ಮಾಹಿತಿ ಇರುವಲ್ಲಿ ಹೋಗಲು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟಕ್ಕಾಗಿ ಸೂಚನೆಗಳು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟಕ್ಕಾಗಿ ಸೂಚನೆಗಳು

ಪರಿವಿಡಿ

1. ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದಲ್ಲಿ ಭಾಗವಿರುವ ಎಲ್ಲರಿಗೂ ಈ ಡಾಕ್ಯುಮೆಂಟ್‌ನಲ್ಲಿರುವ ಸೂಚನೆಗಳು ಸಹಾಯ ಮಾಡುತ್ತವೆ. ಇವರೆಲ್ಲರು ತಮ್ಮ ಭಾಗವನ್ನು ತಯಾರಿಸುವ ಮುಂಚೆ, ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ತಮ್ಮ ಭಾಗಕ್ಕಾಗಿ ಕೊಡಲಾದ ಸೂಚನೆಗಳನ್ನು ಮತ್ತು ಈ ಡಾಕ್ಯುಮೆಂಟ್‌ನಲ್ಲಿರುವ ಸೂಚನೆಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿ ನೇಮಕಗಳನ್ನು ಮಾಡುವಂತೆ ಎಲ್ಲ ಪ್ರಚಾರಕರನ್ನು ಉತ್ತೇಜಿಸಿ. ಸಭಾ ಕೂಟಗಳಿಗೆ ತಪ್ಪದೆ ಬರುತ್ತಿರುವ ಮತ್ತು ಬೈಬಲಿನ ಬೋಧನೆಗಳನ್ನು ಒಪ್ಪಿ ಕ್ರೈಸ್ತ ಮೂಲತತ್ವಗಳಿಗೆ ಹೊಂದಿಕೆಯಲ್ಲಿ ಜೀವನ ನಡೆಸುತ್ತಿರುವ ಇತರರು ಸಹ ವಿದ್ಯಾರ್ಥಿ ನೇಮಕವನ್ನು ಮಾಡಬಹುದು. ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕನು, ಇನ್ನೂ ಪ್ರಚಾರಕನಾಗಿಲ್ಲದ ಮತ್ತು ವಿದ್ಯಾರ್ಥಿ ನೇಮಕವನ್ನು ಮಾಡಲು ಬಯಸುವ ವ್ಯಕ್ತಿಯೊಂದಿಗೆ ನೇಮಕಾತಿ ಪಡೆಯಲು ಏನೆಲ್ಲಾ ಮಾಡಬೇಕು ಎಂದು ಚರ್ಚಿಸಬೇಕು. ನಂತರ ಆ ವ್ಯಕ್ತಿಯು ಅರ್ಹರಾಗಿದ್ದಾರೆಯೇ ಎಂದು ತಿಳಿಸಬೇಕು. ಇದನ್ನು ಆ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸುತ್ತಿರುವವರ ಉಪಸ್ಥಿತಿಯಲ್ಲಿ (ಅಥವಾ ಸತ್ಯದಲ್ಲಿರುವ ಹೆತ್ತವರ ಉಪಸ್ಥಿತಿಯಲ್ಲಿ) ಮಾಡಬೇಕು. ಒಬ್ಬ ವ್ಯಕ್ತಿಯು ಅಸ್ನಾತ ಪ್ರಚಾರಕನಾಗಲು ಮಾಡಬೇಕಾದ ವಿಷಯಗಳನ್ನೇ, ವಿದ್ಯಾರ್ಥಿ ನೇಮಕವನ್ನು ಮಾಡುವ ಅರ್ಹತೆಯನ್ನು ಪಡೆಯಲು ಸಹ ಮಾಡಬೇಕು.—ಸಂಘಟಿತರು ಅಧ್ಯಾ. 8 ಪ್ಯಾ. 8.

   ಆರಂಭದ ಮಾತುಗಳು

2. ಒಂದು ನಿಮಿಷ. ಪ್ರತಿ ವಾರ ಗೀತೆ ಮತ್ತು ಪ್ರಾರ್ಥನೆ ನಂತ್ರ ಕೂಟದ ಅಧ್ಯಕ್ಷನು ಸಭೆಗೆ ಪ್ರಯೋಜನ ಆಗೋ ವಿಷ್ಯಗಳನ್ನು ಹೇಳಿ ಕಾರ್ಯಕ್ರಮದ ಬಗ್ಗೆ ಕುತೂಹಲ ಕೆರಳಿಸಬೇಕು.

  ಬೈಬಲಿನಲ್ಲಿರುವ ನಿಧಿ

 3ಭಾಷಣ: ಹತ್ತು ನಿಮಿಷ. ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಈ ಭಾಷಣಕ್ಕಾಗಿ ಶೀರ್ಷಿಕೆ ಕೊಡಲಾಗಿರುತ್ತೆ. ಅದ್ರ ಕೆಳಗೆ ವಚನಗಳೊಂದಿಗೆ ಎರಡು ಅಥವಾ ಮೂರು ಮುಖ್ಯ ಅಂಶಗಳನ್ನು ಕೊಡಲಾಗಿರುತ್ತೆ. ಇದನ್ನು ಹೊರಮೇರೆಯಾಗಿ ಉಪಯೋಗಿಸಿ ಭಾಷಣ ನೀಡ್ಬೇಕು. ಈ ಭಾಷಣವನ್ನು ಹಿರಿಯನಿಗೆ ಅಥವಾ ಅರ್ಹ ಸಹಾಯಕ ಸೇವಕನಿಗೆ ನೇಮಿಸಬೇಕು. ಯಾವ ವಾರದಲ್ಲಿ ಬೈಬಲ್‌ ಓದುವಿಕೆ, ಮೊದಲ ಅಧ್ಯಾಯದಿಂದ ಆರಂಭವಾಗುತ್ತೋ ಆ ವಾರದಲ್ಲಿ ಆ ಪುಸ್ತಕವನ್ನು ಪರಿಚಯಿಸುವ ವಿಡಿಯೋ ತೋರಿಸ್ಬೇಕು. ವಿಡಿಯೋದಲ್ಲಿ ಭಾಷಣಕ್ಕೆ ಸಂಬಂಧಿಸಿದ ವಿಷ್ಯಗಳಿದ್ರೆ ಹೇಳ್ಬಹುದಾದ್ರೂ ಕೈಪಿಡಿಯಲ್ಲಿ ಕೊಡಲಾದ ಅಂಶಗಳನ್ನು ತಪ್ಪದೇ ಹೇಳ್ಬೇಕು. ಅಲ್ಲದೆ, ಸಮಯವು ಅನುಮತಿಸಿದಂತೆ, ಈ ಭಾಷಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕೊಡಲಾದ ಚಿತ್ರಗಳ ಒಳ್ಳೇ ಉಪಯೋಗ ಮಾಡಬೇಕು. ನಿಮ್ಮ ಭಾಷಣಕ್ಕೆ ಆಧಾರವಾಗಿ ಕೊಟ್ಟಿರುವ ಇತರ ಪ್ರಕಾಶನಗಳ ವಿಷಯಗಳನ್ನು ಸಹ ನಿಮ್ಮ ಭಾಷಣದಲ್ಲಿ ಉಪಯೋಗಿಸಿ.

 4ಬೈಬಲಿನಲ್ಲಿರುವ ರತ್ನಗಳು: ಹತ್ತು ನಿಮಿಷ. ಇದು ಪ್ರಶ್ನೋತ್ತರ ಚರ್ಚೆ. ಪೀಠಿಕೆ ಅಥವಾ ಸಮಾಪ್ತಿ ಇಲ್ದೆ ನೇರವಾಗಿ ಶುರುಮಾಡಿ. ಹಿರಿಯ ಅಥವಾ ಅರ್ಹ ಸಹಾಯಕ ಸೇವಕ ಇದನ್ನು ಮಾಡ್ಬೇಕು. ಇವರು ಸಭಿಕರಿಗೆ ಎರಡೂ ಪ್ರಶ್ನೆಗಳನ್ನ ಕೇಳಬೇಕು. ಮೊದಲನೇ ಪ್ರಶ್ನೆಯಲ್ಲಿ ಕೊಟ್ಟಿರುವ ವಚನಗಳನ್ನು ಓದಬೇಕೋ ಬೇಡವೋ ಅಂತ ನಿರ್ಣಯಿಸ್ಬಹುದು. ಉತ್ತರ 30 ಸೆಕೆಂಡಿನೊಳಗೆ ಇರ್ಬೇಕು.

