ಮಾಹಿತಿ ಇರುವಲ್ಲಿ ಹೋಗಲು

ಪವಿತ್ರಾತ್ಮ ಅಂದ್ರೇನು?

ಪವಿತ್ರಾತ್ಮ ಅಂದ್ರೇನು?

ಬೈಬಲ್‌ ಕೊಡೋ ಉತ್ತರ

 ಪವಿತ್ರಾತ್ಮ ದೇವರ ಸಕ್ರಿಯ ಶಕ್ತಿ ಅಥವಾ ದೇವರ ಶಕ್ತಿಯಾಗಿದೆ. (ಮೀಕ 3:8; ಲೂಕ 1:35) ದೇವರು ಅಂದ್ಕೊಂಡಿದ್ದನ್ನ ಮಾಡೋಕೆ ತನ್ನ ಪವಿತ್ರಶಕ್ತಿನ ಎಲ್ಲಿ ಬೇಕಾದ್ರೂ, ಹೇಗೆ ಬೇಕಾದ್ರೂ ಬಳಸ್ತಾನೆ.—ಕೀರ್ತನೆ 104:30; 139:7.

 ಬೈಬಲಿನಲ್ಲಿ “ಆತ್ಮ” ಅನ್ನೋ ಪದಕ್ಕೆ ಹೀಬ್ರುವಿನಲ್ಲಿ ರೂಆಖ್‌ ಮತ್ತು ಗ್ರೀಕ್‌ನಲ್ಲಿ ನ್ಯೂಮ ಅಂತ ಕರೆಯಲಾಗಿದೆ. ಈ ಪದಗಳು ಹೆಚ್ಚಾಗಿ ದೇವರ ಸಕ್ರಿಯ ಶಕ್ತಿ ಅಥವಾ ಪವಿತ್ರಶಕ್ತಿಯನ್ನ ಸೂಚಿಸುತ್ತದೆ. (ಆದಿಕಾಂಡ 1:2) ಬೈಬಲ್‌ ಈ ಪದವನ್ನು ಬೇರೆ ರೀತಿಯಲ್ಲೂ ಉಪಯೋಗಿಸುತ್ತೆ. ಉದಾಹರಣೆಗೆ ‘ಆತ್ಮ’ ಅನ್ನೋ ಪದವನ್ನ ಈ ಮುಂದಿನ ವಿಷ್ಯಗಳನ್ನ ಸೂಚಿಸಲು ಸಹ ಬಳಸಲಾಗಿದೆ:

 ಈ ಎಲ್ಲಾ ವಿಷ್ಯಗಳು ಮನುಷ್ಯರ ಕಣ್ಣಿಗೆ ಕಾಣಿಸದೇ ಇದ್ರೂ ಅದ್ರಿಂದ ಆಗೋ ಪರಿಣಾಮನ ನೋಡಬಹುದು. ಪವಿತ್ರಶಕ್ತಿನ ನಾವು ಗಾಳಿಗೆ ಹೋಲಿಸಬಹುದು. “ಗಾಳಿ ಕಣ್ಣಿಗೆ ಕಾಣೋದಿಲ್ಲ, ಅದನ್ನ ಮುಟೋಕೂ ಆಗಲ್ಲ ಆದರೆ ಅದಕ್ಕಿರೋ ಶಕ್ತಿನ ನಾವು ಅನುಭವಿಸಬಹುದು. ಅದೇ ತರ ದೇವರ ಪವಿತ್ರಶಕ್ತಿನ ನಾವು ನೋಡೋಕೆ ಆಗದೆ ಇದ್ರೂ ಅದಕ್ಕೆ ತುಂಬ ಶಕ್ತಿ ಇರುತ್ತೆ.”—ಡಬ್ಲ್ಯೂ. ಇ. ವೈನ್‌ರ ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌.

 ಬೈಬಲ್‌ ಪವಿತ್ರಶಕ್ತಿಯನ್ನ ದೇವರ ‘ಕೈಗಳಿಗೆ’ ಅಥವಾ ‘ಬೆರಳುಗಳಿಗೆ’ ಹೋಲಿಸಿ ಮಾತಾಡುತ್ತೆ. (ಕೀರ್ತನೆ 8:3; 19:1; ಪಾದಟಿಪ್ಪಣಿ, ಲೂಕ 11:20; ಪಾದಟಿಪ್ಪಣಿ, ಹೋಲಿಸಿ ಮತ್ತಾಯ 12:28) ಒಬ್ಬ ಕುಶಲಕರ್ಮಿ ತನ್ನ ಕೆಲಸ ಮಾಡೋಕೆ ಹೇಗೆ ತನ್ನ ಕೈ ಮತ್ತು ಬೆರಳುಗಳನ್ನ ಉಪಯೋಗಿಸುತ್ತಾನೋ ಅದೇ ತರ ದೇವರು ತನ್ನ ಪವಿತ್ರಶಕ್ತಿಯನ್ನ ಉಪಯೋಗಿಸಿ ಈ ಕೆಲಸಗಳನ್ನೆಲ್ಲ ಮಾಡಿದ:

