ್ತಿದ್ದಾರೆ.”

 “ನಾವು ನೆನಸದೆ ಇರೋ ಸಮಸ್ಯೆಗಳನ್ನ ಇವತ್ತು ಯುವಜನರು ಎದುರಿಸುತ್ತಿದ್ದಾರೆ . . . ಇದರಿಂದ ಅವರ ಮಾನಸಿಕ ಆರೋಗ್ಯ ಕೂಡ ಹಾಳಾಗ್ತಿದೆ.”—ವಿವೇಕ್‌ ಹೆಚ್‌. ಮೂರ್ತಿ, ಯು.ಎಸ್‌. ಸರ್ಜನ್‌ ಜನರಲ್‌.

 ಬೈಬಲ್‌ ತತ್ವ: “ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.”—ಜ್ಞಾನೋಕ್ತಿ 17:22.

 ನಿಮ್ಮ ಮಗು ಈ ತರ ಯೋಚಿಸ್ತಿದ್ಯಾ ಅಂತ ಹೇಗೆ ಕಂಡುಹಿಡಿಯೋದು?

 ಈ ವಿಷಯಗಳನ್ನ ಗಮನಿಸಿ.

  •   ಘಟನೆಗಳು. ಇತ್ತೀಚಿಗೆ ನಿಮ್ಮ ಮಗುನ ಯಾರಾದ್ರೂ ಅಸಡ್ಡೆ ಮಾಡಿದ್ರಾ? ಬ್ರೇಕ್‌ಅಪ್‌ ಆಗಿದ್ಯಾ? ಯಾವುದಾದರೂ ರೀತಿಯಲ್ಲಿ ಸೋಲು ಅನುಭವಿಸಿದ್ಯಾ ಅಥವಾ ನಿಮ್ಮ ಮಗು ಇಷ್ಟಪಡೋ ಯಾರಾದ್ರೂ ತೀರಿಹೋಗಿದ್ದಾರ? ಇವುಗಳಿಂದ ನೀವು ಅಂದುಕೊಳ್ಳೋದಕ್ಕಿಂತ ಜಾಸ್ತಿ ನೋವು ಅವಳಿಗೆ b ಆಗ್ತಿದ್ಯಾ?

  •   ನಡವಳಿಕೆ. ಕುಟುಂಬದವರ ಜೊತೆ ಫ್ರೆಂಡ್ಸ್‌ ಜೊತೆ ಸಮಯ ಕಳಿಯೋದನ್ನ ನಿಮ್ಮ ಮಗು ನಿಲ್ಲಿಸಿ ಬಿಟ್ಟಿದ್ಯಾ? ಅವಳು ಖುಷಿ ಖುಷಿಯಾಗಿ ಮಾಡುತ್ತಿದ್ದ ವಿಷಯಗಳನ್ನ ಮಾಡೋದನ್ನೂ ನಿಲ್ಲಿಸಿ ಬಿಟ್ಟಿದ್ದಾಳಾ? ಅವಳ ಮನಸ್ಸಿಗೆ ಹತ್ತಿರವಾಗಿದ್ದ, ಇಷ್ಟವಾಗಿದ್ದ ವಿಷಯಗಳನ್ನ ಮಾಡೋದನ್ನೂ ಬಿಟ್ಟಿದ್ದಾಳಾ?

  •   ಮಾತು. ನಿಮ್ಮ ಮಗು ಸಾಯೋದ್ರ ಬಗ್ಗೆ ಏನಾದ್ರೂ ಹೇಳ್ತಿದ್ಯಾ? “ನಾನು ಬದುಕಿದ್ದು ಏನ್‌ ಪ್ರಯೋಜನ ಸಾಯೋದೆ ಸರಿ ಅಲ್ವಾ” ಅಥವಾ ನಾನು ನಿಮಗೆ ಭಾರ ಆಗಿಬಿಟ್ಟಿದೀನಿ ಅನ್ಸುತ್ತೆ ಅಂತ ಏನಾದ್ರೂ ಹೇಳ್ತಿದ್ಯಾ?

