ತೀತನಿಗೆ ಬರೆದ ಪತ್ರ 3:1-15

  • ಯೋಗ್ಯ ರೀತಿಯ ಅಧೀನತೆ (1-3)

  • ಒಳ್ಳೇ ಕೆಲಸ ಮಾಡೋಕೆ ಸಿದ್ಧನಿರು (4-8)

  • ವಾದ-ವಿವಾದ ಮಾಡುವವ್ರ ಜೊತೆ ಸೇರಬೇಡ (9-11)

  • ತೀತನಿಗೆ ಕೆಲವು ವಿಷ್ಯ ಮತ್ತು ವಂದನೆ (12-15)

3  ಸಹೋದರರು ಸರ್ಕಾರಗಳ, ಅಧಿಕಾರಿಗಳ ಮಾತು ಕೇಳಬೇಕು,+ ಒಳ್ಳೇ ಕೆಲಸಗಳನ್ನ ಮಾಡೋಕೆ ತಯಾರಾಗಿ ಇರಬೇಕು,  ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು.  ಯಾಕಂದ್ರೆ ಒಂದು ಕಾಲದಲ್ಲಿ ನಾವೂ ಬುದ್ಧಿ ಇಲ್ಲದವರು, ಮಾತು ಕೇಳದವರು, ಮೋಸ ಹೋದವರು, ಬೇರೆ ಬೇರೆ ಆಸೆ ಸುಖಕ್ಕೆ ಗುಲಾಮರು ಆಗಿದ್ವಿ. ಕೆಟ್ಟದು ಮಾಡ್ತಾ, ಹೊಟ್ಟೆಕಿಚ್ಚು ಪಡ್ತಾ ಇದ್ವಿ, ತುಂಬ ಕೆಟ್ಟವ್ರಾಗಿದ್ವಿ, ಒಬ್ರನ್ನೊಬ್ರು ದ್ವೇಷಿಸ್ತಾ ಇದ್ವಿ.  ಆದ್ರೂ ನಮ್ಮ ರಕ್ಷಕ ದೇವರು ಮನುಷ್ಯರಿಗೆ ದಯೆ ತೋರಿಸಿ+ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ ಅಂತ ತೋರಿಸಿದನು.  ದೇವರು ನಮ್ಮನ್ನ ರಕ್ಷಿಸಿದ್ದು ಆತನು ಕರುಣಾಮಯಿ ಆಗಿರೋದ್ರಿಂದ+ ಬಿಟ್ರೆ ನಾವೇನೋ ದೊಡ್ಡ ಕೆಲಸಗಳನ್ನ ಮಾಡಿದ್ದೀವಿ ಅಂತಲ್ಲ.+ ಆತನು ನಮ್ಮನ್ನ ಶುದ್ಧ ಮಾಡಿ, ಪವಿತ್ರಶಕ್ತಿಯ ಮೂಲಕ+ ನಮ್ಮನ್ನ ಹೊಸದಾಗಿ ಮಾಡಿ ನಮ್ಮನ್ನ ರಕ್ಷಿಸಿದನು.+ ಹಾಗೆ ಶುದ್ಧ ಮಾಡಿದ್ರಿಂದ ನಾವು ಇವತ್ತು ಜೀವಂತ ಇದ್ದೀವಿ.  ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನು ಆ ಪವಿತ್ರಶಕ್ತಿಯನ್ನ ನಮ್ಮ ಮೇಲೆ ಧಾರಾಳವಾಗಿ ಸುರಿದನು.+  ಹೀಗೆ ಆತನು ತನ್ನ ಅಪಾರ ಕೃಪೆಯಿಂದ ನಾವು ನೀತಿವಂತರು ಅಂತ ತೀರ್ಪಾಗಿ+ ಶಾಶ್ವತ ಜೀವ+ ಅನ್ನೋ ನಿರೀಕ್ಷೆಯನ್ನ ಆಸ್ತಿಯಾಗಿ+ ಪಡ್ಕೊಳ್ಳೋಕೆ ಆಯ್ತು.  