ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ
  • ಬೆಳಿಗ್ಗೆ ಅಲಾರ್ಮ್‌ ಒಂದೇ ಸಮನೆ ಬಡಿದುಕೊಳ್ಳಲು ಶುರುಮಾಡಿತು. ಆಸ್ಟಿನ್‌ ಕಣ್ಣಲ್ಲಿ ಇನ್ನೂ ನಿದ್ರೆ ಇದ್ದರೂ ಯಥಾ ಪ್ರಕಾರ ಜಾಂಗಿಂಗ್‍ಗೆ ಹೋದ. ವಾರದಲ್ಲಿ ಮೂರು ದಿನ ಹೀಗೆ ಮಾಡೋದು ಅವನ ಅಭ್ಯಾಸ. ಕಳೆದ ಒಂದು ವರ್ಷದಿಂದ ಅವನು ಹೀಗೆ ಮಾಡುತ್ತಿದ್ದಾನೆ.

  • ಲೋರೆಗೆ ಈಗ ತಾನೇ ತನ್ನ ಗಂಡನೊಟ್ಟಿಗೆ ಜಗಳ ಆಯಿತು. ಕಿರಿಕಿರಿಗೊಂಡು ಕೋಪದಿಂದ ಅಡುಗೆ ಮನೆಗೆ ಹೋಗಿ ಚಾಕಲೇಟ್‌ ಇರುವ ಬ್ಯಾಗನ್ನು ತೆಗೆದು ಅದರಲ್ಲಿರುವ ಎಲ್ಲಾ ಚಾಕಲೇಟ್‌ಗಳನ್ನು ತಿಂದಳು. ಬೇಜಾರಾದಾಗೆಲ್ಲಾ ಅವಳು ಹೀಗೇ ಮಾಡುತ್ತಾಳೆ.

ಆಸ್ಟಿನ್‌ ಮತ್ತು ಲೋರೆ ಇವರಿಬ್ಬರಲ್ಲೂ ಇರುವ ಸಾಮಾನ್ಯ ವಿಷಯ ಏನು? ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆನೋ ಕೆಲವೊಂದು ವಿಷಯಗಳನ್ನು ತಾವಾಗಿಯೇ ಮಾಡುತ್ತಾರೆ. ಇದನ್ನೇ ಅಭ್ಯಾಸ ಅಂತ ಕರೆಯುತ್ತಾರೆ.

ನಿಮಗೆ ಯಾವ ಅಭ್ಯಾಸಗಳಿವೆ? ಯಾವ ಒಳ್ಳೇ ಅಭ್ಯಾಸಗಳನ್ನು ನಿಮ್ಮ ಜೀವನದಲ್ಲಿ ಬೆಳೆಸಿಕೊಳ್ಳಲು ಇಷ್ಟಪಡುತ್ತೀರಾ? ಉದಾಹರಣೆಗೆ, ದಿನಾಲೂ ವ್ಯಾಯಾಮ ಮಾಡುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು, ಮನೆಯವರೊಟ್ಟಿಗೆ ಪ್ರೀತಿಯಿಂದ ನಡೆದುಕೊಳ್ಳುವುದು.

ನಾವು ಬಿಟ್ಟುಬಿಡಬೇಕಾಗಿರುವ ಅಭ್ಯಾಸಗಳೂ ಇವೆ. ಉದಾಹರಣೆಗೆ, ಸಿಗರೆಟ್‌ ಸೇದುವುದು, ಕುರುಕಲು ತಿಂಡಿಯನ್ನು ಹೆಚ್ಚಾಗಿ ತಿನ್ನುವುದು, ಇಂಟರ್‌ನೆಟ್‍ನಲ್ಲಿ ಜಾಸ್ತಿ ಸಮಯ ಕಳೆಯುವುದು.

‘ಅಭ್ಯಾಸ ಬಲ ಅಷ್ಟು ಬೇಗ ಹೋಗಲ್ಲ’ ಅನ್ನೊ ಮಾತಿದೆ. ಹಾಗಾಗಿ ಮೈಗೂಡಿರುವ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡುವುದು ಅಷ್ಟು ಸುಲಭ ಅಲ್ಲ. ಈ ಕೆಟ್ಟ ಅಭ್ಯಾಸ ಚಳಿಗಾಲದಲ್ಲಿ ಬೆಚ್ಚಗಿನ ಹಾಸಿಗೆ ಇದ್ದಂತೆ. ಹೋಗಿ ಮಲಗುವುದು ಸುಲಭ ಆದರೆ ಏಳುವುದು ಕಷ್ಟ. ಅದೇ ರೀತಿ ಅಭ್ಯಾಸಗಳನ್ನು ಕೂಡ ಬಿಡೋದಕ್ಕೆ ಕಷ್ಟ ಆಗುತ್ತೆ!

ಹಾಗಾದರೆ ನಿಮ್ಮಲ್ಲಿರುವ ಅಭ್ಯಾಸಗಳನ್ನ ನಿಯಂತ್ರಣದಲ್ಲಿಟ್ಟುಕೊಂಡು ಅವುಗಳಿಂದ ಪ್ರಯೋಜನ ಪಡೆಯೋದು ಹೇಗೆ? ಬೈಬಲಿನಲ್ಲಿರುವ ಮುಂದಿನ ಮೂರು ಸಲಹೆಗಳು ನಿಮಗೆ ತುಂಬಾ ಪ್ರಯೋಜನಕಾರಿ. (g16-E No. 4)