 5ಬೈಬಲ್‌ ಓದುವಿಕೆ: ನಾಲ್ಕು ನಿಮಿಷ. ಈ ವಿದ್ಯಾರ್ಥಿ ನೇಮಕವನ್ನು ಒಬ್ಬ ಪುರುಷ ವಿದ್ಯಾರ್ಥಿ ಮಾಡ್ಬೇಕು. ಪೀಠಿಕೆ ಅಥವಾ ಸಮಾಪ್ತಿ ಹೇಳ್ದೆ ನೇರವಾಗಿ ಓದ್ಬೇಕು. ಚೆನ್ನಾಗಿ ಅರ್ಥಮಾಡಿಕೊಂಡು, ಸರಿಯಾದ ಒತ್ತು ನೀಡಿ, ಸರಿಯಾದ ಕಡೆ ನಿಲ್ಲಿಸಿ, ಧ್ವನಿಯನ್ನು ಏರಿಳಿಸಿ, ಸ್ಪಷ್ಟವಾಗಿ, ಸರಾಗವಾಗಿ ಹಾಗೂ ಸ್ವಾಭಾವಿಕವಾಗಿ ಓದಲು ವಿದ್ಯಾರ್ಥಿಗಳು ಪ್ರಗತಿ ಮಾಡುವಂತೆ ಕೂಟದ ಅಧ್ಯಕ್ಷ ಸಹಾಯ ಮಾಡ್ಬೇಕು. ಓದುವ ಭಾಗಗಳು ಚಿಕ್ಕದಾಗೂ ಇರುತ್ತೆ ಜಾಸ್ತಿನೂ ಇರುತ್ತೆ. ಹಾಗಾಗಿ ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕ ವಿದ್ಯಾರ್ಥಿಯ ಸಾಮರ್ಥ್ಯ ನೋಡಿ ನೇಮಕ ಕೊಡ್ಬೇಕು.

 ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

6. ಹದಿನೈದು ನಿಮಿಷಗಳು. ಎಲ್ಲರೂ ಸೇವೆಗೆ ಚೆನ್ನಾಗಿ ತಯಾರಿ ಮಾಡಲು, ಅವರ ಸಂಭಾಷಣೆಯ ಕೌಶಲ್ಯಗಳನ್ನು ಉತ್ತಮಗೊಳಿಸಲು, ಸಾರುವ ಹಾಗೂ ಕಲಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಈ ಭಾಗವನ್ನು ರಚಿಸಲಾಗಿದೆ. ಅಗತ್ಯಕ್ಕನುಸಾರವಾಗಿ, ಹಿರಿಯರು ವಿದ್ಯಾರ್ಥಿ ನೇಮಕವನ್ನು ಪಡೆಯಬಹುದು. ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ನೇಮಕದ ಪಕ್ಕದಲ್ಲಿ ಕೊಡಲಾದ ಪ್ರಗತಿ ಅಥವಾ ಜನರನ್ನ ಪ್ರೀತಿಸಿ ಕಿರುಹೊತ್ತಗೆಯ ಅಧ್ಯಯನ ಅಂಶದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೆಲಸ ಮಾಡಬೇಕು. ಕೆಲವೊಮ್ಮೆ, ಚರ್ಚೆಯ ಭಾಗವನ್ನು ಇಲ್ಲಿ ಸೇರಿಸಲಾಗುವುದು. ಇಂತಹ ಭಾಗವನ್ನು ಹಿರಿಯನಿಗೆ ಅಥವಾ ಅರ್ಹ ಸಹಾಯಕ ಸೇವಕನಿಗೆ ನೇಮಿಸಬೇಕು.—ಚರ್ಚೆಯ ಭಾಗಗಳನ್ನು ಹೇಗೆ ನಿರ್ವಹಿಸಬೇಕೆಂದು  ಪ್ಯಾರಾಗ್ರಾಫ್‌ 15 ಅನ್ನು ನೋಡಿ.

 7ಸಂಭಾಷಣೆ ಶುರುಮಾಡಿ: ಈ ವಿದ್ಯಾರ್ಥಿ ನೇಮಕವನ್ನು ಪುರುಷ ಅಥವಾ ಮಹಿಳಾ ವಿದ್ಯಾರ್ಥಿ ನಿರ್ವಹಿಸಬಹುದು. ಪುರುಷ ವಿದ್ಯಾರ್ಥಿಗೆ ಮನೆಯವರಾಗಿ ಪುರುಷ ವಿದ್ಯಾರ್ಥಿಯನ್ನೇ, ಮಹಿಳಾ ವಿದ್ಯಾರ್ಥಿಗೆ ಮನೆಯವರಾಗಿ ಮಹಿಳಾ ವಿದ್ಯಾರ್ಥಿಯನ್ನೇ ನೇಮಿಸ್ಬೇಕು. ಒಂದು ವೇಳೆ ಸ್ವಂತ ಕುಟುಂಬದ ಸದಸ್ಯ ಮನೆಯವರಾಗಿ ಅಭಿನಯಿಸುತ್ತಿದ್ದಲ್ಲಿ, ಈ ನಿಯಮ ಅನ್ವಯವಾಗುವುದಿಲ್ಲ. ವಿದ್ಯಾರ್ಥಿ ಹಾಗೂ ಮನೆಯವರು ಕುಳಿತೋ ನಿಂತೋ ಅಭಿನಯಿಸಬಹುದು.—ಈ ನೇಮಕದ ವಿಷಯ ಮತ್ತು ಸೆಟ್ಟಿಂಗ್‌ ಕುರಿತು ಹೆಚ್ಚಿನ ಮಾಹಿತಿಗಾಗಿ  ಪ್ಯಾರಾಗ್ರಾಫ್‌ 12 ಮತ್ತು  13 ಅನ್ನು ನೋಡಿ

 8ಮತ್ತೆ ಭೇಟಿ ಮಾಡಿ: ಈ ವಿದ್ಯಾರ್ಥಿ ನೇಮಕವನ್ನು ಪುರುಷ ಅಥವಾ ಮಹಿಳಾ ವಿದ್ಯಾರ್ಥಿ ನಿರ್ವಹಿಸಬಹುದು. ಪುರುಷ ವಿದ್ಯಾರ್ಥಿಗೆ ಮನೆಯವರಾಗಿ ಪುರುಷ ವಿದ್ಯಾರ್ಥಿಯನ್ನೇ, ಮಹಿಳಾ ವಿದ್ಯಾರ್ಥಿಗೆ ಮನೆಯವರಾಗಿ ಮಹಿಳಾ ವಿದ್ಯಾರ್ಥಿಯನ್ನೇ ನೇಮಿಸ್ಬೇಕು. (ರಾಜ್ಯಸೇವೆ 5/97 ಪು. 2) ವಿದ್ಯಾರ್ಥಿ ಹಾಗೂ ಮನೆಯವರು ಕುಳಿತೋ ನಿಂತೋ ಅಭಿನಯಿಸಬಹುದು. ಮತ್ತೆ ಭೇಟಿ ಮಾಡಿದಾಗ ಈ ಮುಂಚೆ ಮಾತಾಡಿದ ವಿಷಯವನ್ನು ಮುಂದುವರಿಸುತ್ತಾ ಹೇಗೆ ಮಾತಾಡಬೇಕು ಅಂತ ವಿದ್ಯಾರ್ಥಿ ಅಭಿನಯಿಸಬೇಕು.—ಈ ನೇಮಕದ ವಿಷಯ ಮತ್ತು ಸೆಟ್ಟಿಂಗ್‌ ಕುರಿತು ಹೆಚ್ಚಿನ ಮಾಹಿತಿಗಾಗಿ  ಪ್ಯಾರಾಗ್ರಾಫ್‌ 12 ಮತ್ತು  13 ಅನ್ನು ನೋಡಿ.

