ಮಾಹಿತಿ ಇರುವಲ್ಲಿ ಹೋಗಲು

“ನನ್ನ ಕೈಲಾಗೋದನ್ನೆಲ್ಲಾ ಮಾಡ್ತೀನಿ”

“ನನ್ನ ಕೈಲಾಗೋದನ್ನೆಲ್ಲಾ ಮಾಡ್ತೀನಿ”

ಜರ್ಮನಿಯಲ್ಲಿರೋ ಅರ್ಮಾ ಅನ್ನೋ ಸಹೋದರಿಗೆ ಹೆಚ್ಚುಕಡಿಮೆ 90 ವರ್ಷ. ಅವ್ರು ಎರಡು ಸಲ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಮತ್ತು ಅವ್ರಿಗೆ ತುಂಬ ಆಪರೇಷನ್‌ ಆಗಿದೆ. ಹಾಗಾಗಿ ಅವ್ರಿಗೆ ಮುಂಚಿನ ತರ ಮನೆಮನೆ ಸೇವೆ ಮಾಡೋಕೆ ಆಗ್ತಿಲ್ಲ. ಅದಕ್ಕೆ ಅವ್ರು ಪತ್ರದ ಮೂಲಕ ಸಂಬಂಧಿಕರಿಗೆ, ಪರಿಚಯಸ್ಥರಿಗೆ ಬೈಬಲಿನಲ್ಲಿರೋ ಸತ್ಯಗಳ ಬಗ್ಗೆ ತಿಳಿಸ್ತಾರೆ. ಅವ್ರು ಬರೆದ ಪತ್ರಗಳಿಂದ ತುಂಬ ಜನ ಸಾಂತ್ವನ, ಸಮಾಧಾನ ಪಡ್ಕೊಂಡಿದ್ದಾರೆ. ಜನ್ರು ಆ ಸಹೋದರಿಗೆ, “ಮತ್ತೆ ಇನ್ಯಾವತ್ತು ಪತ್ರ ಬರೀತೀರಿ” ಅಂತ ಕೇಳ್ತಾರೆ. ಅಷ್ಟೇ ಅಲ್ಲ ಪತ್ರದ ಮೂಲಕ ಕೃತಜ್ಞತೆ ತಿಳಿಸ್ತಾರೆ, ಇನ್ನೂ ಇಂಥ ಪತ್ರಗಳನ್ನ ಬರೀತಾ ಇರಿ ಅಂತ ಪ್ರೋತ್ಸಾಹಿಸ್ತಾರೆ. ಅರ್ಮಾ ಹೇಳೋದು: “ಇದನ್ನೆಲ್ಲಾ ನೋಡಿ ನಂಗೆ ತುಂಬ ಖುಷಿಯಾಗುತ್ತೆ, ಇನ್ನೂ ಹೆಚ್ಚು ಸುವಾರ್ತೆ ಸಾರಬೇಕು ಅಂತ ಅನಿಸುತ್ತೆ.”