ಪವಿತ್ರಶಕ್ತಿ ಒಬ್ಬ ವ್ಯಕ್ತಿಯಲ್ಲ

 ಬೈಬಲ್‌ ಪವಿತ್ರ ಶಕ್ತಿಯನ್ನ ದೇವರ ‘ಕೈಗಳು,’ ‘ಬೆರಳುಗಳು,’ ಅಥವಾ ‘ಉಸಿರು’ ಅಂತ ಕರೆಯುವ ಮೂಲಕ ಅದು ವ್ಯಕ್ತಿಯಲ್ಲ ಅಂತ ಸ್ಪಷ್ಟಪಡಿಸುತ್ತೆ. (ವಿಮೋಚನಕಾಂಡ 15:8, 10) ಒಬ್ಬ ಕೆಲಸಗಾರ ತನ್ನ ಮೆದುಳು ಮತ್ತು ದೇಹದ ಸಹಾಯ ಇಲ್ಲದೇ ಬರೀ ಕೈಯಲ್ಲಿ ಯಾವ ಕೆಲಸನೂ ಮಾಡೋಕೆ ಆಗಲ್ಲ. ಅದೇ ತರ ದೇವರ ಪವಿತ್ರಶಕ್ತಿ ಆತನು ಮಾರ್ಗದರ್ಶಿಸಿದಂತೆ ಕೆಲಸ ಮಾಡುತ್ತೆ. (ಲೂಕ 11:13) ಬೈಬಲ್‌ ದೇವರ ಪವಿತ್ರಶಕ್ತಿಯನ್ನ ನೀರು, ನಂಬಿಕೆ ಮತ್ತು ಜ್ಞಾನಕ್ಕೆ ಕೂಡ ಹೋಲಿಸಿ ಮಾತಾಡಿದೆ. ಈ ಎಲ್ಲಾ ಹೋಲಿಕೆಗಳಿಂದ ಒಂದು ವಿಷಯ ಗೊತ್ತಾಗುತ್ತೆ. ಪವಿತ್ರಶಕ್ತಿ ವ್ಯಕ್ತಿ ಅಲ್ಲ, ಅದು ದೇವರ ಶಕ್ತಿ.—ಯೆಶಾಯ 44:3; ಅಪೊಸ್ತಲರ ಕಾರ್ಯ 6:5; 2 ಕೊರಿಂಥ 6:6.

 ದೇವರ ಹೆಸರು ಯೆಹೋವ ಮತ್ತು ಆತನ ಮಗನ ಹೆಸರು ಯೇಸು ಕ್ರಿಸ್ತ ಅಂತ ಬೈಬಲ್‌ ಹೇಳುತ್ತೆ. ಆದರೆ ಪವಿತ್ರಶಕ್ತಿಗೆ ಒಂದು ಹೆಸರು ಇದೆ ಅಂತ ಎಲ್ಲೂ ಹೇಳಿಲ್ಲ. (ಯೆಶಾಯ 42:8; ಲೂಕ 1:31) ನಂಬಿಗಸ್ತನಾಗಿ ಪ್ರಾಣ ಬಿಟ್ಟ ಸ್ತೆಫನ, ಸ್ವರ್ಗದ ಒಂದು ದರ್ಶನ ನೋಡಿದಾಗ ಅವನು ಇಬ್ಬರು ವ್ಯಕ್ತಿಗಳನ್ನ ನೋಡಿದನೇ ಹೊರತು ಮೂವರನ್ನಲ್ಲ. ಅದ್ರ ಬಗ್ಗೆ ಬೈಬಲ್‌ ಹೇಳೋದು, “ಅವನು ಪವಿತ್ರಶಕ್ತಿಯನ್ನ ಪಡ್ಕೊಂಡು ಆಕಾಶದ ಕಡೆ ನೋಡ್ತಾ ಇದ್ದ. ದೇವರು ಉನ್ನತ ಸ್ಥಾನದಲ್ಲಿ ಕೂತಿರೋದನ್ನ ಮತ್ತು ದೇವ್ರ ಬಲಗಡೆಯಲ್ಲಿ ಯೇಸು ನಿಂತಿರೋದನ್ನ ನೋಡಿದ.” (ಅಪೊಸ್ತಲರ ಕಾರ್ಯ 7:55) ಆ ದರ್ಶನವನ್ನ ನೋಡಲು ದೇವರ ಪವಿತ್ರಶಕ್ತಿ ಸ್ತೆಫನನಿಗೆ ಸಹಾಯ ಮಾಡ್ತು.