 9ಶಿಷ್ಯರಾಗೋಕೆ ಕಲಿಸಿ: ಈ ವಿದ್ಯಾರ್ಥಿ ನೇಮಕವನ್ನು ಪುರುಷ ಅಥವಾ ಮಹಿಳಾ ವಿದ್ಯಾರ್ಥಿ ನಿರ್ವಹಿಸಬಹುದು. ಪುರುಷ ವಿದ್ಯಾರ್ಥಿಗೆ ಮನೆಯವರಾಗಿ ಪುರುಷ ವಿದ್ಯಾರ್ಥಿಯನ್ನೇ, ಮಹಿಳಾ ವಿದ್ಯಾರ್ಥಿಗೆ ಮನೆಯವರಾಗಿ ಮಹಿಳಾ ವಿದ್ಯಾರ್ಥಿಯನ್ನೇ ನೇಮಿಸ್ಬೇಕು. (ರಾಜ್ಯಸೇವೆ 5/97 ಪು. 2) ವಿದ್ಯಾರ್ಥಿ ಹಾಗೂ ಮನೆಯವರು ಕುಳಿತೋ ನಿಂತೋ ಅಭಿನಯಿಸಬಹುದು. ಬೈಬಲ್‌ ಅಧ್ಯಯನ ಈಗಾಗಲೇ ಶುರು ಆಗಿರೋ ರೀತಿಯಲ್ಲಿ ಅಭಿನಯಿಸಬೇಕು. ಪೀಠಿಕೆ ಅಥವಾ ಸಮಾಪ್ತಿಯ ಅಗತ್ಯ ಇಲ್ಲ. ಆದ್ರೆ ಅಧ್ಯಯನ ಅಂಶದಲ್ಲಿ ಆರಂಭದ ಮಾತು ಅಥವಾ ಸೂಕ್ತ ಸಮಾಪ್ತಿ ವಿಷ್ಯವನ್ನು ನೇಮಿಸಿದ್ರೆ ಅದನ್ನ ಮಾಡಬೇಕು. ಪ್ಯಾರ ಓದಬಹುದು ಇಲ್ಲಾ ಬಿಡಬಹುದು.

 10ನಿಮ್ಮ ನಂಬಿಕೆ ಬಗ್ಗೆ ಹೇಳಿ: ಭಾಷಣವಾಗಿ ಕೊಡುವಂತೆ ಹೇಳಿದಾಗ, ಈ ವಿದ್ಯಾರ್ಥಿ ನೇಮಕವನ್ನು ಪುರುಷ ವಿದ್ಯಾರ್ಥಿ ನಿರ್ವಹಿಸಬೇಕು. ಅಭಿನಯವಾಗಿ ಕೊಡುವಂತೆ ಹೇಳಿದಾಗ, ಅದನ್ನು ಪುರುಷ ಅಥವಾ ಮಹಿಳಾ ವಿದ್ಯಾರ್ಥಿ ನಿರ್ವಹಿಸಬಹುದು. ಪುರುಷ ವಿದ್ಯಾರ್ಥಿಗೆ ಸಹಾಯಕನಾಗಿ ಪುರುಷ ವಿದ್ಯಾರ್ಥಿಯನ್ನೇ, ಮಹಿಳಾ ವಿದ್ಯಾರ್ಥಿಗೆ ಸಹಾಯಕಳಾಗಿ ಮಹಿಳಾ ವಿದ್ಯಾರ್ಥಿಯನ್ನೇ ನೇಮಿಸ್ಬೇಕು. ಒಂದು ವೇಳೆ ಸ್ವಂತ ಕುಟುಂಬದ ಸದಸ್ಯ ಸಹಾಯಕನಾಗಿದ್ದಲ್ಲಿ, ಈ ನಿಯಮ ಅನ್ವಯವಾಗುವುದಿಲ್ಲ. ವಿದ್ಯಾರ್ಥಿಯು ಉಲ್ಲೇಖದಲ್ಲಿ ಕೊಡಲಾದ ಮಾಹಿತಿಯನ್ನು ಬಳಸಿಕೊಂಡು ಮುಖ್ಯ ಪ್ರಶ್ನೆಗೆ ಸ್ಪಷ್ಟವಾಗಿ ಮತ್ತು ಜಾಣ್ಮೆಯಿಂದ ಉತ್ತರವನ್ನು ನೀಡಬೇಕು. ಉಲ್ಲೇಖದಲ್ಲಿ ಕೊಡಲಾದ ಪ್ರಕಾಶನವನ್ನು ತನ್ನ ಭಾಗದಲ್ಲಿ ಉಲ್ಲೇಖಿಸಬೇಕಾ ಬೇಡವಾ ಎಂದು ವಿದ್ಯಾರ್ಥಿಯು ನಿರ್ಣಯಿಸಬಹುದು.

 11ಭಾಷಣ: ಈ ವಿದ್ಯಾರ್ಥಿ ನೇಮಕವನ್ನು ಪುರುಷ ವಿದ್ಯಾರ್ಥಿ ನಿರ್ವಹಿಸಬೇಕು ಮತ್ತು ಇದನ್ನು ಸಭೆಗೆ ಭಾಷಣವಾಗಿ ಕೊಡಬೇಕು. ಭಾಷಣವು ಜನರನ್ನ ಪ್ರೀತಿಸಿ ಕಿರುಹೊತ್ತಗೆಯ ಪರಿಶಿಷ್ಠ A ಯಿಂದ ಒಂದು ಅಂಶದ ಮೇಲೆ ಆಧರಿಸಿದಾಗ, ಈ ವಚನ(ಗಳು) ಸೇವೆಯಲ್ಲಿ ಹೇಗೆ ಬಳಸಬಹುದು ಎoದು ವಿದ್ಯಾರ್ಥಿ ತೋರಿಸಬೇಕು. ಉದಾಹರಣೆಗೆ, ಒoದು ವಚನವನ್ನು ಯಾವಾಗ ಬಳಸಬಹುದು, ಅದರ ಅರ್ಥವೇನು, ಮತ್ತು ಅದನ್ನ ಒಬ್ಬ ವ್ಯಕ್ತಿಯೊಂದಿಗೆ ಹೇಗೆ ತರ್ಕಿಸಬಹುದೆoದು ಅವನು ವಿವರಿಸಬಹುದು. ಭಾಷಣವು ಜನರನ್ನ ಪ್ರೀತಿಸಿ ಕಿರುಹೊತ್ತಗೆಯ ಪಾಠಗಳಿoದ ಒಂದು ಅಂಶವನ್ನ ಆಧರಿಸಿದಾಗ, ಈ ಅಂಶವನ್ನ ಸೇವೆಯಲ್ಲಿ ಹೇಗೆ ಅನ್ವಯಿಸಬಹುದು ಎನ್ನುವುದರ ಮೇಲೆ ವಿದ್ಯಾರ್ಥಿ ಗಮನ ಕೊಡಬೇಕು. ಬೇಕಾದಲ್ಲಿ, ಅವನು ಪಾಠದ ಮೊದಲ್ನೆ ಭಾಗದಲ್ಲಿ ಕೊಟ್ಟoತ ಉದಾಹರಣೆಯನ್ನು ತೋರಿಸಬಹುದು, ಅಥವಾ ಆ ಪಾಠದಲ್ಲಿ ಕೊಡಲಾದ ಇತರ ಯಾವುದೇ ಹೆಚ್ಚುವರಿ ವಚನಗಳನ್ನು ತೋರಿಸಬಹುದು.

   12ವಿಷಯ: ಈ ಪ್ಯಾರಾ ಮತ್ತು ಮುoದಿನ ಪ್ಯಾರಾದಲ್ಲಿರುವ ವಿಷಯ “ ಸಂಭಾಷಣೆ ಶುರುಮಾಡಿ“ ಮತ್ತು “ ಮತ್ತೆ ಭೇಟಿ ಮಾಡಿ“ ನೇಮಕಗಳಿಗೆ ಅನ್ವಯಿಸುತ್ತವೆ. ಬೇರೆ ರೀತಿಯ ಸೂಚನೆ ನೀಡದ ಹೊರತು, ತಾನು ಮಾತಾಡುತ್ತಿರುವ ವ್ಯಕ್ತಿಗೆ ಸೂಕ್ತವಾದ ಸರಳ ಬೈಬಲ್‌ ಸತ್ಯವನ್ನು ಹಂಚಿಕೊಳ್ಳುವುದು ಮತ್ತು ಮುಂದಿನ ಸಂಭಾಷಣೆಗೆ ಅಡಿಪಾಯ ಹಾಕುವುದು ವಿದ್ಯಾರ್ಥಿಯ ಗುರಿಯಾಗಿರಬೇಕು. ವಿದ್ಯಾರ್ಥಿಯು ಸ್ಥಳೀಯವಾಗಿ, ಸಮಯೋಚಿತ ಮತ್ತು ಪರಿಣಾಮಕಾರಿಯಾದ ವಿಷಯವನ್ನು ಆಯ್ಕೆ ಮಾಡಬೇಕು. ಬೋಧನಾ ಸಲಕರಣೆಯಿoದ ಪ್ರಕಾಶನ ಅಥವಾ ವೀಡಿಯೊವನ್ನು ಪರಿಚಯಿಸಬೇಕಾ ಬೇಡವಾ ಎಂದು ಅವನು ನಿರ್ಧರಿಸಬಹುದು. ನೇಮಕವನ್ನು ಬಾಯಿಪಾಠ ಮಾಡುವ ಬದಲು, ವಿದ್ಯಾರ್ಥಿಗಳು ವೈಯಕ್ತಿಕ ಆಸಕ್ತಿ ಮತ್ತು ಸ್ವಾಭಾವಿಕತೆಯನ್ನು ತೋರಿಸುವಂತಹ ಸಂಭಾಷಣೆ ಕೌಶಲ್ಯಗಳನ್ನು ಅಭ್ಯಾಸ ಮಾಡಬೇಕು.