ಅರ್ಮಾ ವೃದ್ಧಾಶ್ರಮದಲ್ಲಿರೋ ವೃದ್ಧರಿಗೂ ಪತ್ರ ಬರೀತಾರೆ. ಅವ್ರು ಹೇಳೋದು, “ಒಬ್ಬ ವೃದ್ಧ ಸ್ತ್ರೀ ನಂಗೆ ಫೋನ್‌ ಮಾಡಿ, ಅವ್ರ ಗಂಡ ತೀರಿಹೋದ ಮೇಲೆ ನಾನು ಬರೆದ ಪತ್ರಗಳಿಂದ ಅವ್ರಿಗೆ ತುಂಬ ಸಾಂತ್ವನ ಸಿಗ್ತು ಅಂತ ಹೇಳಿದ್ರು. ಅದನ್ನ ಅವ್ರು ಬೈಬಲಿನ ಒಳಗೆ ಇಟ್ಕೊಂಡು ಸಂಜೆಯ ಟೈಮಲ್ಲಿ ಆಗಾಗ ಓದ್ತಾ ಇರ್ತಾರಂತೆ. ಇತ್ತೀಚಿಗೆ ಗಂಡ ತೀರಿಹೋದ ಇನ್ನೂಬ್ಬ ಸ್ತ್ರೀ ನಂಗೆ, ನಾನು ಬರೆದ ಪತ್ರಗಳು ಅವ್ರಿಗೆ ತುಂಬ ಸಮಾಧಾನ ಕೊಡ್ತು, ಆ ಪತ್ರಗಳು ಅವ್ರ ಪಾದ್ರಿ ಕೊಟ್ಟ ಭಾಷಣಕ್ಕಿಂತ ತುಂಬ ಸಾಂತ್ವನ ಕೊಡ್ತು ಅಂತ ಹೇಳಿದ್ರು. ಅವ್ರಿಗೆ ತುಂಬ ಪ್ರಶ್ನೆಗಳಿದೆಯಂತೆ ಅದನ್ನ ನನ್ನ ಹತ್ರ ಬಂದು ತಿಳ್ಕೊಳ್ಳಬಹುದಾ ಅಂತನೂ ಕೇಳಿದ್ರು.”

ಅರ್ಮಾಗೆ ಪರಿಚಯ ಇರೋ ಒಬ್ಬ ಸ್ತ್ರೀ ಬೇರೆ ಸ್ಥಳಕ್ಕೆ ಹೋದ್ರು. ಅವ್ರು ಸತ್ಯದಲ್ಲಿ ಇರಲಿಲ್ಲ, ಅರ್ಮಾಗೆ ಪತ್ರಗಳನ್ನ ಬರೀರಿ ಅಂತ ಹೇಳಿದ್ರಂತೆ. ಸಹೋದರಿ ಬರೆದ ಪತ್ರಗಳನ್ನೆಲ್ಲಾ ಅವ್ರು ಸಂಗ್ರಹಿಸಿ ಇಟ್ಕೊಂಡಿದ್ರು. ಆ ಸ್ತ್ರೀ ತೀರಿ ಹೋದ ನಂತ್ರ ಅವ್ರ ಮಗಳು ಪೋನ್‌ ಮಾಡಿ ಏನು ಹೇಳಿದಳು ಅಂತ ಸಹೋದರಿ ಅರ್ಮಾ ಹೀಗೆ ಹೇಳ್ತಾರೆ: “ನಾನು ಆಕೆಯ ಅಮ್ಮನಿಗೆ ಬರೆದಂಥ ಪತ್ರಗಳನ್ನೆಲ್ಲಾ ಓದಿದಳಂತೆ ಮತ್ತು ಬೈಬಲಿಗೆ ಸಂಬಂಧಪಟ್ಟ ಪತ್ರಗಳನ್ನ ಅವಳಿಗೂ ಬರೆಯಬೇಕು ಅಂತ ಕೇಳಿಕೊಂಡಳು.”

ಅರ್ಮಾ ಸೇವೆನ ತುಂಬ ಆನಂದಿಸ್ತಿದ್ದಾರೆ. ಆಕೆ ಹೀಗೆ ಹೇಳ್ತಾರೆ: “ನಾನು ಯಾವಾಗ್ಲೂ ‘ಯೆಹೋವನೇ ನಂಗೆ ನಿನ್ನ ಸೇವೆ ಮಾಡ್ತಾ ಇರೋಕೆ ಬೇಕಾದ ಶಕ್ತಿ ಕೊಡಪ್ಪಾ’ ಅಂತ ಪ್ರಾರ್ಥಿಸ್ತೀನಿ. ನಂಗೆ ಮನೆ ಮನೆ ಸೇವೆ ಮಾಡೋಕೆ ಆಗ್ತಾ ಇಲ್ಲ, ಆದ್ರೂ ನನ್ನ ಕೈಲಾಗೋದನ್ನೆಲ್ಲಾ ಮಾಡ್ತೀನಿ.” ಅಂತ ಹೇಳ್ತಾರೆ.