ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ಡಾಲ್ಫಿನಿನ ಸೋನಾರ್‌

ಡಾಲ್ಫಿನಿನ ಸೋನಾರ್‌

 ಡಾಲ್ಫಿನ್‌ಗಳು ‘ಕಿಕೀಕ್‌’ ಅನ್ನೋ ಥರ, ಸೀಟಿ ಹೊಡೆಯೋ ಥರ ಬೇರೆ ಬೇರೆ ಶಬ್ಧ ಮಾಡುತ್ತವೆ. ಈ ಶಬ್ಧಗಳ ಪ್ರತಿಧ್ವನಿ ಕೇಳಿಸಿಕೊಂಡು ತಮ್ಮ ವಾತಾವರಣ ತಿಳಿದುಕೊಂಡು ಇವು ಚಲಿಸುತ್ತವೆ. ಈ ಪ್ರಕ್ರಿಯೆಯನ್ನು ಸೋನಾರ್‌ ಎಂದು ಕರೆಯಲಾಗುತ್ತದೆ. ಈ ಸೀಸೆ ಮೂತಿಯ ಡಾಲ್ಫಿನಿನ (ಟರ್ಸಿಆಪ್ಸ್‌ ಟ್ರುಂಕಾಟುಸ್‌) ಈ ಸ್ವಾಭಾವಿಕ ಸೋನಾರ್‌ ಪ್ರಕ್ರಿಯೆ ಕಂಡು ವಿಜ್ಞಾನಿಗಳು ಮೂಕವಿಸ್ಮಿತರಾಗಿದ್ದಾರೆ. ಅವರ ತಂತ್ರಜ್ಞಾನದಿಂದ ಸಾಧಿಸಲಾಗದಿರುವ ವಿಷಯಗಳನ್ನು ಸಾಧಿಸಲು ಈ ಜೀವಿಯ ವೈಶಿಷ್ಟ್ಯವನ್ನು ಗಮನಿಸಿ ಜಲಾಂತರ ಶ್ರವಣ ಯಂತ್ರಗಳನ್ನು ತಯಾರಿ ಮಾಡುತ್ತಿದ್ದಾರೆ.

 ಪರಿಗಣಿಸಿ: ಡಾಲ್ಫಿನಿನ ಸೋನಾರ್‌, ಮರಳಿನಲ್ಲಿ ಅಡಗಿಕೊಂಡಿರುವ ಮೀನುಗಳನ್ನು ಹುಡುಕಲು ಮತ್ತು ಸಮುದ್ರದ ತಳದಲ್ಲಿ ಯಾವುದು ಮೀನು, ಯಾವುದು ಕಲ್ಲು ಎಂದು ವಿಂಗಡಿಸಲು ಸಹಾಯ ಮಾಡುತ್ತದೆ. ಸ್ಕಾಟ್ಲೆಂಡಿನ, ಎಡಿನ್ಬರ್ಗ್‌ನಲ್ಲಿರುವ ಹೆರಿಯಟ್‌ವಾಟ್‌ ವಿಶ್ವವಿದ್ಯಾಲಯದ ಉಪಪ್ರಾಧ್ಯಾಪಕರಾದ ಕೀತ್‌ ಬ್ರೌನ್‌ ಅವರು, ‘ಡಾಲ್ಫಿನಗಳು “ಉಪ್ಪು ನೀರಿನ, ಸಿಹಿ ನೀರಿನ , ಪೆಟ್ರೋಲ್‌ ಇರುವ ಅಥವಾ ಬೇರೆ ದ್ರವವಿರುವ ಕಂಟೇನರ್‌ ಪಾತ್ರೆಗಳ ವ್ಯತ್ಯಾಸವನ್ನು ಸುಮಾರು 33 ಅಡಿ ದೂರದಿಂದಲೇ ಕಂಡುಹಿಡಿಯಬಲ್ಲವು‘ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಇಂಥ ಸಾಮರ್ಥ್ಯಗಳಿರುವ ಉಪಕರಣಗಳನ್ನು ವಿನ್ಯಾಸಿಸಲು ಬಯಸಿದ್ದಾರೆ.