   13ಸೆಟ್ಟಿಂಗ್‌: ನೇಮಿಸಲಾದ ಸಾಮಾನ್ಯ ಸೆಟ್ಟಿಂಗ್‌ ಅನ್ನು ವಿದ್ಯಾರ್ಥಿ ಸ್ಥಳೀಯ ಸನ್ನಿವೇಶಗಳಿಗೆ ಅನ್ವಯಿಸಬೇಕು. ಉದಾಹರಣೆಗೆ:

  1.  (1) ಮನೆ ಮನೆ ಸೇವೆ: ಈ ಸೆಟ್ಟಿಂಗಲ್ಲಿ ಮನೆಯಿಂದ ಮನೆಗೆ ಸಾರುವುದು ಒಳಗೊಂಡಿರುತ್ತದೆ—ವೈಯಕ್ತಿಕವಾಗಿ, ಫೋನ್‌ ಅಥವಾ ಪತ್ರದ ಮೂಲಕ—ಮತ್ತು ಮನೆ ಮನೆಯ ಸೇವೆಯಲ್ಲಿ ಸಂಪರ್ಕಿಸಲಾದ ವ್ಯಕ್ತಿಯೊಂದಿಗೆ ಮಾಡಿದ ಹಿಂದಿನ ಸಂಭಾಷಣೆಯನ್ನು ಮುoದುವರಿಸುವುದು ಒಳಗೊಂಡಿರುತ್ತದೆ.

  2.  (2) ಅನೌಪಚಾರಿಕ ಸಾಕ್ಷಿ: ಸಾಮಾನ್ಯ ಸಂಭಾಷಣೆಯನ್ನು ಒಂದು ಸಾಕ್ಷಿಯಾಗಿ ಪರಿವರ್ತಿಸಲು ಅವಕಾಶಗಳನ್ನು ಸದುಪಯೋಗ ಮಾಡುವ ಬಗ್ಗೆ ಈ ಸೆಟ್ಟಿಂಗ್‌ ವಿವರಿಸುತ್ತದೆ. ನೀವು ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ನಿಮ್ಮ ನೆರೆಹೊರೆಯಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ ಅಥವಾ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವಾಗ ಭೇಟಿಯಾಗುವ ಜನರ ಜೊತೆ, ಒoದು ಬೈಬಲ್‌ ಆಧಾರಿತ ವಿಷಯವನ್ನು ಹಂಚಿಕೊಳ್ಳುವುದನ್ನು ಇದು ಒಳಗೊಂಡಿರಬಹುದು.

  3.  (3) ಸಾರ್ವಜನಿಕ ಸಾಕ್ಷಿ: ಈ ಸೆಟ್ಟಿಂಗ್‌ ಅಲ್ಲಿ ತಳ್ಳು ಬಂಡಿ ಸಾಕ್ಷಿಕಾರ್ಯ, ವ್ಯಾಪಾರದ ಸ್ಥಳಗಳಲ್ಲಿ, ಬೀದಿ ಸಾಕ್ಷಿ ಅಥವಾ ಪಾರ್ಕ್‌ಗಳಲ್ಲಿ, ಪಾರ್ಕಿoಗ್‌ ಸ್ಥಳಗಳಲ್ಲಿ, ಅಥವಾ ಜನರು ಕಂಡುಬರುವ ಯಾವುದೇ ಸ್ಥಳಗಳಲ್ಲಿ ಸಾಕ್ಷಿ ನೀಡುವುದನ್ನು ಒಳಗೊಂಡಿರಬಹುದು.

 14ವೀಡಿಯೊಗಳ ಮತ್ತು ಸಾಹಿತ್ಯದ ಬಳಕೆ: ಸಂದರ್ಭಕ್ಕೆ ಅನುಗುಣವಾಗಿ, ಒಬ್ಬ ವಿದ್ಯಾರ್ಥಿಯು ವೀಡಿಯೊ ಅಥವಾ ಸಾಹಿತ್ಯವನ್ನು ತೋರಿಸಲು ನಿರ್ಧರಿಸಬಹುದು. ಒಂದು ವೇಳೆ ವಿದ್ಯಾರ್ಥಿಯ ನೇಮಕದಲ್ಲಿ ವೀಡಿಯೊ ಒಳಗೊಂಡಿದ್ದರೆ ಅಥವಾ ವಿದ್ಯಾರ್ಥಿಯು ಒಂದು ವೀಡಿಯೊವನ್ನ ತೊರಿಸಲು ಆಯ್ಕೆ ಮಾಡಿದರೆ, ಅವನು ವೀಡಿಯೊವನ್ನು ಪರಿಚಯಿಸಿ ಚರ್ಚಿಸಬೇಕು, ಆದರೆ ಅದನ್ನು ಪ್ಲೇ ಮಾಡಬಾರದು.

  ನಮ್ಮ ಕ್ರೈಸ್ತ ಜೀವನ

15. ಗೀತೆಯ ನಂತ್ರ ನಡೆಯುವ 15 ನಿಮಿಷದ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾಗಗಳಿರುತ್ತೆ. ಈ ಭಾಗಗಳು ದೇವರ ವಾಕ್ಯವನ್ನು ಅನ್ವಯಿಸಲು ಸಭಿಕರಿಗೆ ಸಹಾಯ ಮಾಡುತ್ತೆ. ಬೇರೆ ರೀತಿಯಲ್ಲಿ ಸೂಚಿಸದ ಹೊರತು, ಈ ಭಾಗಗಳನ್ನು ಹಿರಿಯರು ಅಥವಾ ಅರ್ಹ ಸಹಾಯಕ ಸೇವಕರು ಮಾಡ್ಬಹುದು. ಸ್ಥಳೀಯ ಅಗತ್ಯಗಳ ಭಾಗವನ್ನು ಹಿರಿಯರೇ ಮಾಡ್ಬೇಕು. ಒಂದು ಭಾಗವನ್ನು ಚರ್ಚೆಯಾಗಿ ಇರಿಸಿದಾಗ, ಇದನ್ನು ನಡೆಸಿಕೊಡುವವರು ಕೊಟ್ಟoತ ಪ್ರಶ್ನೆಗಳ ಜೊತೆಗೆ ಭಾಗದ ಉದ್ದಕ್ಕೂ ಪ್ರಶ್ನೆಗಳನ್ನು ಕೇಳಬಹುದು. ಮುಖ್ಯ ಅಂಶಗಳನ್ನು ಆವರಿಸಲು ಮತ್ತು ಸಭಿಕರು ಭಾಗವಹಿಸುವಂತೆ ಸಾಕಷ್ಟು ಸಮಯವನ್ನು ಅನುಮತಿಸಲು ಅವನು ತನ್ನ ಪೀಠಿಕೆಯನ್ನ ಸಂಕ್ಷಿಪ್ತವಾಗಿ ಇಡಬೇಕು. ಭಾಗದಲ್ಲಿ ಸಂದರ್ಶನವಿದ್ದರೆ, ಯಾರಿಗೆ ಸಂದರ್ಶನ ಮಾಡಲಾಗುತ್ತೋ ಅವರು ಸಾಧ್ಯವಾದರೆ ತಮ್ಮ ಆಸನದ ಬದಲಿಗೆ ವೇದಿಕೆಯಿಂದಲೇ ತಮ್ಮ ಹೇಳಿಕೆಗಳನ್ನು ನೀಡುವುದು ಉತ್ತಮ.