ಪವಿತ್ರಶಕ್ತಿ ಅಥವಾ ಪವಿತ್ರಾತ್ಮದ ಬಗ್ಗೆ ಇರೋ ತಪ್ಪಾಭಿಪ್ರಾಯಗಳು

 ತಪ್ಪಾಭಿಪ್ರಾಯಗಳು: ಸತ್ಯವೇದ ಬೈಬಲಿನ ಮತ್ತಾಯ 28:19, 20 ರ ಪ್ರಕಾರ ತಂದೆ, ಮಗ ಮತ್ತು ಪವಿತ್ರಾತ್ಮ ಒಂದೇ ಅಂತ ಹೇಳುತ್ತೆ.

 ಸತ್ಯ: ಸತ್ಯವೇದ ಬೈಬಲಿನ ಮತ್ತಾಯ 28:19, 20 ರಲ್ಲಿ ತಂದೆ, ಮಗ ಮತ್ತು ಪವಿತ್ರಾತ್ಮದ ಬಗ್ಗೆ ಒಂದೇ ಕಡೆ ಮಾತಾಡಲಾಗಿದೆ. ಇದನ್ನ ತುಂಬ ಜನ ತ್ರಿಯೇಕ ಅಂತ ಹೇಳ್ತಾರೆ. ನೀವೇ ಈ ವಚನವನ್ನ ಒಂದು ಸಲ ಓದಿ ನೋಡಿ. ಈ ವಚನದ ಯಾವುದಾದ್ರೂ ಒಂದು ಸಾಲಿನಲ್ಲಿ, ತಂದೆ, ಮಗ ಮತ್ತು ಪವಿತ್ರಾತ್ಮ ಒಂದೇ ಅಂತ ಹೇಳುತ್ತಾ? ವಯಸ್ಸು, ಶಕ್ತಿ, ಸ್ಥಾನ, ವಿವೇಕದಲ್ಲಿ ಸರಿ-ಸಮಾನರು ಅಂತ ಹೇಳುತ್ತಾ? ಇಲ್ಲ, ಆ ತರ ಹೇಳಲ್ಲ. ಅದೇ ತರ ಬೇರೆ ವಚನಗಳಲ್ಲೂ ತಂದೆ, ಮಗ ಮತ್ತು ಪವಿತ್ರಾತ್ಮ ಅಂತ ಒಂದೇ ಕಡೆ ಹಾಕಿದ ಮಾತ್ರಕ್ಕೆ, ಅದು ತ್ರಿಯೇಕ ಆಗಲ್ಲ.

 ತಪ್ಪಾಭಿಪ್ರಾಯಗಳು: ಬೈಬಲ್‌ನಲ್ಲಿ ಪವಿತ್ರಾತ್ಮವನ್ನ ‘ಅವನು’ ‘ಇವನು’ ಅಂತ ಕರೆಯುತ್ತೆ. ಪವಿತ್ರಾತ್ಮ ಒಬ್ಬ ವ್ಯಕ್ತಿ ಅಂತ ಹೇಳೋಕೆ ಇದೇ ಸಾಕ್ಷಿ.