     ಕೆಲವೊಮ್ಮೆ ಮಕ್ಕಳು ನೋವಲ್ಲಿ “ದುಡುಕಿ” ಮಾತಾಡ್ತಾರೆ ನಿಜ. (ಯೋಬ 6:3, ಪಾದಟಿಪ್ಪಣಿ.) ಆದ್ರೆ ಇನ್ನು ಕೆಲವೊಮ್ಮೆ ಸಹಾಯಕ್ಕಾಗಿ ಒಳಗೊಳಗೆ ಅಳ್ತಿರಬಹುದು. ಸನ್ನಿವೇಶ ಏನೇ ಇರಲಿ, ನಿಮ್ಮ ಮಗು ಏನಾದ್ರೂ ಸಾಯ್ತಿನಿ ಅಂತ ಹೇಳಿದ್ರೆ ಅದನ್ನ ಆಸಡ್ಡೆ ಮಾಡಬೇಡಿ, ಸಲೀಸಾಗಿ ತಗೋಬೇಡಿ.

 ಹೌದು ನಾನು ಅದರ ಬಗ್ಗೆ ಯೋಚನೆ ಮಾಡ್ತಿದ್ದೀನಿ ಅಂತ ನಿಮ್ಮ ಮಗು ಹೇಳಿದ್ರೆ, “ಯಾವಾಗ ಮತ್ತೆ ಹೇಗೆ ಆತ್ಮಹತ್ಯೆ ಮಾಡ್ಕೊಳ್ಳಬೇಕು ಅಂತ ಅಂದ್ಕೊಂಡಿದ್ದೀಯಾ?” ಅಂತಾನೂ ಕೇಳಿ. ಮಗು ಕೊಡೋ ಉತ್ತರದಿಂದ ಅವಳೆಷ್ಟು ಕಷ್ಟದಲ್ಲಿದ್ದಾಳೆ ಅಂತ ನಿಮಗೆ ಗೊತ್ತಾಗುತ್ತೆ.

 “ಹೆತ್ತವರಾಗಿ ಈ ತರ ಪ್ರಶ್ನೆ ಕೇಳೋಕೆ ನಮಗೆ ಭಯ ಆಗಬಹುದು. ಆದ್ರೆ ಈ ತರ ಪ್ರಶ್ನೆ ಕೇಳಿದಾಗ ಅವರು ಮನಸ್ಸು ಬಿಚ್ಚಿ ಮಾತಾಡ್ತಾರೆ ಅಂದ್ರೆ ಯಾಕೆ ಕೇಳಬಾರದು ಹೇಳಿ?”—ಸ್ಯಾಂಡ್ರಾ.

 ಬೈಬಲ್‌ ತತ್ವ: “ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು ಬಾವಿ ನೀರಿನ ತರ, ಬುದ್ಧಿವಂತ ಅದನ್ನ ಸೇದ್ತಾನೆ.”—ಜ್ಞಾನೋಕ್ತಿ 20:5.

 ನಿಮ್ಮ ಮಗುಗೆ ಸಾಯೋ ಯೋಚನೆ ಇದ್ರೆ ಏನು ಮಾಡೋದು?

  •   ತಾಳ್ಮೆ ತೋರಿಸಿ, ಮಗುನ ಅರ್ಥಮಾಡ್ಕೊಳ್ಳಿ. ಮೊದಲು, ಅವಳು ಮನಸ್ಸು ಬಿಚ್ಚಿ ಮಾತಾಡಿದಕ್ಕೆ ಥ್ಯಾಂಕ್ಸ್‌ ಹೇಳಿ. ಆಮೇಲೆ “ನಿನಗೆ ಎಷ್ಟು ಕಷ್ಟ ಆಗ್ತಿದೆ, ಎಷ್ಟು ನೋವಾಗ್ತಿದೆ ಅಂತ ನಾನು ತಿಳ್ಕೊಬೇಕು, ನಿನ್ನ ಮನಸಲ್ಲಿ ಬೇರೆ ಏನಾದ್ರೂ ಇದ್ರೆ ಪ್ಲೀಸ್‌ ಹೇಳ್ತೀಯಾ?” ಅಂತ ಕೇಳಿ.