  16ಸಭಾ ಬೈಬಲ್‌ ಅಧ್ಯಯನ: ಮೂವತ್ತು ನಿಮಿಷಗಳು. ಇದನ್ನು ಅರ್ಹ ಹಿರಿಯರು ಮಾಡ್ಬೇಕು. ( ಹಿರಿಯರು ಕಡಿಮೆ ಇರೋ ಸಭೆಗಳಲ್ಲಿ ಅರ್ಹ ಸಹಾಯಕ ಸೇವಕರು ಮಾಡ್ಬಹುದು. ) ಸಭಾ ಬೈಬಲ್‌ ಅಧ್ಯಯನ ನಡಿಸಲು ಯಾರು ಅರ್ಹರು ಅಂತ ಹಿರಿಯರ ಮಂಡಳಿ ನಿರ್ಣಯಿಸಬೇಕು. ಅಧ್ಯಯನ ನಡಿಸುವವರು ಸಮಯದೊಳಗೆ ಮುಗಿಸಬೇಕು, ಮುಖ್ಯ ವಚನಗಳಿಗೆ ಹೆಚ್ಚು ಗಮನ ಕೊಡಬೇಕು ಮತ್ತು ಕಲಿತ ಪ್ರಾಯೋಗಿಕ ಪಾಠಗಳನ್ನು ಗಣ್ಯಮಾಡಲು ಸಭಿಕರಿಗೆ ಸಹಾಯ ಮಾಡ್ಬೇಕು. ಈ ಭಾಗವನ್ನು ಯಾರಿಗೆ ನೇಮಿಸಲಾಗಿದೆಯೋ ಅವರು ಪ್ರಶ್ನೋತ್ತರ ಭಾಗಗಳನ್ನು ಹೇಗೆ ನಡೆಸುವುದು ಎಂಬುದರ ಕುರಿತು ಪ್ರಕಟಿತ ನಿರ್ದೇಶನವನ್ನು ಪರಿಶೀಲಿಸುವ ಮೂಲಕ ಪ್ರಯೋಜನ ಪಡೆಯುತ್ತಾರೆ. (ಕಾವಲಿನಬುರುಜು 23.04 ಪುಟ 24, ಬಾಕ್ಸ್‌) ಆ ವಾರಕ್ಕೆ ನೇಮಿಸಲಾದ ವಿಷಯವನ್ನು ಪೂರ್ತಿಯಾಗಿ ಮುಗಿಸಿದ ನಂತರ, ಅಧ್ಯಯನವನ್ನು ಉದ್ದಗೊಳಿಸುವ ಅಗತ್ಯವಿಲ್ಲ. ಸಾಧ್ಯವಿರುವಲ್ಲಿ, ಪ್ರತಿ ವಾರ ಬೇರೆ ಬೇರೆಯವರನ್ನ ಅಧ್ಯಯನ ನಡೆಸಿಕೊಡಲು ಮತ್ತು ಪ್ಯಾರಾಗಳನ್ನು ಓದಲು ಬಳಸಬೇಕು. ಅಧ್ಯಯನವನ್ನು ಸಂಕ್ಷಿಪ್ತಗೊಳಿಸಬೇಕೆಂದು ಜೀವನ ಮತ್ತು ಸೇವೆ ಕೂಟದ ಅಧ್ಯಕ್ಷ ನಿರ್ದೇಶಿಸಿದರೆ, ಅಧ್ಯಯನವನ್ನು ಹೇಗೆ ಸಂಕ್ಷಿಪ್ತಗೊಳಿಸಬೇಕೆಂದು ಅಧ್ಯಯನ ನಡೆಸಿಕೊಡುವವರು ನಿರ್ಧರಿಸಬೇಕು. ಅವನು ಕೆಲವು ಪ್ಯಾರಾಗಳನ್ನ ಓದದೆ ಇರಲು ಆಯ್ಕೆ ಮಾಡಬಹುದು.

  ಸಮಾಪ್ತಿ ಮಾತುಗಳು

17. ಮೂರು ನಿಮಿಷಗಳು. ಜೀವನ ಮತ್ತು ಸೇವೆ ಕೂಟದ ಅಧ್ಯಕ್ಷ, ಕೂಟದಲ್ಲಿ ಕಲಿತ ಮುಖ್ಯ ಪಾಠಗಳನ್ನು ತಿಳಿಸುವನು. ಮುಂದಿನ ವಾರದಲ್ಲಿ ಕಲಿಯಕ್ಕಿರುವ ವಿಷಯಗಳನ್ನು ಸಹ ಸಂಕ್ಷಿಪ್ತವಾಗಿ ಹೇಳಬೇಕು. ಸಮಯ ಇದ್ರೆ ಮುಂದಿನ ವಾರದ ವಿದ್ಯಾರ್ಥಿಗಳ ಹೆಸರುಗಳನ್ನು ತಿಳಿಸ್ಬಹುದು. ಯಾವಾಗ ಓದಬೇಕು ಅಂತ ನಿರ್ದಿಷ್ಟ ಸೂಚನೆ ಇಲ್ಲದ ಎಲ್ಲ ಪ್ರಕಟಣೆ ಮತ್ತು ಪತ್ರಗಳನ್ನು ಅಧ್ಯಕ್ಷ ಈ ಸಮಾಪ್ತಿ ಮಾತುಗಳ ಸಮಯದಲ್ಲಿ ಓದಬೇಕು. ಸಾಮಾನ್ಯವಾದ ಕ್ಷೇತ್ರ ಸೇವೆ ಮತ್ತು ಶುಚಿತ್ವದ ಏರ್ಪಾಡುಗಳ ಬಗ್ಗೆ ಸ್ಟೇಜಿಂದ ಹೇಳ್ಬಾರದು, ಮಾಹಿತಿ ಫಲಕದಲ್ಲಿ ಹಾಕ್ಬೇಕು. ಪ್ರಕಟಣೆ ಅಥವಾ ಪತ್ರಗಳನ್ನು ಓದಲು ಸಮಾಪ್ತಿ ಮಾತುಗಳ ಸಮಯ ಸಾಕಾಗದಿದ್ರೆ ನಮ್ಮ ಕ್ರೈಸ್ತ ಜೀವನ ಕಾರ್ಯಕ್ರಮದ ಭಾಗಗಳನ್ನು ಸ್ವಲ್ಪ ಬೇಗ ಮುಗಿಸುವಂತೆ ಅಧ್ಯಕ್ಷ ಸಹೋದರರನ್ನು ಕೇಳ್ಬಹುದು. ( ಪ್ಯಾರಗ್ರಾಫ್‌ 16 ಮತ್ತು  19 ನೋಡಿ.) ಗೀತೆ ಮತ್ತು ಪ್ರಾರ್ಥನೆಯೊಂದಿಗೆ ಕೂಟ ಮುಗಿಸ್ಬೇಕು.

