ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿ ತೋರಿಸಿ

ಪ್ರೀತಿ ತೋರಿಸಿ

ಯಾಕೆ ಪ್ರಾಮುಖ್ಯ?

ಪ್ರೀತಿ ತೋರಿಸಲಿಲ್ಲ ಅಂದ್ರೆ ಭೇದಭಾವನ ನಮ್ಮ ಮನಸ್ಸಿಂದ ತೆಗೆದುಹಾಕೋದು ಕಷ್ಟ. ಉದಾಹರಣೆಗೆ ಕೆಲವು ಕಾಯಿಲೆಗಳಿಂದ ಹುಷಾರಾಗೋಕೆ ಸ್ವಲ್ಪ ಟೈಂ ಮತ್ತು ಪ್ರಯತ್ನ ಬೇಕು. ಅದೇ ತರ ಭೇದಭಾವ ಅನ್ನೋದು ನಮ್ಮ ಮನಸ್ಸಲ್ಲಿ ಬೇರೂರಿಬಿಟ್ಟಿದ್ರೆ ಅದನ್ನ ತೆಗೆದುಹಾಕೋಕೆ ಸ್ವಲ್ಪ ಟೈಂ ಮತ್ತು ಪ್ರಯತ್ನ ಬೇಕು. ಹಾಗಾಗಿ ಪ್ರೀತಿ ತೋರಿಸಿ.

ಪವಿತ್ರ ಗ್ರಂಥದಲ್ಲಿರೋ ಸಲಹೆ

“ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.”—ಕೊಲೊಸ್ಸೆ 3:14.

ಈ ಸಲಹೆಯಿಂದ ನಾವೇನು ಕಲಿಬಹುದು? ನೀವು ಯಾರಿಗಾದ್ರು ಸಹಾಯ ಮಾಡಿದ್ರೆ ನಿಮ್ಮ ಮಧ್ಯ ಇರೋ ಪ್ರೀತಿ ಜಾಸ್ತಿ ಆಗುತ್ತೆ. ಪ್ರೀತಿ ಜಾಸ್ತಿ ಆಗ್ತಾ ಹೋದಂತೆ ನಿಮ್ಮ ಮನಸ್ಸಲ್ಲಿ ಅವರ ಬಗ್ಗೆ ಭೇದಭಾವ ಅಥವಾ ದ್ವೇಷ ಇದ್ರೆ ಕಮ್ಮಿ ಆಗುತ್ತೆ.

ನೀವೇನು ಮಾಡಬಹುದು?

ನಿಮಗೆ ತಪ್ಪಭಿಪ್ರಾಯ ಇದ್ದ ಗುಂಪಿನ ಜನರಿಗೆ ಪ್ರೀತಿ ತೋರಿಸಿ. ಪ್ರೀತಿ ತೋರಿಸೋಕೆ ದೊಡ್ಡ ದೊಡ್ಡ ವಿಷಯಗಳನ್ನೇ ಮಾಡಬೇಕಂತಿಲ್ಲ, ಚಿಕ್ಕ-ಪುಟ್ಟ ವಿಷಯಗಳನ್ನ ಮಾಡಿದ್ರು ಸಾಕು. ಉದಾಹರಣೆಗೆ:

ಚಿಕ್ಕ-ಪುಟ್ಟ ಸಹಾಯ ಮಾಡ್ತಾ ಪ್ರೀತಿ ತೋರಿಸಿ, ಆಗ ಭೇದಭಾವನ ಮನಸ್ಸಿಂದ ತೆಗೆದುಹಾಕೋಕೆ ಆಗುತ್ತೆ

  • ಬಸ್ಸಲ್ಲಿ ಪ್ರಯಾಣಿಸುವಾಗ ನಿಮ್ಮ ಸೀಟು ಬಿಟ್ಟುಕೊಡಬಹುದು. ಅವರಿಗೆ ಯಾವುದಾದ್ರು ವಿಳಾಸ ಗೊತ್ತಿಲ್ಲ ಅಂದ್ರೆ ದಾರಿ ತೋರಿಸಿ ಸಹಾಯ ಮಾಡಬಹುದು.

  • ಅವ್ರಿಗೆ ನಿಮ್ಮ ಭಾಷೆ ಅಷ್ಟಾಗಿ ಗೊತ್ತಿಲ್ಲ ಅಂದ್ರೂ ಅವರ ಯೋಗಕ್ಷೇಮ ವಿಚಾರಿಸಲು ಪ್ರಯತ್ನಿಸಬಹುದು.

  • ಅವರು ಮಾಡೋ ಕೆಲವು ವಿಷಯಗಳು ನಿಮಗೆ ಇಷ್ಟ ಆಗದಿದ್ದರೆ ಕೋಪ ಮಾಡಿಕೊಳ್ಳದೆ ತಾಳ್ಮೆ ತೋರಿಸಬಹುದು.

  • ಅವರು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳುವಾಗ ಕಿವಿಗೊಟ್ಟು ಕೇಳಬಹುದು.