     ಇದೇನು ದೊಡ್ಡ ಸಮಸ್ಯೆ ಅಲ್ಲ, ಇದಕ್ಕೆಲ್ಲ ಇಷ್ಟೇ “ಪರಿಹಾರ” ಅಂತ ತಕ್ಷಣ “ಪರಿಹಾರ” ಕೊಡಬೇಡಿ. ಮೊದಲು ಮಗು ಹೇಳೋದನ್ನ ತಾಳ್ಮೆಯಿಂದ ಕೇಳಿಸಿಕೊಳ್ಳಿ.

     ಬೈಬಲ್‌ ತತ್ವ: “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ, ಬೇಗ ಕೋಪ ಮಾಡ್ಕೊಬೇಡಿ.”—ಯಾಕೋಬ 1:19.

  •   ಮಗುನ ಸೇಫಾಗಿ ನೋಡ್ಕೊಳ್ಳಿ. ನಿಮ್ಮ ಮಗು ಬಗ್ಗೆ ಚೆನ್ನಾಗಿ ತಿಳ್ಕೊಂಡು ಈ ಕೆಳಗಿನ ವಿಷಯಗಳನ್ನ ಬರೆದಿಡಿ:

     ಅಪಾಯದ ಸೂಚನೆಗಳು. ನನ್ನ ಮಗು ಯಾವ ವಿಷಯದ ಬಗ್ಗೆ ಯೋಚನೆ ಮಾಡುವಾಗ ಅವಳಿಗೆ ಆತ್ಮಹತ್ಯೆ ಮಾಡ್ಕೊಳ್ಳಬೇಕು ಅನ್ನೋ ಆಲೋಚನೆ ಬರುತ್ತೆ?

     ಸಹಾಯ ಮಾಡೋ ವಿಷಯಗಳು. ಅವಳು ಯಾವ ಕೆಲಸ ಮಾಡಿದ್ರೆ ಆತ್ಮಹತ್ಯೆ ಬಗ್ಗೆ ಕಮ್ಮಿ ಯೋಚನೆ ಮಾಡ್ತಾಳೆ?

     ಸಹಾಯ. ನಿಮ್ಮ ಮಗುಗೆ ಸಹಾಯ ಮಾಡೋಕೆ ಮುಂದೆ ಬರೋ ಜನರಿದ್ದಾರಾ? ಇದರಲ್ಲಿ ನೀವು, ಒಬ್ಬ ಪ್ರೌಢ ವ್ಯಕ್ತಿ, ಮಾನಸಿಕ ಆರೋಗ್ಯ ತಜ್ಞ ಮತ್ತು ಆತ್ಮಹತ್ಯೆ ಮಾಡದೇ ಇರೋಕೆ ಸಹಾಯ ಮಾಡೋ ಸಂಘಟನೆಗಳು ಸೇರಿವೆ.

    ಸೇಫಾಗಿ ನೋಡ್ಕೊಳ್ಳೋಕೆ ಫ್ಲಾನ್‌ ಮಾಡಿ.

     ಬೈಬಲ್‌ ತತ್ವ: “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ.”—ಜ್ಞಾನೋ 21:5.

  •   ಹುಷಾರಾಗಿರಿ. ನಿಮ್ಮ ಮಗು ನೋಡೋಕೆ ಖುಷಿಖುಷಿಯಾಗಿದ್ರು ಅವಳ ಮೇಲೆ ಒಂದು ಕಣ್ಣಿಡಿ.

