ವಿಮೋಚನಕಾಂಡ 6:1-30

  • ಬಿಡುಗಡೆ ಬಗ್ಗೆ ಮತ್ತೆ ಆಶ್ವಾಸನೆ (1-13)

    • ಯೆಹೋವನ ಹೆಸ್ರಿನ ಪೂರ್ತಿ ಅರ್ಥ ಹೇಳಿರಲಿಲ್ಲ (2, 3)

  • ಮೋಶೆ ಆರೋನನ ವಂಶಾವಳಿ (14-27)

  • ಫರೋಹನ ಹತ್ರ ಮತ್ತೆ ಹೋಗಲು ಮೋಶೆಗೆ ಆಜ್ಞೆ (28-30)

6  ಆಗ ಯೆಹೋವ ಮೋಶೆಗೆ “ನಾನೀಗ ಫರೋಹನಿಗೆ ಏನು ಮಾಡ್ತೀನಿ ಅಂತ ನೋಡು.+ ಅವನಿಗೆ ನನ್ನ ಶಕ್ತಿ ತೋರಿಸ್ತೀನಿ.* ಆಗ ನನ್ನ ಜನ್ರನ್ನ ಅವನು ಕಳಿಸ್ಲೇ ಬೇಕಾಗುತ್ತೆ. ನನ್ನ ಶಕ್ತಿ ನೋಡಿದ ಮೇಲೆ ನನ್ನ ಜನ್ರನ್ನ ಆ ದೇಶದಿಂದ ಓಡಿಸಿಬಿಡ್ತಾನೆ” ಅಂದನು.+  ಆಮೇಲೆ ದೇವರು ಮೋಶೆಗೆ ಹೀಗಂದನು: “ನಾನು ಯೆಹೋವ.  ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕಾಣಿಸ್ಕೊಂಡು ನಾನೇ ಸರ್ವಶಕ್ತ ದೇವರು ಅಂತ+ ಅವರಿಗೆ ತಿಳಿಸ್ತಿದ್ದೆ. ಆದ್ರೆ ಯೆಹೋವ ಅನ್ನೋ ನನ್ನ ಹೆಸರಿನ+ ವಿಷ್ಯದಲ್ಲಿ ಅವರಿಗೆ ಪೂರ್ತಿ ತಿಳಿಸಲಿಲ್ಲ.+  ಅವರು ವಿದೇಶಿಯರಾಗಿ ಇದ್ದ ಕಾನಾನ್‌ ದೇಶನ ಅವರಿಗೆ ಕೊಡ್ತೀನಿ ಅಂತ ಅವರ ಜೊತೆ ಒಪ್ಪಂದ ಮಾಡಿದ್ದೆ.+  ಈಗ ಆ ಒಪ್ಪಂದನ ನೆನಪು ಮಾಡ್ಕೊಂಡಿದ್ದೀನಿ. ಈಜಿಪ್ಟ್‌ ಜನ್ರ ಹತ್ರ ಗುಲಾಮರಾಗಿ ಇರೋ ಇಸ್ರಾಯೇಲ್ಯರ ಕಷ್ಟದ ಕೂಗನ್ನ ಕೇಳಿದ್ದೀನಿ.+  ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+  ನಿಮ್ಮನ್ನ ನನ್ನ ಜನ್ರಾಗಿ ಮಾಡ್ಕೊಳ್ತೀನಿ. ನಾನು ನಿಮ್ಮ ದೇವರಾಗಿ ಇರ್ತಿನಿ.+ ಈಜಿಪ್ಟ್‌ ಜನ್ರ ಕೈಯಿಂದ ಬಿಡಿಸಿ ನಿಮ್ಮನ್ನ ಕರ್ಕೊಂಡು ಬರ್ತಿರೋ ನಾನೇ ನಿಮ್ಮ ದೇವರಾದ ಯೆಹೋವ ಅಂತ ಆಗ ನಿಮಗೆ ಖಂಡಿತ ಗೊತ್ತಾಗುತ್ತೆ.  ಅಬ್ರಹಾಮ, ಇಸಾಕ, ಯಾಕೋಬನಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ನಾನು ನಿಮ್ಮನ್ನ ಕರ್ಕೊಂಡು ಹೋಗ್ತೀನಿ. ಅದನ್ನ ನಿಮಗೆ ಸೊತ್ತಾಗಿ ಕೊಡ್ತೀನಿ.