  ಪ್ರಶಂಸೆ ಮತ್ತು ಸಲಹೆ

18. ವಿದ್ಯಾರ್ಥಿಯು ನೇಮಕ ಮುಗಿಸಿದ ಮೇಲೆ, ಕೂಟದ ಅಧ್ಯಕ್ಷ ನೇಮಿಸಲ್ಪಟ್ಟ ಅಧ್ಯಯನ ಅಂಶದಿಂದ ಪ್ರಶಂಸೆ ಹಾಗೂ ಸಲಹೆಯನ್ನು ಒಂದು ನಿಮಿಷದೊಳಗೆ ಕೊಡ್ಬೇಕು. ನೇಮಕಕ್ಕೆ ಕರೆಯುವಾಗ ವಿದ್ಯಾರ್ಥಿ ಯಾವ ಅಧ್ಯಯನ ಅಂಶದ ಮೇಲೆ ಪ್ರಗತಿ ಮಾಡ್ತಿದ್ದಾರೆ ಅಂತ ಅಧ್ಯಕ್ಷ ಮುಂಚೆನೇ ಹೇಳುವುದಿಲ್ಲ. ಆದರೆ ನೇಮಕದ ನಂತರ ಸೂಕ್ತ ಪ್ರಶಂಸೆ ನೀಡಿದ ಮೇಲೆ, ಆ ಅಧ್ಯಯನ ಅಂಶ ಯಾವುದು ಅಂತ ತಿಳಿಸಬಹುದು. ಆ ಅಂಶವನ್ನು ವಿಧ್ಯಾರ್ಥಿ ಯಾಕೆ ಚೆನ್ನಾಗಿ ಮಾಡಿದ್ದಾರೆ ಅಥವಾ ಯಾಕೆ ಮತ್ತು ಹೇಗೆ ಆ ನಿರ್ಧಿಷ್ಟ ಅಂಶದ ಮೇಲೆ ಪ್ರಗತಿ ಮಾಡಬಹುದು ಅಂತ ಪ್ರೀತಿಯಿಂದ ತಿಳಿಸ್ಬೇಕು. ವಿದ್ಯಾರ್ಥಿಗೆ ಮತ್ತು ಸಭಿಕರಿಗೆ ಪ್ರಯೋಜನಕರವಾಗುವುದಾದರೆ ಅಭಿನಯದಲ್ಲಿದ್ದ ಬೇರೆ ಉಪಯುಕ್ತ ವಿಷ್ಯಗಳನ್ನು ಸಹ ತಿಳಿಸ್ಬಹುದು. ಕೂಟ ಆದ ಮೇಲೋ ಅಥವಾ ಬೇರೆ ಸಮಯದಲ್ಲೋ, ಜನರನ್ನ ಪ್ರೀತಿಸಿ ಕಿರುಹೊತ್ತಗೆ, ಪ್ರಗತಿ ಕಿರುಹೊತ್ತಗೆ, ಅಥವಾ ಶುಶ್ರೂಷಾ ಶಾಲೆ ಪುಸ್ತಕದಿಂದ ಇನ್ನಷ್ಟು ಚೆನ್ನಾಗಿ ಪ್ರಗತಿ ಮಾಡಲು ಸಹಾಯ ಆಗೋ ಸಲಹೆಯನ್ನು ವಿದ್ಯಾರ್ಥಿಗೆ ಖಾಸಗಿಯಾಗಿ ಕೊಡ್ಬಹುದು. ಈ ಸಲಹೆ ಅವರಿಗೆ ನೇಮಿಸಿದ ಅಧ್ಯಯನ ಅಂಶ ಅಥವಾ ಬೇರೆ ಅಧ್ಯಯನ ಅಂಶದಲ್ಲಿ ಇರ್ಬಹುದು.—ಜೀವನ ಮತ್ತು ಸೇವೆ ಕೂಟದ ಅಧ್ಯಕ್ಷ ಹಾಗೂ ಸಹಾಯಕ ಸಲಹೆಗಾರ ಗಮನಿಸಬೇಕಾದ ವಿಷ್ಯ  ಪ್ಯಾರಗ್ರಾಫ್‌ 19,  24 ಮತ್ತು  25 ರಲ್ಲಿದೆ.

     ಸಮಯ

19. ಎಲ್ಲ ಭಾಗವನ್ನು ಮತ್ತು ಕೂಟದ ಅಧ್ಯಕ್ಷನ ಹೇಳಿಕೆಯನ್ನು ಸಮಯದೊಳಗೆ ಮುಗಿಸ್ಬೇಕು, ಸಮಯ ಮೀರಬಾರದು. ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಪ್ರತಿ ಭಾಗಕ್ಕೆ ಸಮಯ ಸೂಚಿಸಲಾಗಿರುತ್ತೆ. ಈ ಎಲ್ಲಾ ಭಾಗಗಳಲ್ಲಿ ವಿಷಯವನ್ನು ಸಾಕಷ್ಟು ಆವರಿಸಲ್ಪಟ್ಟರೆ, ನಿಗದಿತ ಸಮಯವನ್ನು ಸುಮ್ಮನೆ ಉಪಯೋಗಿಸಲು ಹೆಚ್ಚಿನ ಮಾಹಿತಿಯನ್ನು ಸೇರಿಸುವ ಅಗತ್ಯವಿಲ್ಲ. ಭಾಗಗಳನ್ನು ನಡಿಸುವವರು ಸಮಯ ಜಾಸ್ತಿ ತಗೊಂಡ್ರೆ ಜೀವನ ಮತ್ತು ಸೇವೆ ಕೂಟದ ಅಧ್ಯಕ್ಷ ಅಥವಾ ಸಹಾಯಕ ಸಲಹೆಗಾರ ಖಾಸಗಿ ಸಲಹೆ ಕೊಡ್ಬೇಕು. ( ಪ್ಯಾರಾಗ್ರಾಫ್‌ 24 ಮತ್ತು  25 ನೋಡಿ.) ಗೀತೆ ಮತ್ತು ಪ್ರಾರ್ಥನೆ ಸೇರಿ ಪೂರ್ತಿ ಕೂಟ 1 ಗಂಟೆ 45 ನಿಮಿಷದಲ್ಲಿ ಮುಗಿಸಬೇಕು.

 ಸಂಚರಣ ಮೇಲ್ವಿಚಾರಕರ ಭೇಟಿ

20. ಸಂಚರಣ ಮೇಲ್ವಿಚಾರಕರ ಭೇಟಿ ವಾರದಲ್ಲಿ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಕೊಟ್ಟಿರೋತರಾನೇ ಕಾರ್ಯಕ್ರಮ ನಡಿಸಬೇಕು. ಆದ್ರೆ ಸಭಾ ಬೈಬಲ್‌ ಅಧ್ಯಯನಕ್ಕೆ ಬದಲು 30 ನಿಮಿಷದ ಸೇವಾ ಭಾಷಣವನ್ನು ಸಂಚರಣ ಮೇಲ್ವಿಚಾರಕ ನೀಡುವರು. ಅಧ್ಯಕ್ಷನು ಸಂಚರಣ ಮೇಲ್ವಿಚಾರಕರನ್ನು ಭಾಷಣಕ್ಕೆ ಕರೆಯುವ ಮೊದಲು, ಕೂಟದಲ್ಲಿ ಕಲಿತ ಪಾಠಗಳನ್ನು ಮತ್ತು ಮುಂದಿನ ವಾರ ಕಲಿಯುವ ವಿಷ್ಯಗಳನ್ನು ಸಭಿಕರಿಗೆ ತಿಳಿಸಬೇಕು ಮತ್ತು ಪತ್ರ ಅಥವಾ ಪ್ರಕಟಣೆ ಇದ್ರೆ ಓದಬೇಕು. ಆಮೇಲೆ ಭಾಷಣಕ್ಕಾಗಿ ಕರಿಬೇಕು. ಭಾಷಣದ ನಂತ್ರ ಸಂಚರಣ ಮೇಲ್ವಿಚಾರಕ ತಾವು ಆರಿಸಿದ ಗೀತೆಯೊಂದಿಗೆ ಕೂಟ ಮುಗಿಸುವರು. ಕೊನೆ ಪ್ರಾರ್ಥನೆಗೆ ಬೇರೆ ಸಹೋದರನನ್ನು ಅವ್ರು ಕರೆಯಬಹುದು. ಸಂಚರಣ ಮೇಲ್ವಿಚಾರಕರ ಭೇಟಿ ವಾರದಲ್ಲಿ, ಸಭೆಯ ಭಾಷೆಯಲ್ಲಿ ಉಪತರಗತಿ ನಡೆಸಬಾರದು. ಸಭೆಯಲ್ಲಿ ಒಂದು ಗುಂಪು ಇರುವುದಾದ್ರೆ, ಅವ್ರು ತಮ್ಮ ಕೂಟ ನಡೆಸಬಹುದು. ಆದ್ರೆ ಸೇವಾ ಭಾಷಣ ನೀಡೋ ಸಮಯದಲ್ಲಿ ಆ ಗುಂಪು ಸಭೆಯೊಂದಿಗೆ ಸೇರಬೇಕು.

 ಸಮ್ಮೇಳನ ಅಥವಾ ಅಧಿವೇಶನ ವಾರ

21. ಸಮ್ಮೇಳನ ಅಥವಾ ಅಧಿವೇಶನ ವಾರದಲ್ಲಿ ಕೂಟಗಳು ನಡೆಯಲ್ಲ. ಸಹೋದರ ಸಹೋದರಿಯರು ಆ ವಾರದ ಕೂಟದ ವಿಷ್ಯವನ್ನು ಕುಟುಂಬವಾಗಿ ಅಥವಾ ಒಬ್ಬರೇ ಓದಿ ಕಲಿಯಬೇಕು ಎಂದು ಸಭೆಗೆ ನೆನಪಿಸಬೇಕು.

