ಇಬ್ರಿಯರಿಗೆ ಬರೆದ ಪತ್ರ 2:1-18

  • ಇನ್ನೂ ಹೆಚ್ಚು ಗಮನ ಕೊಡು (1-4)

  • ಎಲ್ಲವೂ ಯೇಸುವಿಗೆ ಅಧೀನ (5-9)

  • ಯೇಸು, ಆತನ ಸಹೋದರರು (10-18)

    • ಅವ್ರನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿ (10)

    • ಕರುಣಾಮಯಿ ಮಹಾ ಪುರೋಹಿತ (17)

2  ಹಾಗಾಗಿ ನಾವು ಕೇಳಿಸ್ಕೊಂಡ ವಿಷ್ಯಕ್ಕೆ ಇನ್ನೂ ಹೆಚ್ಚು ಗಮನ ಕೊಡಬೇಕು.+ ಆಗ ನಾವು ಯಾವತ್ತೂ ನಂಬಿಕೆಯಿಂದ ದೂರ ತೇಲಿ ಹೋಗಲ್ಲ.+  ದೇವದೂತರ ಮೂಲಕ ಹೇಳಿದ ಮಾತು ನಿಜ ಅಂತ ಪಕ್ಕಾ ಆಗಿದೆ.+ ಆ ಮಾತನ್ನ ಮೀರಿ ಪಾಪಮಾಡಿದ, ಮಾತು ಕೇಳದೆ ಹೋದ ಎಲ್ರಿಗೂ ನ್ಯಾಯವಾಗಿ ಶಿಕ್ಷೆ ಸಿಕ್ಕಿದೆ.+  ಅಂದ್ಮೇಲೆ ನಮ್ಮ ರಕ್ಷಣೆಗಾಗಿ ದೇವರು ಮಾಡಿದ ಶ್ರೇಷ್ಠ ವಿಷ್ಯವನ್ನ ತಳ್ಳಿಹಾಕಿದ್ರೆ ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗುತ್ತಾ?+ ಈ ಶ್ರೇಷ್ಠ ವಿಷ್ಯದ ಬಗ್ಗೆನೇ ನಮ್ಮ ಪ್ರಭು ಮಾತಾಡೋಕೆ ಶುರುಮಾಡಿದ.+ ಅದನ್ನ ಕಿವಿಯಾರೆ ಕೇಳಿಸ್ಕೊಂಡವ್ರೇ ನಮಗೆ ಹೇಳಿದ್ರು.  ದೇವರೂ ಅದ್ಭುತಗಳನ್ನ ಆಶ್ಚರ್ಯ ಆಗೋ ಕೆಲಸಗಳನ್ನ ಬೇರೆ ಬೇರೆ ಮಹಾ ಕೆಲಸಗಳನ್ನ+ ಮಾಡೋ ಮೂಲಕ, ತನ್ನ ಇಷ್ಟದ ಪ್ರಕಾರ ಪವಿತ್ರಶಕ್ತಿಯ ಉಡುಗೊರೆಯನ್ನ ಹಂಚೋ ಮೂಲಕ ಅವ್ರಿಗೆ ಸಾಕ್ಷಿಕೊಟ್ಟನು.+  ನಾವು ಮುಂದೆ ಬರೋ ಲೋಕದ ಬಗ್ಗೆ ಮಾತಾಡ್ತಿದ್ದೀವಿ. ಅದನ್ನ ಆಳೋಕೆ ದೇವರು ತನ್ನ ದೂತರನ್ನ ನೇಮಿಸಲಿಲ್ಲ.+  ಇದಕ್ಕೆ ಸಾಕ್ಷಿಯಾಗಿ ಒಬ್ಬನು ಬರೆದಿದ್ದು “ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ? ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?+  ನೀನು ಅವನನ್ನ ದೇವದೂತರಿಗಿಂತ ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ, ನೀನು ಅವನಿಗೆ ಮಹಿಮೆ ಗೌರವನ ಕಿರೀಟವಾಗಿ ಇಟ್ಟಿದ್ದೀಯ, ನಿನ್ನ ಸೃಷ್ಟಿಯ ಮೇಲೆ ಅವನಿಗೆ ಅಧಿಕಾರ ಕೊಟ್ಟೆ.  ನೀನು ಎಲ್ಲಾನೂ ಅವನ ಕಾಲಿನ ಕೆಳಗಿಟ್ಟೆ.”+ ದೇವರು ಒಂದನ್ನೂ ಬಿಡದೆ ಎಲ್ಲಾನೂ+ ಆತನಿಗೆ ಅಧೀನ ಮಾಡಿದನು.+ ಆದ್ರೆ ಎಲ್ಲ ಆತನಿಗೆ ಅಧೀನ ಆಗಿರೋದನ್ನ ನಾವು ಇನ್ನೂ ನೋಡಿಲ್ಲ.