ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು| ಮಕ್ಕಳ ಪಾಲನೆ

ಮಕ್ಕಳು ಮತ್ತು ಸೋಶಿಯಲ್‌ ಮೀಡಿಯಾ—ಭಾಗ 1: ನನ್ನ ಮಗು ಸೋಶಿಯಲ್‌ ಮೀಡಿಯಾ ಬಳಸಬೇಕಾ?

ಮಕ್ಕಳು ಮತ್ತು ಸೋಶಿಯಲ್‌ ಮೀಡಿಯಾ—ಭಾಗ 1: ನನ್ನ ಮಗು ಸೋಶಿಯಲ್‌ ಮೀಡಿಯಾ ಬಳಸಬೇಕಾ?

 ಒಂದು ಸರ್ವೇ ಪ್ರಕಾರ ಶೇಕಡಾ 97ರಷ್ಟು ಯುವಜನರು ಸೋಶಿಯಲ್‌ ಮೀಡಿಯಾ ಬಳಸ್ತೀವಿ ಅಂತ ಹೇಳಿದರು. ನಿಮ್ಮ ಮಗುವಿಗೂ ಸೋಶಿಯಲ್‌ ಮೀಡಿಯಾ ಬಳಸಬೇಕು ಅನ್ನೋ ಆಸೆ ಇದ್ಯಾ? ಹಾಗಾದರೆ ನೀವು ಈ ಕೆಳಗಿನ ವಿಷಯಗಳನ್ನ ಮನಸ್ಸಲ್ಲಿಡಬೇಕು.

ಈ ಲೇಖನದಲ್ಲಿ

 ನಿಮ್ಮ ಮಗು ಸಮಯವನ್ನ ಹೇಗೆ ಬಳಸುತ್ತೆ?

 “ಸೋಶಿಯಲ್‌ ಮೀಡಿಯಾ ನಮ್ಮ ಗಮನ ಸೆಳೆಯೋ ತರ ಇದೆ. ನಾವು ಮೂರೊತ್ತೂ ಆನ್‌ಲೈನ್‌ನಲ್ಲಿದ್ದು ಏನಾದ್ರೂ ಬಂದಿದೆಯಾ ಅಂತ ಚೆಕ್‌ ಮಾಡೋ ತರ ಅದನ್ನ ಡಿಸೈನ್‌ ಮಾಡಲಾಗಿದೆ” ಅಂತ ಹೆಲ್ಪ್‌ಗೈಡ್‌ ಅನ್ನೋ ವೆಬ್‌ಸೈಟ್‌ ಹೇಳುತ್ತೆ.

 “ಒಂದೆರಡು ನಿಮಿಷ ಅಂದ್ಕೊಂಡು ಸೋಶಿಯಲ್‌ ಮೀಡಿಯಾ ನೋಡ್ತೀನಿ. ಆದ್ರೆ ಗಂಟೆಗಟ್ಟಲೆ ಅದ್ರೊಳಗೆ ಮುಳುಗಿ ಹೋಗ್ತೀನಿ. ಇದ್ರಿಂದ ಫೋನನ್ನ ಪಕ್ಕಕ್ಕಿಟ್ಟು ಬೇರೆ ಕೆಲಸಗಳನ್ನ ಮಾಡೋಕೆ ಕಷ್ಟ ಆಗ್ತಿದೆ.”—ಲಿನ್‌, 20.

 ನಿಮ್ಮನ್ನೇ ಕೇಳಿಕೊಳ್ಳಿ: ಸೋಶಿಯಲ್‌ ಮೀಡಿಯಾವನ್ನ ಎಷ್ಟು ಹೊತ್ತು ಬಳಸಬೇಕು ಅಂತ ನಾನು ಹೇಳಿದ್ರೆ ಅದನ್ನ ನನ್ನ ಮಗು ಪಾಲಿಸುತ್ತಾ? ನನ್ನ ಮಗು ಸೋಶಿಯಲ್‌ ಮೀಡಿಯಾವನ್ನ ಎಷ್ಟು ಹೊತ್ತು ಬಳಸಬೇಕು ಅಂತ ತಾನಾಗೇ ತೀರ್ಮಾನ ಮಾಡಿ ಅದನ್ನ ಪಾಲಿಸುವಷ್ಟು ಬೆಳೆದಿದ್ಯಾ?

