ಮಾಹಿತಿ ಇರುವಲ್ಲಿ ಹೋಗಲು

ಪಾದ್ರಿಗಳ ಬಿರು ನುಡಿಗೆ ಸಾಕ್ಷಿಗಳ ಮೃದು ನುಡಿ

ಪಾದ್ರಿಗಳ ಬಿರು ನುಡಿಗೆ ಸಾಕ್ಷಿಗಳ ಮೃದು ನುಡಿ

ಆರ್ಟೂರ್‌ ಯೆಹೋವನ ಸಾಕ್ಷಿಗಳ ಸಭೆಗಳನ್ನು ಭೇಟಿ ಮಾಡುವ ಸಂಚರಣ ಮೇಲ್ವಿಚಾರಕ. ಒಮ್ಮೆ ಅವನು ಅರ್ಮೇನಿಯದಲ್ಲಿ ಒಂದು ಸಭೆಯನ್ನು ಭೇಟಿ ಮಾಡಿದಾಗ ಅಲ್ಲಿ ಇರುವವರು ಒಂದು ಸಲನೂ ಸಾರ್ವಜನಿಕ ಸಾಕ್ಷಿಕಾರ್ಯ ಮಾಡಿಲ್ಲ ಅಂತ ಗೊತ್ತಾಯ್ತು. ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವ ಒಂದು ವಿಧಾನ ರಸ್ತೆಯಲ್ಲಿ ಹೋಗುತ್ತಾ ಬರುತ್ತಾ ಇರುವವರಿಗೋಸ್ಕರ ಬೈಬಲ್‌ ಪ್ರಕಾಶನಗಳನ್ನು ಒಂದು ತಳ್ಳುಬಂಡಿಯಲ್ಲಿ ಇಡೋದು. ಈ ರೀತಿ ಸಾಕ್ಷಿಕಾರ್ಯ ಮಾಡಲು ಅಲ್ಲಿನ ಸಹೋದರ ಸಹೋದರಿಯರಿಗೆ ಪ್ರೋತ್ಸಾಹಿಸಲಿಕ್ಕೆ ಆರ್ಟೂರ್‌ ಅವನ ಹೆಂಡ್ತಿ ಆನಾ ಒಂದು ಚಿಕ್ಕ ಪಟ್ಟಣಕ್ಕೆ ಹೋಗಿ ಜನರಿಂದ ಗಿಜಿಗುಟ್ಟು ಸ್ಥಳದಲ್ಲಿ ತಳ್ಳುಬಂಡಿಯನ್ನು ಇಟ್ರು. ಇವರ ಜೊತೆ ಜೆರೀರ್‌ ಅನ್ನೋ ಸಹೋದರ ಕೂಡ ಇದ್ದ.

ತಳ್ಳುಬಂಡಿಯನ್ನು ನೋಡಿದ ತಕ್ಷಣ ಹೋಗೋರು ಬರೋರು ಆಸಕ್ತಿಯಿಂದ ಪ್ರಕಾಶನಗಳನ್ನು ತಕ್ಕೊಂಡ್ರು. ಇದು ವಿರೋಧಿಗಳ ಕಣ್ಣಿಗೂ ಬಿತ್ತು. ಇಬ್ಬರು ಪಾದ್ರಿಗಳು ತಳ್ಳುಬಂಡಿ ಹತ್ರ ಬಂದರು. ಅವರಲ್ಲಿ ಒಬ್ಬ ಏನೂ ಹೇಳದೆ ಕೇಳದೆ ತಳ್ಳುಬಂಡಿಯನ್ನ ಒದ್ದುಬಿಟ್ಟ. ಆಮೇಲೆ ಆರ್ಟೂರ್‌ನ ಕಪಾಳಕ್ಕೆ ಹೊಡೆದ. ಅವನು ಹೊಡೆದಿದ್ದ ಬರಕ್ಕೆ ಆರ್ಟೂರ್‌ನ ಕನ್ನಡಕ ಕೆಳಗೆ ಬಿತ್ತು. ಆರ್ಟೂರ್‌, ಆನಾ ಮತ್ತು ಜೆರೀರ್‌ ಆ ಪಾದ್ರಿಗಳನ್ನು ಸಮಾಧಾನ ಮಾಡಲಿಕ್ಕೆ ತುಂಬ ಪ್ರಯತ್ನಪಟ್ರು. ಆದ್ರೆ ಏನೂ ಪ್ರಯೋಜನ ಆಗ್ಲಿಲ್ಲ. ಆ ಪಾದ್ರಿಗಳು ತಳ್ಳುಬಂಡಿಯನ್ನು ತುಳಿದು ಅದರಲ್ಲಿದ್ದ ಪ್ರಕಾಶನಗಳನ್ನು ಚೆಲ್ಲಾಪಿಲ್ಲಿ ಮಾಡಿದ್ರು. ಸಾಕ್ಷಿಗಳಿಗೆ ಬಾಯಿಗೆ ಬಂದ ಹಾಗೆ ಬೈದು ರೇಗಾಡಿದ್ರು, ಕೊನೆಗೆ ಅವರನ್ನ ಹೆದರಿಸಿ ಹೋದ್ರು.

