ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬೆಲೆಬಾಳೋ ಮುತ್ತನ್ನು ಕಂಡುಕೊಂಡವರು

ಬೆಲೆಬಾಳೋ ಮುತ್ತನ್ನು ಕಂಡುಕೊಂಡವರು

 ಮನುಷ್ಯರ ಎಲ್ಲ ಸಮಸ್ಯೆಗಳನ್ನ ದೇವರ ರಾಜ್ಯ ಪರಿಹಾರ ಮಾಡುತ್ತೆ ಅಂತ ಯೇಸು ಬೋಧಿಸಿದನು. (ಮತ್ತಾಯ 6:10) ಮತ್ತಾಯ 13:44-46ರಲ್ಲಿ, ದೇವರ ರಾಜ್ಯದ ಬಗ್ಗೆ ಇರೋ ಸತ್ಯವನ್ನ ಕಲಿಸುತ್ತಾ ಅದಕ್ಕಿರೋ ಅಮೂಲ್ಯ ಬೆಲೆಯನ್ನ ತಿಳಿಸೋಕೆ ಈ ಮುಂದಿನ ಎರಡು ದೃಷ್ಟಾಂತಗಳನ್ನ ಹೇಳಿದನು:

  •   ಹೊಲದಲ್ಲಿ ಕೆಲಸಮಾಡ್ತಿದ್ದ ಒಬ್ಬ ವ್ಯಕ್ತಿಗೆ ಅಕಸ್ಮಾತ್ತಾಗಿ ಬಚ್ಚಿಟ್ಟ ನಿಧಿ ಸಿಗುತ್ತೆ.

  •   ಒಳ್ಳೇ ಮುತ್ತುಗಳಿಗಾಗಿ ಹುಡುಕೋ ಒಬ್ಬ ವ್ಯಾಪಾರಿಗೆ ಬೆಲೆಬಾಳೋ ಒಂದು ಮುತ್ತು ಸಿಗುತ್ತೆ.

 ಅವರಿಗೆ ಸಿಕ್ಕ ಅಮೂಲ್ಯ ನಿಧಿಯನ್ನ ಪಡ್ಕೊಳ್ಳೋಕೆ ಅವರು ತಮ್ಮ ಹತ್ರ ಎಲ್ಲವನ್ನೂ ಖುಷಿಯಿಂದ ಮಾರುತ್ತಾರೆ. ಈ ಇಬ್ಬರು ವ್ಯಕ್ತಿಗಳು ಯಾರು ದೇವರ ರಾಜ್ಯದ ಆಶೀರ್ವಾದಗಳನ್ನ ಅಮೂಲ್ಯವಾಗಿ ನೋಡಿ ಅವನ್ನ ಪಡ್ಕೊಳ್ಳೋಕೆ ತಮ್ಮ ಜೀವನದಲ್ಲಿ ದೊಡ್ಡ ತ್ಯಾಗಗಳನ್ನು ಮಾಡ್ತಾರೋ ಅವರನ್ನ ಸೂಚಿಸ್ತಾರೆ. (ಲೂಕ 18:29, 30) ಈ ವಿಡಿಯೋದಲ್ಲಿ, ಯೇಸು ಹೇಳಿದ ಆ ದೃಷ್ಟಾಂತದಲ್ಲಿದ್ದ ಇಬ್ಬರು ವ್ಯಕ್ತಿಗಳ ತರ ಇರೋ ಇಬ್ಬರ ಅನುಭವಗಳನ್ನ ನೋಡಿ.