ಹೋಶೇಯ 2:1-23

  • ದ್ರೋಹ ಮಾಡಿದ ಇಸ್ರಾಯೇಲನ್ನ ಶಿಕ್ಷಿಸಿದ್ದು (1-13)

  • ಅವಳು ತನ್ನ ಗಂಡನಾದ ಯೆಹೋವನ ಹತ್ರ ವಾಪಸ್‌ ಬರ್ತಾಳೆ (14-23)

    • ‘ಅವಳು ನನ್ನನ್ನ, ನನ್ನ ಗಂಡ ಅಂತ ಕರಿತಾಳೆ’ (16)

2  “ನಿಮ್ಮ ಸಹೋದರರಿಗೆ ‘ನನ್ನ ಜನ್ರು!’*+ ಅಂತಾನೂನಿಮ್ಮ ಸಹೋದರಿಯರಿಗೆ ‘ದೇವರು ಕರುಣೆ ತೋರಿಸಿದ ಸ್ತ್ರೀಯರು!’*+ ಅಂತಾನೂ ಹೇಳಿ.   ನಿಮ್ಮ ತಾಯನ್ನ ಖಂಡಿಸಿ, ಅವಳನ್ನ ಖಂಡಿಸಿ,ಯಾಕಂದ್ರೆ ಅವಳು ನನ್ನ ಹೆಂಡತಿಯಲ್ಲ,+ ನಾನು ಅವಳ ಗಂಡನಲ್ಲ. ಅವಳು ವೇಶ್ಯಾವಾಟಿಕೆಯನ್ನ ಬಿಟ್ಟುಬಿಡಬೇಕು,ಅವಳು ಯಾವತ್ತೂ ವ್ಯಭಿಚಾರ ಮಾಡಬಾರದು.*   ಇಲ್ಲಾಂದ್ರೆ ನಾನು ಅವಳ ಬಟ್ಟೆ ಕಿತ್ತುಅವಳು ಹುಟ್ಟಿದಾಗ ಇದ್ದ ಹಾಗೆ ಅವಳನ್ನ ಬೆತ್ತಲೆ ಮಾಡ್ತೀನಿ,ಅವಳನ್ನ ಕಾಡಿನ* ತರ ಮಾಡ್ತೀನಿ,ಅವಳನ್ನ ನೀರಿಲ್ಲದ ಒಣನೆಲದ ಸ್ಥಿತಿಗೆ ತರ್ತಿನಿ,ಬಾಯಾರಿಕೆಯಿಂದ ಸಾಯೋ ತರ ಮಾಡ್ತೀನಿ.   ಅವಳ ಮಕ್ಕಳಿಗೆ ನಾನು ಕರುಣೆ ತೋರಿಸಲ್ಲ,ಯಾಕಂದ್ರೆ ಅವರು ವೇಶ್ಯಾವಾಟಿಕೆಯಿಂದ ಹುಟ್ಟಿದ ಮಕ್ಕಳು.   ಅವ್ರ ತಾಯಿ ವೇಶ್ಯಾವಾಟಿಕೆ ಮಾಡಿದ್ದಾಳೆ.+ ಆ ಮಕ್ಕಳನ್ನ ಹೊಟ್ಟೆಯಲ್ಲಿ ಹೊತ್ತ ಅವಳು ನಾಚಿಕೆಗೆಟ್ಟವಳ ತರ ನಡೆದಿದ್ದಾಳೆ,+ಅವಳು ‘ನಾನು ಆಸೆಪಡೋ ನನ್ನ ಪ್ರಿಯತಮರ ಹತ್ರ ಹೋಗ್ತೀನಿ,+ಅವರು ನನಗೆ ರೊಟ್ಟಿ, ನೀರು, ಉಣ್ಣೆಬಟ್ಟೆ, ನಾರುಬಟ್ಟೆ,ಎಣ್ಣೆ, ಪಾನೀಯ ಕೊಡ್ತಾರೆ’ ಅಂದಳು.   ಹಾಗಾಗಿ ನಾನು ಮುಳ್ಳುಬೇಲಿ ಹಾಕಿ ಅವಳ ದಾರಿ ಅಡ್ಡಗಟ್ತೀನಿ,ಅವಳ ಮುಂದೆ ಕಲ್ಲಿನ ಗೋಡೆ ಕಟ್ತೀನಿ,ಆಗ ಅವಳಿಗೆ ದಾರಿಕಾಣದೆ ಹೋಗುತ್ತೆ.   