ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಇತರ ಧರ್ಮಗಳನ್ನು ಗೌರವಿಸುತ್ತಾರಾ?

ಯೆಹೋವನ ಸಾಕ್ಷಿಗಳು ಇತರ ಧರ್ಮಗಳನ್ನು ಗೌರವಿಸುತ್ತಾರಾ?

 ಹೌದು. ಜನರ ಧಾರ್ಮಿಕ ನಂಬಿಕೆಗಳು ಏನೇ ಇರಲಿ, “ಎಲ್ಲರನ್ನೂ ಸನ್ಮಾನಿಸಿರಿ” ಎನ್ನುವ ಬೈಬಲ್‌ ಸಲಹೆಯನ್ನು ನಾವು ಪಾಲಿಸುತ್ತೇವೆ. (1 ಪೇತ್ರ 2:17, BSI) ಉದಾಹರಣೆಗೆ, ಕೆಲವೊಂದು ದೇಶಗಳಲ್ಲಿ ನೂರಾರು ಸಾವಿರ ಯೆಹೋವನ ಸಾಕ್ಷಿಗಳಿದ್ದಾರೆ. ಹಾಗಿದ್ದರೂ ಇತರ ಧಾರ್ಮಿಕ ಗುಂಪುಗಳ ಕೆಲಸಕಾರ್ಯಗಳನ್ನು ನಿಯಂತ್ರಿಸುವಂತೆ ಅಥವಾ ನಿಷೇಧಿಸುವಂತೆ ನಾವು ರಾಜಕೀಯ ವ್ಯಕ್ತಿಗಳನ್ನಾಗಲಿ ಶಾಸನಕಾರರನ್ನಾಗಲಿ ಒತ್ತಾಯಿಸುವುದಿಲ್ಲ. ನಮ್ಮ ಧರ್ಮದ ನಂಬಿಕೆಗಳನ್ನು ಮತ್ತು ನೈತಿಕ ನಿಯಮಗಳನ್ನು ಇತರರ ಮೇಲೆ ಹೇರಲು ಯಾವುದೇ ಚಳುವಳಿಯನ್ನು ಸಹ ನಡೆಸುವುದಿಲ್ಲ. ಅದಕ್ಕೆ ಬದಲಾಗಿ ಇತರರೆಡೆಗೆ ಸಹನೆಯನ್ನು ತೋರಿಸುತ್ತೇವೆ. ಅದೇ ರೀತಿಯ ಸಹನೆಯನ್ನು ಇತರರು ನಮ್ಮ ಕಡೆಗೆ ತೋರಿಸುವಾಗ ಅದನ್ನು ಗಣ್ಯಮಾಡುತ್ತೇವೆ.-ಮತ್ತಾಯ 7:12.