ಸುಮಾರು 33 ಅಡಿ ದೂರದಿಂದಲೇ ಯಾವ ಕಂಟೇನರ್‌ ಪಾತ್ರೆಯಲ್ಲಿ ಯಾವ ದ್ರವವಿದೆ ಎಂಬ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು

 ಡಾಲ್ಫಿನ್‌ಗಳ ಶಬ್ಧ ಮಾಡುವ ಮತ್ತು ಪ್ರತಿಧ್ವನಿಯನ್ನು ಕೇಳಿಸಿಕೊಳ್ಳುವ ಪ್ರಕ್ರಿಯೆಯನ್ನು ಸಂಶೋಧಕರು ಅಧ್ಯಯನ ಮಾಡಿ, ನಕಲು ಮಾಡಲು ಪ್ರಯತ್ನಿಸಿದ್ದಾರೆ. ಪ್ರತಿಫಲವಾಗಿ ಅವರು ಒಂದು ಸೋನಾರ್‌ ಯಂತ್ರವನ್ನು ನಿರ್ಮಿಸಿದರು. ಅದು ಮೂರವರೇ ಅಡಿ ಉದ್ದವಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಒಂದು ಸಿಲಿಂಡರ್‌ ಆಗಿದೆ. ಇದು ರಾಕೆಟ್‌ ಆಕಾರದಲ್ಲಿದ್ದು ಇದನ್ನು ನೀರಿನೊಳಗಿನ ರೋಬೋಟ್‌ ವಾಹನಕ್ಕೆ ಜೋಡಿಸಲಾಗಿರುತ್ತದೆ. ಇದು ಸಮುದ್ರದ ತಳವನ್ನು ಪರೀಕ್ಷಿಸಿ, ಮಣ್ಣಿನಲ್ಲಿ ಹೂಣಿರುವ ವಸ್ತುಗಳನ್ನು ಅಂದರೆ ಕೇಬಲ್‌ಗಳನ್ನು ಮತ್ತು ಪೈಪ್‌ ಲೈನ್‌ಗಳನ್ನು ತಾಕದೆ ಪರೀಕ್ಷಿಸುತ್ತದೆ. ಇದನ್ನು ಅನಿಲ ಮತ್ತು ಎಣ್ಣೆಯ ಕಾರ್ಖಾನೆಗಳಲ್ಲಿ ಉಪಯೋಗಿಸುವ ಯೋಚನೆಯಲ್ಲಿದ್ದಾರೆ. ಡಾಲ್ಫಿನಿನ ಸೋನಾರ್‌ ಅನ್ನು ನೋಡಿ ತಯಾರಿಸಿರುವ ಕೃತಕ ಸೋನಾರ್‌ಗಳು ಈಗಿನ ಸೋನಾರ್‌ಗಳಿಗಿಂತ ಹೆಚ್ಚಿನ ಮಾಹಿತಿ ಶೇಖರಿಸುತ್ತವೆ. ಇದರಿಂದಾಗಿ ನೀರಿನೊಳಗಡೆ ಸಾಧನಗಳನ್ನು ಸೂಕ್ತವಾದ ಕಡೆ ಇಡಲು, ಅವುಗಳಿಗೆ ಆಗಿರುವ ತೊಂದರೆ ಅಥವಾ ಹಾನಿಯನ್ನು ಪತ್ತೆ ಹಚ್ಚಲು ಅಂದ್ರೆ, ಆಯಿಲ್‌ ರಿಂಗ್‌ನಲ್ಲಿರುವ ಬಿರುಕುಗಳು ಮತ್ತು ಪೈಪ್‌ನಲ್ಲಿ ಆಗುವ ಬ್ಲಾಕೇಜ್‌ ಅನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

 ನೀವೇನು ನೆನಸುತ್ತೀರಿ? ಸೀಸೆ ಮೂತಿಯ ಡಾಲ್ಫಿನಿನ ಈ ಸೋನಾರ್‌ ಸಾಮರ್ಥ್ಯ ವಿಕಾಸವಾಗಿ ಬಂತಾ? ಅಥವಾ ಒಬ್ಬ ಸೃಷ್ಟಿಕರ್ತ ಇದನ್ನು ವಿನ್ಯಾಸಿಸಿದನಾ?