ಆಮೇಲೆ ಆರ್ಟೂರ್‌, ಆನಾ ಮತ್ತು ಜೆರೀರ್‌ ಅಲ್ಲಿರೋ ಪೋಲೀಸ್‌ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್‌ ಕೊಟ್ರು. ಅಲ್ಲದೆ ಅಲ್ಲಿದ್ದ ಕೆಲವು ಪೋಲೀಸ್‌ ಅಧಿಕಾರಿಗಳಿಗೆ ಮತ್ತು ಸಿಬ್ಬಂಧಿಗೆ ಬೈಬಲ್‌ ಬಗ್ಗೆ ಚುಟುಕಾಗಿ ಹೇಳಿದರು. ನಂತರ ಆ ಮೂವರನ್ನು ಹಿರಿಯ ಪೋಲೀಸ್‌ ಅಧಿಕಾರಿ ಹತ್ತಿರ ಕರಕೊಂಡು ಹೋಗಲಾಯಿತು. ಮೊದಲು ಆ ಪೋಲೀಸ್‌ಗೆ ಏನಾಯ್ತು ಅಂತ ಗೊತ್ತಾಗಬೇಕಿತ್ತು ಅಷ್ಟೇ. ಅರ್ಟೂರ್‌ ಗಟ್ಟಿಮುಟ್ಟಿಯಾಗಿದ್ರು ಕೆನ್ನೆಗೆ ಹೊಡೆದವನಿಗೆ ತಿರುಗಿ ಹೊಡಿಲಿಲ್ಲ ಅಂತ ಗೊತ್ತಾದಾಗ ಅವನು ಕೇಸ್‌ ಬಗ್ಗೆ ವಿಚಾರಿಸೋದನ್ನು ಬಿಟ್ಟು ಸಾಕ್ಷಿಗಳ ನಂಬಿಕೆ ಬಗ್ಗೆ ವಿಚಾರಿಸಲಿಕ್ಕೆ ಶುರುಮಾಡಿದ. ಹೀಗೆ ಮಾತಾಡ್ತಾ ಮಾತಾಡ್ತಾ 4 ಗಂಟೆ ಕಳೆದು ಹೋಯ್ತು. ಎಲ್ಲ ಕೇಳಿ ಆ ಪೋಲೀಸ್‌ಗೆ ಎಷ್ಟು ಆಶ್ಚರ್ಯ ಆಯಿತ್ತೆಂದ್ರೆ “ಈ ತರನೂ ಒಂದು ಧರ್ಮ ಇದೆಯೇನ್ರಿ? ಸೇರಿಕೊಂಡ್ರೆ ನಿಮ್‌ ಧರ್ಮಕ್ಕೇ ಸೇರಿಕೊಳ್ಳಬೇಕು ನೋಡಿ!“ ಅಂದ.

ಆರ್ಟೂರ್‌ ಮತ್ತು ಅವನ ಹೆಂಡತಿ ಆನಾ

ಮಾರನೇ ದಿನ ಆರ್ಟೂರ್‌ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಪುನಃ ಆರಂಭಿಸಿದಾಗ ಒಬ್ಬ ಬಂದು ‘ನಿನ್ನೆ ಇಲ್ಲಿ ಏನಾಯ್ತೋ ಅದನ್ನು ನಾನು ನೋಡ್ದೆ. ಆ ಪಾದ್ರಿ ಜಗಳ ಆಡಿದ್ರೂ ನೀವು ಜಗಳ ಆಡದೆ ಎಷ್ಟು ಶಾಂತವಾಗಿದ್ರಿ’ ಅಂತ ಹೇಳಿ ಅವರನ್ನ ಹೊಗಳಿದ. ಆ ಘಟನೆಯಿಂದ ಪಾದ್ರಿಗಳ ಮೇಲೆ ಅವನಿಗಿದ್ದ ಗೌರವವೆಲ್ಲ ಹೊರಟು ಹೋಯ್ತು ಅಂದ.

ಅವತ್ತು ಸಂಜೆ ಆ ಹಿರಿಯ ಪೋಲೀಸ್‌ ಅಧಿಕಾರಿ ಆರ್ಟೂರನ್ನು ಸ್ಟೇಷನ್‌ಗೆ ಕರೆಸಿಕೊಂಡ. ಕೇಸ್‌ ಬಗ್ಗೆ ಮಾತಾಡಲಿಕ್ಕಲ್ಲ, ಬೈಬಲ್‌ ಬಗ್ಗೆ ಹೆಚ್ಚು ಪ್ರಶ್ನೆ ಕೇಳಲಿಕ್ಕೆ. ಅವರು ಮಾತಾಡ್ತಾ ಇರುವಾಗ ಇನ್ನಿಬ್ರು ಫೋಲೀಸರು ಕೂಡ ಬಂದು ಕೂತುಕೊಂಡರು.

ಮಾರನೇ ದಿನ ಆರ್ಟೂರ್‌ ಆ ಪೋಲೀಸ್‌ ಅಧಿಕಾರಿಯನ್ನು ಪುನಃ ಭೇಟಿ ಮಾಡಿ ಬೈಬಲ್‌ ವಿಡಿಯೋಗಳನ್ನು ತೋರಿಸಿದನು. ಆ ಪೋಲೀಸ್‌ ಬೇರೆ ಪೋಲೀಸರನ್ನು ಕೂಡ ವಿಡಿಯೋಗಳನ್ನು ನೋಡಲಿಕ್ಕೆ ಕರೆದ.

ಪಾದ್ರಿಗಳು ರೇಗಾಡಿದ್ರಿಂದ ಒಂದು ಸಲನೂ ಸುವಾರ್ತೆ ಕೇಳಿಸಿಕೊಳ್ಳದಿದ್ದ ಅನೇಕ ಪೋಲೀಸರಿಗೆ ಒಳ್ಳೇ ರೀತಿ ಸಾಕ್ಷಿ ಕೊಡಲಿಕ್ಕೆ ಆಯಿತು. ಯೆಹೋವನ ಸಾಕ್ಷಿಗಳು ಎಂಥವರು ಅಂತ ಸಹ ಅವರಿಗೆ ಗೊತ್ತಾಯಿತು.