     “ನಂಗೆ ಈಗ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಇಲ್ಲ ಅಂತ ನನ್ನ ಮಗ ಹೇಳಿದಾಗ ಸದ್ಯ ಅವನು ಆ ಸಮಸ್ಯೆಯಿಂದ ಹೊರಗೆ ಬಂದ ಅಂದ್ಕೊಂಡೆ. ಅದೇ ನಾನು ಮಾಡಿದ ದೊಡ್ಡ ತಪ್ಪು. ಯಾಕಂದ್ರೆ ಮತ್ತೆ ಯಾವುದಾದ್ರೂ ಚಿಕ್ಕ ಪುಟ್ಟ ಸಮಸ್ಯೆಗಳಾದ್ರೂ ಅವರಿಗೆ ದಿಢೀರ್‌ ಅಂತ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಬರುತ್ತೆ.”—ಡ್ಯಾನಿಯೇಲ್‌.

     ಭಾವನೆಗಳನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳೋಕೆ ಮಗುಗೆ ಸಹಾಯ ಮಾಡಿ. ಭಾವನೆಗಳು ಯಾವಾಗ್ಲೂ ಒಂದೇ ತರ ಇರಲ್ಲ “ಹವಾಮಾನ ಬದಲಾಗೋ ತರ ಇದು ಬದಲಾಗುತ್ತೆ. ಜೋರಾಗಿ ಮಳೆ ಬರ್ತಿರುವಾಗ ಮಳೆನೇ ಬರ್ತಿಲ್ಲ ಅಂತ ಅಂದ್ಕೊಂಡು ಹೊರಗೆ ಹೋಗಿ ನಿಂತ್ಕೊಂಡ್ರೆ ಅದು ಮೂರ್ಖತನ. ಅದೇ ಸಮಯದಲ್ಲಿ ಅಯ್ಯೋ ಮಳೆ ಬರ್ತಿದೆ ಇನ್ನು ಯಾವತ್ತೂ ಸೂರ್ಯ ಬರೋದೇ ಇಲ್ಲ ಅಂತ ಅಂದ್ಕೊಳ್ಳೋದೂ ಮೂರ್ಖತನಾನೇ” ಅಂತ ದಿ ವೋಲ್‌ ಬ್ರೈನ್‌ ಚೈಲ್ಡ್‌ ಅನ್ನೋ ಪುಸ್ತಕ ಹೇಳುತ್ತೆ.

  •   ಭರವಸೆ ಕೊಡಿ. ನೀವು ತುಂಬ ಪ್ರೀತಿಸ್ತೀರ, ಸಹಾಯ ಮಾಡೋಕೆ ಯಾವಾಗಲೂ ರೆಡಿ ಇದ್ದೀರ ಅಂತ ಮಗುಗೆ ಭರವಸೆ ಕೊಡಿ. “ನೀನು ಈ ಭಾವನೆಯಿಂದ ಹೊರಗೆ ಬರೋಕೆ ನಾನು ಏನು ಮಾಡಬೇಕೋ ಅದನ್ನೆಲ್ಲ ಮಾಡೋಕೆ ರೆಡಿ ಇದ್ದೀನಿ” ಅಂತಾನೂ ಹೇಳಿ.

     ಬೈಬಲ್‌ ತತ್ವ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.

a ಖಿನ್ನತೆ ಇರೋ ಹೆಚ್ಚಿನವರು ಆತ್ಮಹತ್ಯೆ ಮಾಡ್ಕೊಳ್ಳಲ್ಲ. ಆದರೆ ಈ ಯೋಚನೆ ಬಂದಾಗ ಯಾರಿಗೆ ಖಿನ್ನತೆ ಇರುತ್ತೋ ಅವರು ಆತ್ಮಹತ್ಯೆ ಮಾಡ್ಕೊಳ್ತಾರೆ.

b ಈ ಲೇಖನದಲ್ಲಿ ಅವಳು ಅಂತ ಬಳಸಿ ಹುಡುಗಿಯರ ಬಗ್ಗೆ ಹೇಳ್ತಿರೋದಾದ್ರೂ ಇದು ಹುಡುಗರಿಗೂ ಅನ್ವಯಿಸುತ್ತೆ.