ಅವಳು ಆಸೆಪಡೋ ತನ್ನ ಪ್ರಿಯತಮರ ಹಿಂದೆ ಓಡಿದ್ರೂ ಅವ್ರ ಹತ್ರ ಹೋಗೋಕೆ ಆಗಲ್ಲ,+ಅವಳು ಹುಡುಕಿದ್ರೂ ಅವರು ಸಿಗಲ್ಲ. ಆಗ ಅವಳು ‘ನಾನು ನನ್ನ ಗಂಡನ* ಹತ್ರ ವಾಪಸ್‌ ಹೋಗ್ತೀನಿ,+ನನ್ನ ಪರಿಸ್ಥಿತಿ ಮುಂಚೆನೇ ಚೆನ್ನಾಗಿತ್ತು’ ಅಂತ ಹೇಳ್ತಾಳೆ.+   ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆಯನ್ನ ಅವಳಿಗೆ ಕೊಟ್ಟಿದ್ದು ನಾನೇ.+ ಬೇಕಾದಷ್ಟು ಚಿನ್ನಬೆಳ್ಳಿ ಕೊಟ್ಟಿದ್ದೂ ನಾನೇ. ಆದ್ರೆ ಇದನ್ನವಳು ತಿಳ್ಕೊಳ್ಳಲಿಲ್ಲ,ಅವುಗಳನ್ನೆಲ್ಲ ಜನ್ರು ಬಾಳನ ಆರಾಧನೆಯಲ್ಲಿ ಬಳಸಿದ್ರು.+   ‘ಹಾಗಾಗಿ ನಾನು ಅವಳಿಗೆ ಏನೂ ಕೊಡಲ್ಲ,ಕೊಯ್ಲಿನ ಕಾಲದಲ್ಲಿ ಧಾನ್ಯವನ್ನ,ದ್ರಾಕ್ಷಿ ಕೊಯ್ಲಿನ ಸಮಯದಲ್ಲಿ ಹೊಸ ದ್ರಾಕ್ಷಾಮದ್ಯವನ್ನ ಅವಳಿಂದ ಕಸಿದ್ಕೊಳ್ತೀನಿ,+ಅವಳ ಮೈಮುಚ್ಚೋಕೆ ನಾನು ಕೊಟ್ಟ ಉಣ್ಣೆಬಟ್ಟೆಯನ್ನೂ ನಾರುಬಟ್ಟೆಯನ್ನೂ ಕಿತ್ಕೊಳ್ತೀನಿ. 10  ಅವಳು ಆಸೆಪಡೋ ಪ್ರಿಯತಮರ ಕಣ್ಮುಂದೆನೇ ಅವಳನ್ನ ಬೆತ್ತಲೆ ಮಾಡ್ತೀನಿ,ನನ್ನ ಕೈಯಿಂದ ಅವಳನ್ನ ಬಿಡಿಸೋಕೆ ಯಾವನಿಂದನೂ ಆಗಲ್ಲ.+ 11  ಅವಳ ಉಲ್ಲಾಸ, ಉತ್ಸವ, ಸಬ್ಬತ್‌, ಹಬ್ಬ,+ ಅಮಾವಾಸ್ಯೆಪ್ರತಿಯೊಂದನ್ನೂ ನಿಲ್ಲಿಸಿಬಿಡ್ತೀನಿ. 12  ಅವಳು ತನ್ನ ದ್ರಾಕ್ಷಿಬಳ್ಳಿಗಳನ್ನೂ ಅಂಜೂರದ ಮರಗಳನ್ನೂ ತೋರಿಸಿ,“ಇವು ನಾನು ಆಸೆಪಡೋ ಪ್ರಿಯತಮರು ನನಗೆ ಕೊಟ್ಟ ಸಂಬಳ” ಅಂತ ಹೇಳ್ತಾಳೆ,ನಾನು ಅವುಗಳನ್ನ ನಾಶಮಾಡ್ತೀನಿ. ಅವುಗಳನ್ನ ಕಾಡನ್ನಾಗಿ ಮಾಡ್ತೀನಿ,ಕಾಡುಪ್ರಾಣಿಗಳು ಅವುಗಳನ್ನ ತಿಂದು ಹಾಕುತ್ತೆ. 