 ಬೈಬಲ್‌ ತತ್ವ: “ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. . . ಬುದ್ಧಿ ಇರುವವ್ರ ತರ ನಡ್ಕೊಳ್ಳಿ. . . ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:15, 16.

ಸೋಶಿಯಲ್‌ ಮೀಡಿಯಾ ಬಗ್ಗೆ ಏನೂ ಹೇಳಿ ಕೊಡದೆ ಮಗುವಿಗೆ ಬಳಸೋಕೆ ಕೊಟ್ರೆ, ತರಬೇತಿ ಕೊಡದೆ ಕುದುರೆ ಓಡಿಸೋಕೆ ಕೊಟ್ಟಂಗೆ ಇರುತ್ತೆ.

 ನಿಮ್ಮ ಮಗು ಪ್ರಕಾರ ಫ್ರೆಂಡ್‌ಶಿಪ್‌ ಅಂದ್ರೇನು?

 ನಮಗೆ ತುಂಬ ಫ್ರೆಂಡ್ಸ್‌ ಇದ್ದಾರೆ ಅಂತ ಅಂದುಕೊಳ್ಳೋ ರೀತಿಯಲ್ಲಿ ಸೋಶಿಯಲ್‌ ಮೀಡಿಯಾವನ್ನ ಡಿಸೈನ್‌ ಮಾಡಿದ್ದಾರೆ. ಆದ್ರೆ ಇಲ್ಲಿರೋ ಎಲ್ರೂ ನಿಜವಾದ ಫ್ರೆಂಡ್ಸ್‌ ಅಲ್ಲ.

 “ತುಂಬ ಲೈಕ್ಸ್‌ ಮತ್ತು ಫಾಲೋವರ್ಸ್‌ ಇದ್ರೆ, ಅಷ್ಟು ಜನ ತಮಗೆ ಪ್ರೀತಿ ಮತ್ತು ಕಾಳಜಿ ತೋರಿಸ್ತಾರೆ ಅಂತ ಎಷ್ಟೋ ಯುವಜನರು ಅಂದುಕೊಳ್ಳೋದನ್ನ ನಾನು ನೋಡಿದ್ದೀನಿ. ನಿಜ ಏನಂದ್ರೆ ಎಷ್ಟೋ ಜನರಿಗೆ ಇವರ ಪರಿಚಯನೇ ಇರಲ್ಲ.”—ಪೆಟ್ರಿಶ್ಯಾ,17.

 ನಿಮ್ಮನ್ನೇ ಕೇಳಿಕೊಳ್ಳಿ: ಲೈಕ್ಸ್‌ ಮತ್ತು ಫಾಲೋವರ್ಸ್‌ಗಳನ್ನ ಗಳಿಸ್ತಾ ಆನ್‌ಲೈನ್‌ನಲ್ಲೇ ಹೆಸರುವಾಸಿಯಾಗೋದು ಮುಖ್ಯ ಅಲ್ಲ ಅಂತ ನನ್ನ ಮಗುವಿಗೆ ಗೊತ್ತಾ? ಸೋಶಿಯಲ್‌ ಮೀಡಿಯಾ ಬಿಟ್ಟು ನನ್ನ ಮಗುವಿಗೆ ಹೊರಗಡೆ ಹೋಗಿ ಫ್ರೆಂಡ್ಸ್‌ ಮಾಡಿಕೊಳ್ಳೋಕೆ ಆಗುತ್ತಾ?

 ಬೈಬಲ್‌ ತತ್ವ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.

 ನಿಮ್ಮ ಮಗುವಿನ ಭಾವನೆಗಳ ಮೇಲೆ ಪ್ರಭಾವ ಬೀರುತ್ತಾ?

 ಸೋಶಿಯಲ್‌ ಮೀಡಿಯಾವನ್ನ ಎಷ್ಟು ಬಳಸ್ತೀವೋ ಅಷ್ಟು ಒಂಟಿ ಭಾವನೆ, ಚಿಂತೆ ಮತ್ತು ಖಿನ್ನತೆ ಕಾಡುತ್ತೆ ಅಂತ ತಜ್ಞರು ಹೇಳಿದ್ದಾರೆ.