+  ಯೇಸುವನ್ನ ದೇವದೂತರಿಗಿಂತ ಸ್ವಲ್ಪ ಕಮ್ಮಿಯಾಗಿ ಸೃಷ್ಟಿ ಮಾಡಲಾಯ್ತು.+ ಆತನು ಕಷ್ಟ ಅನುಭವಿಸಿ ಸತ್ತಿದ್ರಿಂದ ಆತನಿಗೆ ಮಹಿಮೆ ಗೌರವವನ್ನ ಕಿರೀಟವಾಗಿ ಇಟ್ಟಿರೋದನ್ನ ನಾವು ನೋಡ್ತೀವಿ.+ ದೇವರ ಅಪಾರ ಕೃಪೆಯಿಂದ ಆತನು ಎಲ್ರಿಗೋಸ್ಕರ ಸಾವಿನ ರುಚಿ ನೋಡಿದನು.+ 10  ಎಲ್ಲ ಇರೋದು ದೇವರಿಗಾಗಿ. ಆತನಿಂದಾನೇ ಎಲ್ಲ ಬಂದಿದೆ. ತುಂಬ ಗಂಡು ಮಕ್ಕಳನ್ನ ಮಹಿಮೆ ಪಡಿಸೋಕೆ+ ರಕ್ಷಣೆಯ ಮುಖ್ಯ ಪ್ರತಿನಿಧಿಯನ್ನ+ ಕಷ್ಟ ಅನುಭವಿಸೋ ಹಾಗೆ ಬಿಡೋದು ಸರಿ ಅಂತ ದೇವರಿಗೆ ಅನಿಸ್ತು. ಈ ತರ ಆ ಮಕ್ಕಳನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿಯನ್ನ ಅರ್ಹನನ್ನಾಗಿ ಮಾಡಿದನು.*+ 11  ಪವಿತ್ರ ಮಾಡ್ತಾ ಇರುವವನಿಗೂ ಪವಿತ್ರರಾಗ್ತಾ ಇರುವವರಿಗೂ+ ಒಬ್ಬನೇ ತಂದೆ.+ ಹಾಗಾಗಿ ಆತನು ಅವ್ರನ್ನ ಸಹೋದರರು ಅಂತ ಕರಿಯೋಕೆ ನಾಚಿಕೆಪಡಲ್ಲ.+ 12  ಯಾಕಂದ್ರೆ “ನಾನು ನನ್ನ ಸಹೋದರರಿಗೆ ನಿನ್ನ ಹೆಸ್ರನ್ನ ಹೇಳ್ತೀನಿ. ಗೀತೆಗಳನ್ನ ಹಾಡ್ತಾ ಸಭೆ ಮಧ್ಯದಲ್ಲಿ ನಿನ್ನನ್ನ ಹೊಗಳ್ತೀನಿ” ಅಂತ ಆತನು ಹೇಳ್ತಾನೆ.+ 13  ಅಷ್ಟೇ ಅಲ್ಲ “ನಾನು ಆತನ ಮೇಲೆ ಭರವಸೆ ಇಡ್ತೀನಿ”+ ಅಂತ, “ಯೆಹೋವ* ನನಗೆ ಕೊಟ್ಟ ಮಕ್ಕಳ ಜೊತೆ ನಾನು ಇದ್ದೀನಿ” ಅಂತ ಹೇಳ್ತಾನೆ.+ 14  ಆ ‘ಮಕ್ಕಳು’ ಮೂಳೆಮಾಂಸದ ದೇಹದಲ್ಲಿ ಇದ್ದದ್ರಿಂದ ಆತನೂ ಮೂಳೆಮಾಂಸದ ದೇಹವಿರೋ ಮಾನವನಾದ.+ ಹೀಗೆ ಆತನಿಗೆ ತನ್ನ ಮರಣದ ಮೂಲಕ ಸೈತಾನನನ್ನ+ ಅಂದ್ರೆ ಸಾಯಿಸೋಕೆ ಶಕ್ತಿ ಇರುವವನನ್ನ ನಾಶ ಮಾಡೋಕೆ,+ 15  ಸಾವಿನ ಭಯಕ್ಕೆ ಜೀವನವಿಡೀ ದಾಸರಾಗಿದ್ದ ಎಲ್ರನ್ನ ಬಿಡಿಸೋಕೆ ಸಾಧ್ಯ ಆಯ್ತು.+ 16  ಆತನು ನಿಜವಾಗ್ಲೂ ಸಹಾಯ ಮಾಡ್ತಿರೋದು ದೇವದೂತರಿಗಲ್ಲ, ಅಬ್ರಹಾಮನ ಸಂತತಿಗೆ.+ 17  ಹಾಗಾಗಿ ಆತನು ಕರುಣಾಮಯಿ ನಂಬಿಗಸ್ತ ಮಹಾ ಪುರೋಹಿತನಾಗಿ ದೇವರ ಸೇವೆ ಮಾಡೋಕೆ, ನಮ್ಮ ಪಾಪಗಳನ್ನ ಮುಚ್ಚೋಕೆ+ ಬಲಿ* ಅರ್ಪಿಸೋಕೆ+ ಎಲ್ಲ ವಿಧದಲ್ಲೂ+ ತನ್ನ ಸಹೋದರನ ಹಾಗೆ ಆಗಬೇಕಿತ್ತು. 18  ಆತನಿಗೆ ಪರೀಕ್ಷೆ ಬಂದಾಗ+ ಕಷ್ಟ ಅನುಭವಿಸಿದ್ರಿಂದ ಪರೀಕ್ಷೆ ಬರುವಂಥವ್ರಿಗೆ ಸಹಾಯ ಮಾಡೋಕೆ ಆತನಿಂದ ಆಗುತ್ತೆ.+

ಪಾದಟಿಪ್ಪಣಿ

ಅಕ್ಷ. “ಪರಿಪೂರ್ಣನಾದನು.”
ಅಥವಾ “ಪ್ರಾಯಶ್ಚಿತ್ತ ಬಲಿ.”