+ ನಾನು ಯೆಹೋವ.’”+  ಮೋಶೆ ಈ ಮಾತನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳಿದ. ಆದ್ರೆ ಅವರು ಆ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ. ಯಾಕಂದ್ರೆ ಅವರಿಗೆ ಬೇಜಾರಾಗಿತ್ತು, ಗುಲಾಮರಾಗಿ ಕೆಲಸ ಮಾಡಿ ಮಾಡಿ ಸುಸ್ತಾಗಿ ಹೋಗಿದ್ರು.+ 10  ಆಮೇಲೆ ಯೆಹೋವ ಮೋಶೆಗೆ 11  “ನೀನು ಈಜಿಪ್ಟಿನ ರಾಜ ಫರೋಹನ ಹತ್ರ ಹೋಗು. ಇಸ್ರಾಯೇಲ್ಯರನ್ನ ತನ್ನ ದೇಶದಿಂದ ಕಳಿಸಬೇಕು ಅಂತೇಳು” ಅಂದನು. 12  ಆಗ ಮೋಶೆ ಯೆಹೋವನಿಗೆ “ಇಸ್ರಾಯೇಲ್ಯರೇ ನನ್ನ ಮಾತು ಕೇಳ್ತಿಲ್ಲ,+ ಇನ್ನು ಫರೋಹ ಕೇಳ್ತಾನಾ? ನನಗೆ ಸರಿಯಾಗಿ ಮಾತಾಡಕ್ಕೂ ಬರಲ್ಲ” ಅಂದ.+ 13  ಆಗ ಮೋಶೆ ಮತ್ತು ಆರೋನನ ಜೊತೆ ಯೆಹೋವ ಮತ್ತೆ ಮಾತಾಡಿದನು. ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರೋಕೆ ಇಸ್ರಾಯೇಲ್ಯರಿಗೂ ಈಜಿಪ್ಟಿನ ರಾಜ ಫರೋಹನಿಗೂ ದೇವರ ಆಜ್ಞೆಗಳನ್ನ ಹೇಳಬೇಕು ಅಂದನು. 14  ಇಸ್ರಾಯೇಲ್ಯರ ಕುಲಗಳ ಪ್ರಧಾನರ ಹೆಸ್ರು: ರೂಬೇನ್‌ ಕುಲದ ಪ್ರಧಾನರು ಯಾರಂದ್ರೆ ಹನೋಕ್‌, ಪಲ್ಲೂ, ಹೆಚ್ರೋನ್‌, ಕರ್ಮೀ.+ ಇವರು ಇಸ್ರಾಯೇಲನ ಮೊದಲನೇ ಮಗನಾದ ರೂಬೇನನ+ ಗಂಡುಮಕ್ಕಳು. 15  ಸಿಮೆಯೋನ್‌ ಕುಲದ ಪ್ರಧಾನರು ಯಾರಂದ್ರೆ ಯೆಮೂವೇಲ್‌, ಯಾಮೀನ್‌, ಓಹದ್‌, ಯಾಕೀನ್‌, ಚೋಹರ್‌ ಮತ್ತು ಕಾನಾನ್ಯ ಸ್ತ್ರೀಯಿಂದ ಹುಟ್ಟಿದ ಶೌಲ.+ ಇವರು ಸಿಮೆಯೋನನ ಗಂಡುಮಕ್ಕಳು. 16  ಲೇವಿಯ+ ಗಂಡುಮಕ್ಕಳು ಗೇರ್ಷೋನ್‌, ಕೆಹಾತ್‌, ಮೆರಾರೀ.+ ಇವರು ಅವರವರ ಕುಟುಂಬಗಳಿಗೆ ಪ್ರಧಾನರು. ಲೇವಿ 137 ವರ್ಷ ಬದುಕಿದ. 17  ಗೇರ್ಷೋನನ ಗಂಡುಮಕ್ಕಳು ಲಿಬ್ನಿ, ಶಿಮ್ಮಿ. ಇವರು ಅವರವರ ಕುಟುಂಬಗಳಿಗೆ ಪ್ರಧಾನರು.+ 18  ಕೆಹಾತನ ಗಂಡುಮಕ್ಕಳು ಅಮ್ರಾಮ್‌, ಇಚ್ಹಾರ್‌, ಹೆಬ್ರೋನ್‌, ಉಜ್ಜೀಯೇಲ್‌.