 “ನಿಮ್ಮನ್ನ ಬಿಟ್ಟು ನಿಮ್ಮ ಫ್ರೆಂಡ್ಸು ಬೇರೆ ಫ್ರೆಂಡ್ಸ್‌ ಜೊತೆ ಎಂಜಾಯ್‌ ಮಾಡ್ತಿರೋ ಫೋಟೋಗಳನ್ನ ನೋಡಿದಾಗ ಮನಸ್ಸಿಗೆ ತುಂಬ ಬೇಜಾರಾಗುತ್ತೆ.”—ಸೆರಿನಾ, 19.

 ನಿಮ್ಮನ್ನೇ ಕೇಳಿಕೊಳ್ಳಿ: ಸೋಶಿಯಲ್‌ ಮೀಡಿಯಾದಲ್ಲಿ ಬೇರೆಯವರು ಮಾಡೋದನ್ನ ನೋಡಿದ್ರೂ ನನ್ನ ಮಗು ತನ್ನ ಮೇಲೆನೇ ಎಲ್ಲಾ ಗಮನ ಬರದೇ ಇರೋ ತರ, ಪೈಪೋಟಿ ಮನೋಭಾವ ತೋರಿಸದೇ ಇರೋ ತರ ನಡ್ಕೊಳ್ಳೋಕೆ ಆಗುತ್ತಾ?

 ಬೈಬಲ್‌ ತತ್ವ: “ನಾವು ಅಹಂಕಾರಪಡದೆ, ಒಬ್ರ ಜೊತೆ ಒಬ್ರು ಪೈಪೋಟಿ ಮಾಡದೆ, ಅಸೂಯೆಪಡದೆ ಇರೋಣ.”—ಗಲಾತ್ಯ 5:26.

 ನಿಮ್ಮ ಮಗು ಆನ್‌ಲೈನ್‌ನಲ್ಲಿ ಏನು ಮಾಡುತ್ತೆ?

 ಸೋಶಿಯಲ್‌ ಮೀಡಿಯಾ ಸೈಬರ್‌ ಬೆದರಿಕೆ ಮಾಡೋದನ್ನ, ಸೆಕ್ಸ್‌ಟಿಂಗ್‌ ಮಾಡೋದನ್ನ, ಮತ್ತು ಅಶ್ಲೀಲ ಚಿತ್ರ ನೋಡೋದನ್ನ ತುಂಬ ಸುಲಭ ಮಾಡುತ್ತೆ. ನಿಮ್ಮ ಮಗು ತಾನಾಗೇ ಇದನ್ನೆಲ್ಲ ಮಾಡಬೇಕು ಅಂತ ಅಂದ್ಕೊಂಡಿಲ್ಲ ಅಂದ್ರೂ ಇದನ್ನೆಲ್ಲ ನೋಡುವಂತೆ ಸೋಶಿಯಲ್‌ ಮೀಡಿಯಾ ಮಾಡಿಬಿಡುತ್ತೆ.

 “ಮೊದಮೊದಲು ಸೋಶಿಯಲ್‌ ಮೀಡಿಯಾದಲ್ಲಿ ನೋಡೋ ವಿಷಯಗಳು ಅಷ್ಟೇನು ಅಪಾಯ ಅಲ್ಲ ಅಂತ ಅನಿಸಬಹುದು. ಆದ್ರೆ ಹೋಗ್ತಾಹೋಗ್ತಾ ಅದರಿಂದ ಖಂಡಿತ ಅಪಾಯ ಆಗುತ್ತೆ. ಅಷ್ಟೇ ಅಲ್ಲ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟ ಮಾತು ಮತ್ತು ಕೆಟ್ಟದಾಗಿ ನಡ್ಕೊಳ್ಳೋಕೆ ಪ್ರೋತ್ಸಾಹಿಸೋ ಸಂಗೀತಗಳು ಇವೆ.”—ಲಿಂಡ, 23.

 ನಿಮ್ಮನ್ನೇ ಕೇಳಿಕೊಳ್ಳಿ: ಇಂಟರ್ನೆಟ್‌ನ್ನ ಚೆನ್ನಾಗಿ ಬಳಸುವಷ್ಟು ನನ್ನ ಮಗು ಬೆಳೆದಿದ್ಯಾ? ಸೋಶಿಯಲ್‌ ಮೀಡಿಯಾದಲ್ಲಿ ಒಂದು ಕೆಟ್ಟ ವಿಷಯವನ್ನ ನೋಡಿದ ತಕ್ಷಣ ಅದನ್ನ ನೋಡಬಾರದು ಅಂತ ತಕ್ಷಣ ನಿಲ್ಲಿಸೋ ಧೈರ್ಯ ನನ್ನ ಮಗುವಿಗಿದ್ಯಾ?