ಇದೆಲ್ಲ ನಂಬುವಂಥ ಮಾತು, ನೀನು ಇದನ್ನ ಯಾವಾಗ್ಲೂ ಒತ್ತಿ ಹೇಳಬೇಕಂತ ಇಷ್ಟಪಡ್ತೀನಿ. ಆಗ ದೇವರನ್ನ ನಂಬಿದವರು ಒಳ್ಳೇ ಕೆಲಸಕ್ಕೆ ಯಾವಾಗ್ಲೂ ಪೂರ್ತಿ ಗಮನಕೊಡೋಕೆ ಆಗುತ್ತೆ. ಈ ಮಾತುಗಳಿಂದ ಜನ್ರಿಗೆ ಒಳ್ಳೇದಾಗುತ್ತೆ, ತುಂಬ ಪ್ರಯೋಜನ ಆಗುತ್ತೆ.  ಹುಚ್ಚು ವಾದ-ವಿವಾದ, ವಂಶಾವಳಿ ಬಗ್ಗೆ ಚರ್ಚೆ, ನಿಯಮ ಪುಸ್ತಕದ ಬಗ್ಗೆ ಜಗಳ ಇದೆಲ್ಲದ್ರಿಂದ ನೀನು ದೂರ ಇರು. ಯಾಕಂದ್ರೆ ಅದ್ರಿಂದ ಏನೂ ಪ್ರಯೋಜನ ಇಲ್ಲ, ಸುಮ್ನೆ ವ್ಯರ್ಥ.+ 10  ಸುಳ್ಳು ಬೋಧನೆ ಹಬ್ಬಿಸುವವನಿಗೆ+ ಒಂದು ಸಲ, ಎರಡು ಸಲ ಬುದ್ಧಿ ಹೇಳು.*+ ಕೇಳದಿದ್ರೆ ಅವನ ಸಹವಾಸ ಮಾಡಬೇಡ.+ 11  ಯಾಕಂದ್ರೆ ಅವನು ಒಳ್ಳೇ ದಾರಿ ಬಿಟ್ಟು ಹೋಗಿದ್ದಾನೆ, ಪಾಪ ಮಾಡ್ತಿದ್ದಾನೆ. ಅವನು ಮಾಡಿದ ಕೆಲಸಕ್ಕಾಗಿ ಈಗಾಗ್ಲೇ ತೀರ್ಪಾಗಿದೆ ಅಂತ ನಿನಗೆ ಗೊತ್ತಿದೆ ತಾನೇ. 12  ಚಳಿಗಾಲದಲ್ಲಿ ನಾನು ನಿಕೊಪೊಲಿಯಲ್ಲಿ ಇರಬೇಕು ಅಂದ್ಕೊಂಡಿದ್ದೀನಿ. ಹಾಗಾಗಿ ಅರ್ತೆಮ ಅಥವಾ ತುಖಿಕನನ್ನ+ ನಾನು ನಿನ್ನ ಹತ್ರ ಕಳಿಸಿದಾಗ ನೀನು ಅಲ್ಲಿಗೆ ಆದಷ್ಟು ಬೇಗ ಬಾ. 13  ನಿಯಮ ಪುಸ್ತಕದಲ್ಲಿ ಪ್ರವೀಣನಾದ ಜೇನನಿಗೆ ಮತ್ತು ಅಪೊಲ್ಲೋಸನಿಗೆ ಬೇಕಾದದ್ದನ್ನೆಲ್ಲ ನೋಡಿ ಕೊಡು. ಯಾಕಂದ್ರೆ ಪ್ರಯಾಣದಲ್ಲಿ ಅವ್ರಿಗೆ ಏನು ಕಮ್ಮಿ ಆಗಬಾರದು.+ 14  ನಮ್ಮ ಜನ್ರೂ ಯಾವಾಗ್ಲೂ ಒಳ್ಳೇ ಕೆಲಸ ಮಾಡೋದನ್ನ ಕಲೀಲಿ. ಆಗ ಕಷ್ಟ ಬಂದಾಗ ಸಹಾಯ ಮಾಡೋಕೆ ಅವ್ರಿಗೆ ಆಗುತ್ತೆ.+ ಅವರು ಸೋಮಾರಿಗಳಾಗಿ ಇರಲ್ಲ.+ 15  ನನ್ನ ಜೊತೆ ಇರುವವ್ರೆಲ್ಲ ನಿನಗೆ ವಂದನೆ ಹೇಳಿದ್ದಾರೆ. ನಮ್ಮನ್ನ ಪ್ರೀತಿಸೋ ವಿಶ್ವಾಸಿಗಳಿಗೆ ನನ್ನ ವಂದನೆ ಹೇಳು. ದೇವರು ನಿಮ್ಮೆಲ್ಲರಿಗೂ ಅಪಾರ ಕೃಪೆ ತೋರಿಸ್ಲಿ.

ಪಾದಟಿಪ್ಪಣಿ

ಅಥವಾ “ಮಣಿಯೋ ಗುಣ ಇರಬೇಕು.”
ಅಥವಾ “ಎಚ್ಚರಿಸು.”