13  ಅವಳು ಬಾಳನ ಮೂರ್ತಿಗಳಿಗೆ ಬಲಿಗಳನ್ನ ಅರ್ಪಿಸಿದ್ದಕ್ಕಾಗಿ,+ಕಿವಿಯೋಲೆ,* ಆಭರಣಗಳಿಂದ ಸಿಂಗರಿಸ್ಕೊಂಡು ಅವಳು ಆಸೆಪಡೋ ಪ್ರಿಯತಮರ ಹಿಂದೆ ಓಡಿದ್ದಕ್ಕಾಗಿ,ನನ್ನನ್ನ ಮರೆತುಬಿಟ್ಟಿದ್ದಕ್ಕಾಗಿನಾನು ಅವಳಿಗೆ ಶಿಕ್ಷೆ ಕೊಡ್ತೀನಿ’+ಅಂತ ಯೆಹೋವ ಹೇಳ್ತಾನೆ. 14  ‘ಅವಳು ವಾಪಸ್‌ ಬರೋಕೆ ನಾನು ಅವಳ ಮನವೊಪ್ಪಿಸ್ತೀನಿ,ಕಾಡಿಗೆ ಅವಳನ್ನ ಕರ್ಕೊಂಡು ಹೋಗಿ,ಅವಳ ಹೃದಯ ಗೆಲ್ಲೋ ಹಾಗೆ ಮಾತಾಡ್ತೀನಿ. 15  ಅವತ್ತಿಂದ ನಾನು ಅವಳಿಗೆ ಅವಳ ದ್ರಾಕ್ಷಿ ತೋಟಗಳನ್ನ ವಾಪಸ್‌ ಕೊಡ್ತೀನಿ,+ಆಕೋರಿನ* ಕಣಿವೆಯನ್ನ+ ನಿರೀಕ್ಷೆಯ ಬಾಗಿಲಾಗಿ ಮಾಡ್ತೀನಿ. ಆಗ ಅಲ್ಲಿ ಅವಳು ತನ್ನ ಯೌವನದ ದಿನಗಳಲ್ಲಿ,ಈಜಿಪ್ಟ್‌* ದೇಶದಿಂದ ಹೊರಗೆ ಬಂದ ದಿನದಲ್ಲಿ ಸ್ಪಂದಿಸಿದ ತರ ನನಗೆ ಸ್ಪಂದಿಸ್ತಾಳೆ.+ 16  ಆ ದಿನದಿಂದ ಅವಳು ನನ್ನನ್ನ,ನನ್ನ ಯಜಮಾನ* ಅಂತ ಕರೆಯದೆ, ನನ್ನ ಗಂಡ ಅಂತ ಕರಿತಾಳೆ’ಅಂತ ಯೆಹೋವ ಹೇಳ್ತಾನೆ. 17  ‘ಬಾಳನ ಮೂರ್ತಿಗಳ ಹೆಸ್ರುಗಳು ಅವಳ ಬಾಯಲ್ಲಿ ಬರದ ಹಾಗೆ ಮಾಡ್ತೀನಿ.+ ಅವುಗಳ ಹೆಸ್ರುಗಳು ಯಾವತ್ತೂ ಅವಳ ನೆನಪಿಗೆ ಬರಲ್ಲ.+ 18  ಆ ದಿನದಲ್ಲಿ ನಾನು ನನ್ನ ಜನ್ರಿಗೋಸ್ಕರ ಕಾಡುಪ್ರಾಣಿಗಳ ಜೊತೆ,+ ಪಕ್ಷಿಗಳ ಜೊತೆ,ನೆಲದಲ್ಲಿ ಹರಿದಾಡೋ ಜೀವಿಗಳ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ.+ ದೇಶದಲ್ಲಿ ಬಿಲ್ಲು, ಕತ್ತಿ ಇಲ್ಲದ ಹಾಗೆ, ಯುದ್ಧ ಆಗದ ಹಾಗೆ ಮಾಡ್ತೀನಿ,+ನನ್ನ ಜನ ಸುರಕ್ಷಿತವಾಗಿ ವಾಸಿಸೋ ತರ* ಮಾಡ್ತೀನಿ.