 ಯೇಸುವಿನ ಸ್ಮರಣೆಯ ವಾರ

22. ಯೇಸುವಿನ ಸ್ಮರಣೆ ದಿನ ವಾರಮಧ್ಯೆ ಬಂದ್ರೆ ಜೀವನ ಮತ್ತು ಸೇವೆ ಕೂಟವನ್ನು ನಡೆಸ್ಬಾರದು.

 ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕ

23. ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕರಾಗಿ ಒಬ್ಬ ಹಿರಿಯನನ್ನು, ಹಿರಿಯ ಮಂಡಳಿ ಆಯ್ಕೆ ಮಾಡ್ಬೇಕು. ಇಲ್ಲಿರೋ ಸೂಚನೆಗಳ ಪ್ರಕಾರ ಕೂಟ ಚೆನ್ನಾಗಿ ನಡಿತಿದ್ಯಾ ಅಂತ ಈ ಮೇಲ್ವಿಚಾರಕ ನೋಡಿಕೊಳ್ಳಬೇಕು. ಈ ಮೇಲ್ವಿಚಾರಕ ಸಹಾಯಕ ಸಲಹೆಗಾರನ ಜೊತೆ ಒಳ್ಳೇ ಮಾತುಕತೆ ಇಟ್ಕೊಬೇಕು. ಜೀವನ ಮತ್ತು ಸೇವೆ ಕೂಟದ ಕೈಪಿಡಿ ಸಿಕ್ಕಿದ ಕೂಡ್ಲೆ ಕೂಟದ ಮೇಲ್ವಿಚಾರಕ ಆ ಎರಡು-ತಿಂಗಳ ಎಲ್ಲ ಕೂಟದ ಭಾಗಗಳನ್ನ ಯಾರು ಮಾಡಬೇಕು ಅಂತ ನೇಮಿಸಬೇಕು. ( ಪ್ಯಾರಾಗ್ರಾಫ್‌ 2-14 ನೋಡಿ.) ಈ ನೇಮಕಗಳಲ್ಲಿ ವಿದ್ಯಾರ್ಥಿ ನೇಮಕಗಳಷ್ಟೇ ಅಲ್ಲ, ಕೂಟದ ಇನ್ನಿತರ ಭಾಗಗಳನ್ನು ಯಾರು ಮಾಡ್ತಾರೆ ಮತ್ತು ಕೂಟದ ಅಧ್ಯಕ್ಷರು ಯಾರಾಗಿರುತ್ತಾರೆ ಅನ್ನೋದೂ ಸೇರಿದೆ. ಕೂಟದ ಅಧ್ಯಕ್ಷರಾಗಿ ಹಿರಿಯ ಮಂಡಳಿಯಿಂದ ಒಪ್ಪಿಗೆ ಪಡೆದ ಅಧ್ಯಕ್ಷರನ್ನ ಮಾತ್ರ ಆರಿಸಬೇಕು. ( ಪ್ಯಾರಾಗ್ರಾಫ್‌ 3-16 ಮತ್ತು  24 ನೋಡಿ.) ಕೂಟದ ಮೇಲ್ವಿಚಾರಕ ವಿದ್ಯಾರ್ಥಿಗೆ ನೇಮಕ ಮಾಡುವಾಗ ವಿದ್ಯಾರ್ಥಿಯ ವಯಸ್ಸು, ಅನುಭವ ಮತ್ತು ಚರ್ಚಿಸಲ್ಪಡುವ ವಿಷಯದ ಬಗ್ಗೆ ವಾಕ್ಸರಳತೆಯನ್ನು ಅವನು ಪರಿಗಣಿಸಬೇಕು. ವಿದ್ಯಾರ್ಥಿ ನೇಮಕಗಳಲ್ಲದ ಇತರ ಭಾಗಗಳನ್ನು ನೇಮಿಸುವಾಗ ಸಹ ಇದೇ ವಿಷಯವನ್ನು ಮನಸ್ಸಿನಲ್ಲಿಡಬೇಕು. ನೇಮಕಗಳು ಇರುವ ಎಲ್ಲರಿಗೆ ಕಡಿಮೆಪಕ್ಷ ಮೂರು ವಾರಗಳ ಮುಂಚೆ ತಿಳಿಸಬೇಕು. ವಿದ್ಯಾರ್ಥಿ ನೇಮಕಗಳಿರುವವರಿಗೆ ತಿಳಿಸಲು ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ನೇಮಕ (S-89) ಫಾರ್ಮ್‌ ಬಳಸಬೇಕು. ಆಯಾ ವಾರದ ಕೂಟದ ಎಲ್ಲ ನೇಮಕಗಳಿರುವ ಶೆಡ್ಯೂಲ್‌, ಮಾಹಿತಿ ಫಲಕದಲ್ಲಿ ಇರುವಂತೆ ನೋಡಿಕೊಳ್ಳುವುದು ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕನ ಜವಾಬ್ದಾರಿ ಆಗಿರುತ್ತೆ. ಹಿರಿಯ ಮಂಡಳಿ ಈ ಮೇಲ್ವಿಚಾರಕನಿಗೆ ಸಹಾಯ ಮಾಡಲು ಇನ್ನೊಬ್ಬ ಹಿರಿಯನನ್ನ ಅಥವಾ ಸಹಾಯಕ ಸೇವಕನನ್ನ ನೇಮಿಸಬಹುದು. ಆದ್ರೆ ವಿದ್ಯಾರ್ಥಿ ನೇಮಕಗಳನ್ನ ಬಿಟ್ಟು, ಇರುವ ಬೇರೆ ನೇಮಕಗಳನ್ನ ಹಿರಿಯರು ಮಾತ್ರ ನೇಮಿಸಬೇಕು.