 ಬೈಬಲ್‌ ತತ್ವ: “ಲೈಂಗಿಕ ಅನೈತಿಕತೆ, ಎಲ್ಲ ತರದ ಅಶುದ್ಧತೆ, ದುರಾಸೆ ಇವುಗಳ ಬಗ್ಗೆ ನೀವು ಮಾತಾಡ್ಲೂಬಾರದು. . . ನಾಚಿಕೆಗೆಟ್ಟ ನಡತೆ, ಅರ್ಥವಿಲ್ಲದ ಮಾತು, ಅಶ್ಲೀಲ ತಮಾಷೆ ಇವೂ ಸರಿಯಲ್ಲ.”—ಎಫೆಸ 5:3, 4.

 ಸೋಶಿಯಲ್‌ ಮೀಡಿಯಾ ನಿಜವಾಗಲೂ ಅಗತ್ಯನಾ?

 ಖುಷಿಯಾಗಿರೋಕೆ ಸಂತೋಷವಾಗಿ ಜೀವನ ಮಾಡೋಕೆ ಸೋಶಿಯಲ್‌ ಮೀಡಿಯಾ ಬೇಕೇ ಬೇಕು ಅಂತೇನಿಲ್ಲ. ಎಷ್ಟೋ ಯುವಜನರು, ಅದ್ರಲ್ಲೂ ಈ ಮುಂಚೆ ಸೋಶಿಯಲ್‌ ಮೀಡಿಯಾ ಬಳಸಿದವರು, ಇನ್ನು ಮುಂದೆ ಸೋಶಿಯಲ್‌ ಮೀಡಿಯಾ ಬಳಸಬಾರದು ಅಂತ ತೀರ್ಮಾನ ಮಾಡಿದ್ದಾರೆ.

 “ಸೋಶಿಯಲ್‌ ಮೀಡಿಯಾ ಬಳಸಿದ್ರಿಂದ ನನ್ನ ಅಕ್ಕನಿಗೆ ಎಷ್ಟೆಲ್ಲಾ ಕಷ್ಟಗಳಾಯ್ತು ಅಂತ ತಿಳ್ಕೊಂಡಾಗ ನಾನೂ ಬಳಸೋದನ್ನ ಬಿಟ್ಟುಬಿಡಬೇಕು ಅಂತ ತೀರ್ಮಾನ ಮಾಡಿದೆ. ಇದನ್ನ ಮಾಡಿದ ಮೇಲೆ ಜೀವನದಲ್ಲಿ ತುಂಬ ಖುಷಿಯಾಗಿದ್ದೀನಿ. ಎಷ್ಟೋ ಒಳ್ಳೆ ವಿಷಯಗಳನ್ನ ಮಾಡ್ತಿದ್ದೀನಿ.”—ನೇತನ್‌, 17.

 ನಮಗಿರೋ ಪಾಠ: ನೀವು ಅನುಮತಿಸಿರೋ ಸಮಯದಲ್ಲಿ ಮಾತ್ರ ನಿಮ್ಮ ಮಗು ಸೋಶಿಯಲ್‌ ಮೀಡಿಯಾ ಬಳಸುತ್ತೆ, ಒಳ್ಳೆ ಫ್ರೆಂಡ್ಸ್‌ಗಳನ್ನ ಮಾತ್ರ ಮಾಡುತ್ತೆ, ಅಷ್ಟೇ ಅಲ್ಲ ಯಾವ ಕೆಟ್ಟ ವಿಷಯಗಳನ್ನೂ ನೋಡಲ್ಲ ಅನ್ನೋ ನಂಬಿಕೆ ನಿಮಗಿದ್ರೆ ಮಾತ್ರ ಸೋಶಿಯಲ್‌ ಮೀಡಿಯಾ ಬಳಸೋಕೆ ಕೊಡಿ.

 ಬೈಬಲ್‌ ತತ್ವ: “ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.