+ 19  ಶಾಶ್ವತಕ್ಕೂ ನಿನ್ನನ್ನೇ ನನ್ನ ವಧುವಾಗಿ ಸ್ವೀಕರಿಸ್ತೀನಿ,ನೀತಿ, ನ್ಯಾಯದಿಂದ ನಡಿತೀನಿ ಅಂತ,ಶಾಶ್ವತ ಪ್ರೀತಿ, ಕರುಣೆ ತೋರಿಸ್ತೀನಿ ಅಂತ ಮಾತುಕೊಡ್ತೀನಿ.+ 20  ನಾನು ನಿನಗೆ ನಂಬಿಗಸ್ತನಾಗಿ ಇರ್ತಿನಿ ಅಂತ ಮಾತು ಕೊಡ್ತೀನಿ,ಆಗ ನೀನು ಯೆಹೋವನಾದ ನನ್ನನ್ನ ಖಂಡಿತ ತಿಳ್ಕೊಳ್ತೀಯ.’+ 21  ಯೆಹೋವನಾದ ನಾನು ಹೇಳೋದೇನಂದ್ರೆ,‘ಆ ದಿನ ನಾನು ಆಕಾಶದ ಕೋರಿಕೆಯನ್ನ ಈಡೇರಿಸ್ತೀನಿ,ಆಕಾಶ ಭೂಮಿಯ ಕೋರಿಕೆಯನ್ನ ಈಡೇರಿಸುತ್ತೆ,+ 22  ಭೂಮಿ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆಯ ಕೋರಿಕೆಯನ್ನ ಈಡೇರಿಸುತ್ತೆ,ಅವು ಇಜ್ರೇಲಿನ*+ ಕೋರಿಕೆಯನ್ನ ಈಡೇರಿಸುತ್ತೆ. 23  ನಾನು ಅವಳನ್ನ ನನಗಾಗಿ ಭೂಮಿಯಲ್ಲಿ ಬೀಜದ ತರ ಬಿತ್ತುತ್ತೀನಿ,+ನಾನು ಯಾರಿಗೆ ಕರುಣೆ ತೋರಿಸಲಿಲ್ವೋ* ಅವಳಿಗೆ ಕರುಣೆ ತೋರಿಸ್ತೀನಿ,ಯಾರು ನನ್ನ ಜನ್ರಾಗಿರಲಿಲ್ವೋ* ಅವ್ರಿಗೆ “ನೀವು ನನ್ನ ಜನ್ರು” ಅಂತ ಹೇಳ್ತೀನಿ,+ಅವರು ನನಗೆ “ನೀನೇ ನಮ್ಮ ದೇವರು” ಅಂತ ಹೇಳ್ತಾರೆ.’”+

ಪಾದಟಿಪ್ಪಣಿ

ಹೋಶೇ 1:9ರ ಪಾದಟಿಪ್ಪಣಿ ನೋಡಿ.
ಹೋಶೇ 1:6ರ ಪಾದಟಿಪ್ಪಣಿ ನೋಡಿ.
ಅಕ್ಷ. “ವ್ಯಭಿಚಾರವನ್ನ ತನ್ನ ಸ್ತನಗಳ ಮಧ್ಯದಿಂದ ತೊಲಗಿಸಲಿ.”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಅಥವಾ “ಮೊದಲ್ನೇ ಗಂಡನ.”
ಅಥವಾ “ಮೂಗುತಿ.”
ಅಥವಾ “ಐಗುಪ್ತ.”
ಅಥವಾ “ದೇಶಭ್ರಷ್ಟತೆಯ; ಸಂಕಷ್ಟದ.”
ಅಥವಾ “ನನ್ನ ಬಾಳ್‌.”
ಅಥವಾ “ಮಲಗೋ ತರ.”
ಅರ್ಥ “ದೇವರು ಬೀಜ ಬಿತ್ತುತ್ತಾನೆ.”
ಹೋಶೇ 1:6ರ ಪಾದಟಿಪ್ಪಣಿ ನೋಡಿ.
ಹೋಶೇ 1:9ರ ಪಾದಟಿಪ್ಪಣಿ ನೋಡಿ.