 ನಿಜ: ಕೆಲವು ವಚನಗಳಲ್ಲಿ ಪವಿತ್ರಾತ್ಮವನ್ನ ಅಥವಾ ಪವಿತ್ರಶಕ್ತಿಯನ್ನ ‘ಅವನು’ ‘ಇವನು’ ಅಂತ ಕರೆಯುತ್ತೆ. ಅಷ್ಟು ಮಾತ್ರಕ್ಕೆ ಪವಿತ್ರಾತ್ಮ ಒಬ್ಬ ವ್ಯಕ್ತಿ ಆಗ್ಬಿಡಲ್ಲ. ಬೈಬಲ್‌ನಲ್ಲಿ ವಿವೇಕ, ಸಾವು ಮತ್ತು ಪಾಪವನ್ನ ಕೂಡ ವ್ಯಕ್ತೀಕರಿಸಿ ಮಾತಾಡಲಾಗಿದೆ. (ಜ್ಞಾನೋಕ್ತಿ 1:20; ರೋಮನ್ನರಿಗೆ 5:17, 21) ಉದಾಹರಣೆಗೆ, ವಿವೇಕ ‘ಕೆಲಸ’ ಮಾಡುತ್ತೆ ಅದಕ್ಕೆ ‘ಮಕ್ಕಳು’ ಇವೆ ಅಂತ ಹೇಳುತ್ತೆ. ಅಷ್ಟೇ ಅಲ್ಲ, ಪಾಪ ಮೋಸ ಮಾಡುತ್ತೆ, ಕೊಲೆ ಮಾಡುತ್ತೆ, ಅದಕ್ಕೆ ದುರಾಸೆ ಇದೆ ಅಂತ ಕೂಡ ಹೇಳುತ್ತೆ. ಹೀಗೆ ಹೇಳಿದ ಮಾತ್ರಕ್ಕೆ ವಿವೇಕ ಮತ್ತು ಪಾಪ ಒಂದು ವ್ಯಕ್ತಿ ಆಗ್ಬಿಡಲ್ಲ.—ಮತ್ತಾಯ 11:19; ಲೂಕ 7:35; ರೋಮನ್ನರಿಗೆ 7:8, 11.

 ಅದೇ ತರ ಯೇಸು ಪವಿತ್ರಶಕ್ತಿ ಬಗ್ಗೆ ಮಾತಾಡುವಾಗ ಅದನ್ನ ‘ಸಹಾಯಕ,’ (ಪ್ಯಾರಕ್ಲಿಟ್‌) ಸಾಕ್ಷಿ ಹೇಳುವವನು, ಮಾರ್ಗದರ್ಶನ ಕೊಡುವವನು, ಮಾತು ಆಡುವವನು, ಕೇಳಿಸಿಕೊಳ್ಳುವವನು, ತಿಳಿಸುವವನು, ಮಹಿಮೆಪಡಿಸುವವನು, ಸ್ವೀಕರಿಸುವವನು ಅಂತ ವ್ಯಕ್ತೀಕರಿಸಿ ಮಾತಾಡಿದ್ದಾನೆ. ಇಲ್ಲಿ ‘ಸಹಾಯಕ’ ಅನ್ನೋ ಪದಕ್ಕೆ ಪುಲ್ಲಿಂಗ ರೂಪ ಬಳಸಿ ‘ಅವನು’ ‘ಇವನು’ ಅಂತ ಯೇಸು ಮಾತಾಡಿದ್ದಾನೆ. (ಯೋಹಾನ 16:7-15) ಹೀಗೆ ಮಾಡೋಕೆ ಕಾರಣ, ‘ಸಹಾಯಕ’ ಅನ್ನೋ ಪದಕ್ಕೆ ಗ್ರೀಕ್‌ ವ್ಯಾಕರಣದಲ್ಲಿ (ಪಾರಾಕ್ಲಿಟೋಸ್‌) ಪುಲ್ಲಿಂಗ ನಾಮಪದ ಮತ್ತು ಪುಲ್ಲಿಂಗ ಸರ್ವನಾಮ ಮಾತ್ರ ಇದೆ. ಆದರೆ ಯೋಹಾನ ಪವಿತ್ರಾತ್ಮದ ಬಗ್ಗೆ ಬರೆದಾಗ ನ್ಯೂಮ (ಅದು) ಅನ್ನೋ ನಪುಂಸಕ ನಾಮಪದ ಬಳಸಿ ಮಾತಾಡಿದ್ದಾನೆ. ಇದ್ರಿಂದ ನಮಗೆ ಏನ್‌ ಗೊತ್ತಾಗುತ್ತೆ? ‘ಸಹಾಯಕ’ ಅನ್ನೋ ಪದಕ್ಕೆ ಗ್ರೀಕ್‌ನಲ್ಲಿ ಪುಲ್ಲಿಂಗ ಮತ್ತು ನಪುಂಸಕ ರೂಪ ಎರಡೂ ಬಳಸಿ ಮಾತಾಡಿರೋದ್ರಿಂದ ಪವಿತ್ರಾತ್ಮ ಒಬ್ಬ ವ್ಯಕ್ತಿ ಆಗ್ಬಿಡಲ್ಲ. ಯಾಕಂದರೆ ಗ್ರೀಕ್‌ ವ್ಯಾಕರಣದಲ್ಲಿ ಎಲ್ಲ ಪದಗಳಿಗೆ ಇದೇ ನಿಯಮನ ಬಳಸಿದ್ದಾರೆ.—ಯೋಹಾನ 14:16, 17.