+ ಕೆಹಾತ 133 ವರ್ಷ ಬದುಕಿದ. 19  ಮೆರಾರೀಯ ಗಂಡುಮಕ್ಕಳು ಮಹ್ಲಿ, ಮೂಷಿ. ವಂಶಾವಳಿ ಪ್ರಕಾರ ಇವರೆಲ್ಲ ಲೇವಿ ಕುಲದ ಪ್ರಧಾನರು.+ 20  ಅಮ್ರಾಮ ತನ್ನ ತಂದೆಯ ಸಹೋದರಿಯಾದ ಯೋಕೆಬೆದಳನ್ನ ಮದುವೆ ಆದ.+ ಅಮ್ರಾಮ ಮತ್ತು ಅವಳಿಗೆ ಆರೋನ, ಮೋಶೆ ಹುಟ್ಟಿದ್ರು.+ ಅಮ್ರಾಮ 137 ವರ್ಷ ಬದುಕಿದ. 21  ಇಚ್ಹಾರನ ಗಂಡುಮಕ್ಕಳು ಕೋರಹ,+ ನೆಫೆಗ್‌, ಜಿಕ್ರಿ. 22  ಉಜ್ಜೀಯೇಲನ ಗಂಡುಮಕ್ಕಳು ಮೀಷಾಯೇಲ್‌, ಎಲೀಚಾಫಾನ್‌,+ ಸಿತ್ರಿ. 23  ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್‌, ಅಬೀಹೂ, ಎಲ್ಲಾಜಾರ್‌, ಈತಾಮಾರ್‌+ ಹುಟ್ಟಿದ್ರು. 24  ಕೋರಹನ ಗಂಡುಮಕ್ಕಳು ಅಸ್ಸೀರ್‌, ಎಲ್ಕಾನ, ಅಬೀಯಾಸಾಫ್‌.+ ಇವರು ಕೋರಹಿಯರ ಪ್ರಧಾನರು.+ 25  ಆರೋನನ ಮಗ ಎಲ್ಲಾಜಾರ+ ಪೂಟಿಯೇಲನ ಒಬ್ಬ ಮಗಳನ್ನ ಮದುವೆ ಆದ. ಎಲ್ಲಾಜಾರ ಮತ್ತು ಅವಳಿಗೆ ಫೀನೆಹಾಸ+ ಹುಟ್ಟಿದ್ರು. ವಂಶಾವಳಿ ಪ್ರಕಾರ ಇವರೇ ಲೇವಿ ಕುಲದ ಪ್ರಧಾನರು.+ 26  ಆರೋನ ಮತ್ತು ಮೋಶೆಗೆ ಯೆಹೋವ “ಈಜಿಪ್ಟ್‌ ದೇಶದಿಂದ ಇಸ್ರಾಯೇಲ್ಯರನ್ನ ಸೈನ್ಯದ ಹಾಗೆ ಗುಂಪು ಗುಂಪಾಗಿ ಕರ್ಕೊಂಡು ಬನ್ನಿ” ಅಂತ ಆಜ್ಞೆ ಕೊಟ್ಟನು.+ 27  ಇಸ್ರಾಯೇಲ್ಯರನ್ನ ಈಜಿಪ್ಟಿಂದ ಕರ್ಕೊಂಡು ಬರೋಕೆ ಅಲ್ಲಿನ ರಾಜ ಫರೋಹನ ಜೊತೆ ಮಾತಾಡಿದವರು ಈ ಮೋಶೆ ಆರೋನರೇ.+ 28  ಯೆಹೋವ ಈಜಿಪ್ಟ್‌ ದೇಶದಲ್ಲಿ ಮೋಶೆ ಜೊತೆ ಮಾತಾಡಿದನು. ಅದೇ ದಿನ 29  “ನಾನು ಯೆಹೋವ. ನಾನು ನಿನಗೆ ಹೇಳೋ ಎಲ್ಲ ಮಾತನ್ನ ಈಜಿಪ್ಟಿನ ರಾಜ ಫರೋಹನಿಗೆ ಹೇಳು” ಅಂತ ಮೋಶೆಗೆ ಯೆಹೋವ ಹೇಳಿದನು. 30  ಅದಕ್ಕೆ ಮೋಶೆ ಯೆಹೋವನಿಗೆ “ನನಗೆ ಸರಿಯಾಗಿ ಮಾತಾಡೋಕ್ಕೇ ಬರಲ್ಲ. ಫರೋಹ ನನ್ನ ಮಾತೆಲ್ಲಿ ಕೇಳ್ತಾನೆ?” ಅಂದ.+

ಪಾದಟಿಪ್ಪಣಿ

ಅಕ್ಷ. “ನನ್ನ ಬಲಿಷ್ಠ ಕೈ ಅವನನ್ನ ಒತ್ತಾಯಿಸುತ್ತೆ.”
ಅಥವಾ “ನನ್ನ ಬಲಿಷ್ಠ ತೋಳಿಂದ.”