ಮಾಹಿತಿ ಇರುವಲ್ಲಿ ಹೋಗಲು

ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?

ಪಿಶಾಚ ನೋಡಲಿಕ್ಕೆ ಹೇಗಿದ್ದಾನೆ?

ಬೈಬಲ್‌ ಕೊಡೋ ಉತ್ತರ

 ಪಿಶಾಚನನ್ನ ನಾವು ನೋಡಲು ಆಗಲ್ಲ, ಏಕೆಂದ್ರೆ ಅವನೊಬ್ಬ ಆತ್ಮಜೀವಿ. ಇದರ ಅರ್ಥ ನಾವು ನೋಡಲಿಕ್ಕೆ ಆಗುವಂಥ ರೂಪ ಅವನಿಗೆ ಇಲ್ಲ.—ಎಫೆಸ 6:11, 12.

 ಪಿಶಾಚ ನೋಡಲಿಕ್ಕೆ ಆಡಿನ ತರ ಇರೋ ಒಂದು ಜೀವಿಯಂತೆ ಚಿತ್ರಕಾರರು ಬಿಡಿಸಿದ್ದಾರೆ. ಅವನಿಗೆ ಕೊಂಬುಗಳು ಬಾಲ ಇರುವಂತೆ, ಕವೆಗೋಲು ಹಿಡ್ಕೊಂಡಿರುವಂತೆ ಚಿತ್ರಿಸಿದ್ದಾರೆ. ಇಂಥ ಚಿತ್ರಗಳು ಮಧ್ಯ ಯುಗದ ಚಿತ್ರಕಾರರ ಕಲ್ಪನೆಗಳಾಗಿವೆ ಅಂತ ಕೆಲವರು ಹೇಳ್ತಾರೆ. ಆ ಚಿತ್ರಕಾರರು ಜನಪದ ಕಥೆ ಮತ್ತು ಪುರಾಣ ಕಥೆಗಳ ಪ್ರಭಾವದಿಂದ ಆ ಚಿತ್ರಗಳನ್ನ ಬಿಡಿಸಿರಬಹುದು.

 ಬೈಬಲ್‌ ಪಿಶಾಚನ ಬಗ್ಗೆ ಯಾವ ಚಿತ್ರಣ ಕೊಡುತ್ತೆ?

 ಬೈಬಲ್‌ ಪಿಶಾಚನನ್ನ ಬೇರೆ ಬೇರೆ ರೀತಿಯಲ್ಲಿ ವರ್ಣಿಸುತ್ತೆ. ಆದ್ರೆ ಇದು ಅವನ ಅಂದಚಂದದ ಬಗ್ಗೆ ಅಲ್ಲ, ಅವನ ಗುಣ ಎಂಥದ್ದು ಅಂತ ತಿಳಿಸುತ್ತೆ. ಪಿಶಾಚನ ಬಗ್ಗೆ ಬೈಬಲ್‌ ಹೇಳೋ ಕೆಲವು ವಿಷ್ಯಗಳು ಏನಂದ್ರೆ,

  •   ಬೆಳಕಿನ ದೂತ. ದೇವರು ಕಲಿಸೋ ವಿಷ್ಯಗಳನ್ನು ಜನ ಕೇಳಬಾರದು, ತಾನು ಹೇಳೋದನ್ನ ಕೇಳಬೇಕಂತ ಪಿಶಾಚ ಏನೋ ಒಳ್ಳೇದು ಮಾಡೋ ತರ ನಾಟಕ ಮಾಡ್ತಾನೆ.—2 ಕೊರಿಂಥ 11:14.

  •   ಗರ್ಜಿಸೋ ಸಿಂಹ. ದೇವರನ್ನು ಆರಾಧಿಸುವವರ ಮೇಲೆ ಕ್ರೂರ ದಾಳಿ ಮಾಡ್ತಾನೆ.—1 ಪೇತ್ರ 5:8.

  •   ಮಹಾ ಘಟಸರ್ಪ. ಅವನು ಭಯಾನಕ, ಬಲಿಷ್ಠ, ವಿನಾಶಕ.—ಪ್ರಕಟನೆ 12:9.