 ತಪ್ಪಾಭಿಪ್ರಾಯಗಳು: ಪವಿತ್ರಾತ್ಮ ಒಬ್ಬ ವ್ಯಕ್ತಿ. ಅದಕ್ಕೆ ನಾವು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ತಗೊಳೋದು.

 ನಿಜ: ಬೈಬಲ್‌ ಕೆಲವು ಸಾರಿ “ಹೆಸರು” ಅನ್ನೋ ಪದನ ಅಧಿಕಾರಕ್ಕೆ ಸೂಚಿಸಿ ಮಾತಾಡುತ್ತೆ. (ಧರ್ಮೋಪದೇಶಕಾಂಡ 18:5, 19-22; ಎಸ್ತೇರ್‌ 8:10) ಈ ತರ ಹೋಲಿಕೆಯನ್ನ ನಾವು ಕನ್ನಡದಲ್ಲಿ ಕೂಡ ಮಾಡ್ತೀವಿ. ಉದಾಹರಣೆಗೆ, “ಕಾನೂನಿನ ಹೆಸರಿನಲ್ಲಿ” ಅಂತ ಹೇಳಿದ ಮಾತ್ರಕ್ಕೆ ಕಾನೂನು ಒಬ್ಬ ವ್ಯಕ್ತಿ ಆಗ್ಬಿಡಲ್ಲ. ಅದೇ ತರ “ಪವಿತ್ರಾತ್ಮದ ಹೆಸರಿನಲ್ಲಿ” ಅಂತ ಹೇಳಿದ ಮಾತ್ರಕ್ಕೆ ಪವಿತ್ರಾತ್ಮ ಒಬ್ಬ ವ್ಯಕ್ತಿ ಆಗಲ್ಲ. ಪವಿತ್ರಾತ್ಮದ “ಹೆಸರಿನಲ್ಲಿ” ದೀಕ್ಷಾಸ್ನಾನ ಪಡಿಯೋದು ಅಂದ್ರೆ ಒಬ್ಬ ವ್ಯಕ್ತಿ ದೇವರ ಚಿತ್ತದ ಪ್ರಕಾರ ನಡೆಯೋದರಲ್ಲಿ ಪವಿತ್ರಾತ್ಮದ ಪಾತ್ರ ಮತ್ತು ಅದ್ರ ಶಕ್ತಿಯನ್ನ ತನ್ನ ಜೀವನದಲ್ಲಿ ಒಪ್ಕೊಳ್ತಾನೆ ಅಂತ ಅರ್ಥ.—ಮತ್ತಾಯ 28:19.

 ತಪ್ಪಾಭಿಪ್ರಾಯಗಳು: ಅಪೊಸ್ತಲರು ಮತ್ತು ಮೊದಲನೇ ಶತಮಾನದ ಬೇರೆ ಶಿಷ್ಯರು ಪವಿತ್ರಾತ್ಮವನ್ನ ಒಬ್ಬ ವ್ಯಕ್ತಿ ಅಂತ ನಂಬ್ತಿದ್ರು.

 ನಿಜ: ಬೈಬಲ್‌ ಆಗಲಿ, ಇತಿಹಾಸ ಆಗಲಿ ಇದು ನಿಜ ಅಂತ ಹೇಳಲ್ಲ. ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ಹೀಗೆ ಹೇಳುತ್ತೆ: “ಸಾ.ಶ. 381 ರಂದು ಕಾನ್ಸ್‌ಸ್ಟೆಂಟಿನೋಪಲ್‌ನಲ್ಲಿ ನಡೆದ ಸಭೆಯಲ್ಲಿ ಪವಿತ್ರಾತ್ಮ ಒಬ್ಬ ವ್ಯಕ್ತಿ ಅನ್ನೋ ನಂಬಿಕೆ ಬಂತು.” ಇದು ಅಪೊಸ್ತಲರು ಸತ್ತು ಸುಮಾರು 250 ವರ್ಷಗಳ ನಂತರ ಬಂದ ನಂಬಿಕೆ. ಹಾಗಾಗಿ ಅಪೊಸ್ತಲರಾಗಲಿ, ಮೊದಲನೇ ಶತಮಾನದ ಬೇರೆ ಶಿಷ್ಯರಾಗಲಿ ಪವಿತ್ರಾತ್ಮ ಒಬ್ಬ ವ್ಯಕ್ತಿ ಅಂತ ನಂಬಿರಲಿಲ್ಲ ಅಥವಾ ಬೇರೆಯವರಿಗೂ ಅದನ್ನ ಬೋಧಿಸಲಿಲ್ಲ.