    ಜೀವನ ಮತ್ತು ಸೇವೆ ಕೂಟದ ಅಧ್ಯಕ್ಷ

24. ಪ್ರತಿವಾರ ಒಬ್ಬ ಹಿರಿಯ, ಕೂಟದ ಅಧ್ಯಕ್ಷನಾಗಿ ಇರ್ತಾನೆ. ( ಹಿರಿಯರು ಕಡಿಮೆ ಇರೋ ಸಭೆಗಳಲ್ಲಿ ಅರ್ಹ ಸಹಾಯಕ ಸೇವಕರು ಕೂಟ ನಡಿಸಬಹುದು.) ಅವನು ಕೂಟದ ಆರಂಭದಲ್ಲಿ ಮತ್ತು ಸಮಾಪ್ತಿಯಲ್ಲಿ ಏನ್‌ ಹೇಳ್ಬೇಕು ಅಂತ ಚೆನ್ನಾಗಿ ತಯಾರಿ ಮಾಡ್ಬೇಕು. ಅವನು ಕೂಟದ ಪ್ರತಿಯೊಂದು ಭಾಗವನ್ನು ಪರಿಚಯಿಸಬೇಕು. ಹಿರಿಯರ ಮಂಡಳಿಯಲ್ಲಿ ಕೆಲವೇ ಹಿರಿಯರಿದ್ರೆ ಅವನು ಕೂಟದ ಬೇರೆ ಭಾಗಗಳನ್ನು ಮಾಡಬಹುದು. ಯಾವುದೆಂದ್ರೆ ಕೆಲವೊಂದು ಭಾಗಗಳಲ್ಲಿ ಬರೀ ವೀಡಿಯೊವನ್ನ ತೋರಿಸೋದು ಇರುತ್ತೆ ಚರ್ಚೆ ಮಾಡೋದು ಇರಲ್ಲ ಇಂತಹ ಭಾಗಗಳನ್ನು ಇವರು ಮಾಡಬಹುದು. ಭಾಗವನ್ನು ಚುಟುಕಾಗಿ ಪರಿಚಯಿಸಬೇಕು. ಈ ಮೇಲೆ ಹೇಳಿದ ರೀತಿಯಲ್ಲಿ ಅಧ್ಯಕ್ಷನಾಗಿ ಕೂಟ ನಡಿಸಲು ಯಾರು ಅರ್ಹರು ಅಂತ ಹಿರಿಯರ ಮಂಡಳಿ ನಿರ್ಧರಿಸಬೇಕು. ಅರ್ಹ ಹಿರಿಯರನ್ನು ಸರದಿ ಪ್ರಕಾರ ಅಧ್ಯಕ್ಷನಾಗಿ ನೇಮಿಸಬಹುದು. ಅನುಕೂಲಕ್ಕೆ ತಕ್ಕಂತೆ ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕನನ್ನು ಬೇರೆ ಅರ್ಹ ಹಿರಿಯರಿಗಿಂತಲೂ ಹೆಚ್ಚು ಸಲ ಅಧ್ಯಕ್ಷನಾಗಿ ನೇಮಿಸ್ಬಹುದು. ಒಬ್ಬ ಹಿರಿಯ ಸಭಾ ಬೈಬಲ್‌ ಅಧ್ಯಯನ ನಡೆಸಲು ಅರ್ಹನಾಗಿದ್ರೆ ಕೂಟದ ಅಧ್ಯಕ್ಷನಾಗಿರಲು ಸಹ ಅರ್ಹತೆ ಇರುತ್ತೆ. ಆದ್ರೆ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಹಿರಿಯನು ವಿದ್ಯಾರ್ಥಿ ನೇಮಕ ಮಾಡಿದವ್ರಿಗೆ ಪ್ರಶಂಸೆ ಮತ್ತು ಅಗತ್ಯವಿದ್ದಲ್ಲಿ, ಉಪಯುಕ್ತ ಸಲಹೆಯನ್ನು ಪ್ರೀತಿ ಅಕ್ಕರೆಯಿಂದ ಕೊಡಬೇಕಾಗಿದೆ ಅನ್ನೋದನ್ನು ಮನಸ್ಸಲ್ಲಿಡಿ. ಕೂಟ ಸರಿಯಾದ ಸಮಯಕ್ಕೆ ಮುಗಿಯೋ ತರ ಅಧ್ಯಕ್ಷ ನೋಡಿಕೊಳ್ಳಬೇಕು. ( ಪ್ಯಾರಾಗ್ರಾಫ್‌ 17 ಮತ್ತು  19 ನೋಡಿ.) ಅಧ್ಯಕ್ಷ ಇಷ್ಟಪಟ್ರೆ ಮತ್ತು ಸ್ಟೇಜಲ್ಲಿ ಜಾಗ ಇದ್ರೆ ಅವನಿಗೆ ಪ್ರತ್ಯೇಕ ಮೈಕ್‌ ಸ್ಟ್ಯಾಂಡ್‌ ವ್ಯವಸ್ಥೆ ಮಾಡಬಹುದು. ಇದ್ರಿಂದ ಅಧ್ಯಕ್ಷ ಭಾಗವನ್ನು ಪರಿಚಯಿಸ್ವಾಗ, ಭಾಷಣಗಾರರು ಮೇನ್‌ ಸ್ಟ್ಯಾಂಡ್‌ ಹತ್ರ ಬಂದು ನಿಲ್ಲಲು ಆಗುತ್ತೆ. ಅದೇ ರೀತಿ ಬೈಬಲ್‌ ಓದುವಿಕೆ ಹಾಗೂ ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ ಭಾಗದ ಸಮಯದಲ್ಲಿ ಅಧ್ಯಕ್ಷ ಸ್ಟೇಜಲ್ಲಿ ಮೇಜಿನತ್ರ ಕೂತ್ಕೋಬಹುದು. ಇದು ಸಮಯ ಉಳಿಸಬಹುದು.

   ಸಹಾಯಕ ಸಲಹೆಗಾರ

25. ಸಹಾಯಕ ಸಲಹೆಗಾರನಾಗಿ ಒಬ್ಬ ಅನುಭವೀ ಭಾಷಣಗಾರ ಹಿರಿಯನನ್ನು ನೇಮಿಸ್ಬೇಕು. ಇವ್ರು ಹಿರಿಯರು ಮತ್ತು ಸಹಾಯಕ ಸೇವಕರು ಮಾಡುವ ಭಾಗಗಳ ಕುರಿತು ಖಾಸಗಿ ಸಲಹೆ ಕೊಡ್ತಾರೆ. ಇದರಲ್ಲಿ ಜೀವನ ಮತ್ತು ಸೇವೆ ಕೂಟದ ಭಾಗ, ಸಾರ್ವಜನಿಕ ಭಾಷಣ, ಕಾವಲಿನಬುರುಜು ಅಧ್ಯಯನ ಅಥವಾ ಸಭಾ ಬೈಬಲ್‌ ಅಧ್ಯಯನ ನಡೆಸುವುದು ಮತ್ತು ಓದುವಿಕೆ ಸೇರಿದೆ. ( ಪ್ಯಾರಾಗ್ರಾಫ್‌ 19 ನೋಡಿ.) ಸಭೆಯಲ್ಲಿ ಚೆನ್ನಾಗಿ ಕಲಿಸುವ ಮತ್ತು ಭಾಷಣ ನೀಡುವ ಅನೇಕ ಹಿರಿಯರು ಇರೋದಾದ್ರೆ, ಪ್ರತಿವರ್ಷ ಬೇರೆಬೇರೆ ಹಿರಿಯರನ್ನು ಸಹಾಯಕ ಸಲಹೆಗಾರನಾಗಿ ನೇಮಿಸಬಹುದು. ಸಹಾಯಕ ಸಲಹೆಗಾರ ಪ್ರತಿಯೊಂದು ನೇಮಕದ ನಂತರ ಸಲಹೆ ಕೊಡಬೇಕಾಗಿಲ್ಲ.

 ಉಪತರಗತಿಗಳು

26. ಜಾಸ್ತಿ ವಿದ್ಯಾರ್ಥಿಗಳಿದ್ರೆ ಸಭೆಗಳು ಉಪತರಗತಿಗಳನ್ನು ನಡಿಸ್ಬಹುದು. ಉಪತರಗತಿ ನಡಿಸಲು ಒಬ್ಬ ಅರ್ಹ ಸಲಹೆಗಾರ ಇರ್ಬೇಕು. ಅವನು ಹಿರಿಯನಾಗಿದ್ರೆ ಒಳ್ಳೇದು. ಹಿರಿಯರು ಇಲ್ಲಾಂದ್ರೆ ಒಬ್ಬ ಅರ್ಹ ಸಹಾಯಕ ಸೇವಕನನ್ನು ಸಲಹೆಗಾರನಾಗಿ ನೇಮಿಸಬಹುದು. ಈ ನೇಮಕಕ್ಕೆ ಯಾರು ಅರ್ಹರು ಮತ್ತು ನೇಮಕವನ್ನು ಅರ್ಹರಾದ ಒಬ್ಬರಿಗೆ ಕೊಡಬೇಕೋ ಅಥವಾ ಸರದಿ ಪ್ರಕಾರ ಬೇರೆ ಬೇರೆಯವರಿಗೆ ಕೊಡಬೇಕೋ ಅಂತ ಹಿರಿಯರ ಮಂಡಳಿ ನಿರ್ಣಯಿಸ್ಬೇಕು. ಸಲಹೆಗಾರ  ಪ್ಯಾರಾಗ್ರಾಫ್‌ 18ರಲ್ಲಿರೋ ಸೂಚನೆಗಳನ್ನು ಅನುಸರಿಸಬೇಕು. ಬೈಬಲಿನಲ್ಲಿರುವ ನಿಧಿ ಕಾರ್ಯಕ್ರಮದ ಬೈಬಲಿನಲ್ಲಿರುವ ರತ್ನಗಳು ಎಂಬ ಭಾಗ ಮುಗಿದ ಕೂಡಲೇ ವಿದ್ಯಾರ್ಥಿಗಳು ಉಪತರಗತಿಗೆ ಹೋಗುವಂತೆ ತಿಳಿಸಬೇಕು. ಕೂಟದ ಕೊನೆಯ ವಿದ್ಯಾರ್ಥಿ ನೇಮಕ ಮುಗಿದ ಕೂಡಲೇ ಅವರು ಮುಖ್ಯ ಸಭಾಂಗಣಕ್ಕೆ ಬರಬೇಕು.

 ವೀಡಿಯೊಗಳು

27. ಜೀವನ ಮತ್ತು ಸೇವೆ ಕೂಟದಲ್ಲಿ ವೀಡಿಯೊ ತೋರಿಸಲಾಗುತ್ತೆ. ಈ ವೀಡಿಯೊಗಳು JW ಲೈಬ್ರರಿ ಆ್ಯಪ್‌ನಲ್ಲಿ ಇವೆ ಮತ್ತು ಮೊಬೈಲ್‌, ಟ್ಯಾಬ್‌ ಮುಂತಾದವುಗಳಲ್ಲಿ ನೋಡ್ಬಹುದು.

© 2023 Watch Tower Bible and Tract Society of Pennsylvania

S-38-KA 11/23